newsfirstkannada.com

ವಡಾ ಪಾವ್ ಮಾರಾಟ ಮಾಡಿ ದಿನಕ್ಕೆ ₹40 ಸಾವಿರ ಗಳಿಸೋ ಬಿಗ್​ಬಾಸ್ ಸ್ಪರ್ಧಿ.. ಈ ಸುಂದರಿ ಬಗ್ಗೆ ಗೊತ್ತಾ?

Share :

Published June 23, 2024 at 4:15pm

Update June 23, 2024 at 5:35pm

  ಈ ಸಲದ ಬಿಗ್ ಬಾಸ್​ಗೆ ಆಯ್ಕೆಯಾಗಿರುವ ವಡಾ ಪಾವ್ ಗರ್ಲ್ ​

  ಬಿಗ್​ಬಾಸ್​ ಮನೆಯಲ್ಲಿ ಮಾತನಾಡುವಾಗ ಬ್ಯುಸಿನೆಸ್ ಬಗ್ಗೆ ಮಾತು

  ವಡಾ ಪಾವ್ ಮಾರಾಟ ಮಾಡಿ ತಿಂಗಳಿಗೆ ಲಕ್ಷ ಲಕ್ಷ ಗಳಿಸೋ ಸ್ಪರ್ಧಿ

ಬಹುನಿರೀಕ್ಷಿತ ರಿಯಾಲಿಟಿ ಶೋ ಹಿಂದಿಯ ಬಿಗ್​​ಬಾಸ್ ಒಟಿಟಿ ಸೀಸನ್-​​ 3 ಈಗಾಗಲೇ ಆರಂಭವಾಗಿದೆ. ಸ್ಪರ್ಧಿಗಳು ಬಿಗ್​ಬಾಸ್​ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಬಾಲಿವುಡ್​ನ ಸ್ಟಾರ್ ನಟ ಅನಿಲ್ ಕಪೂರ್ ಇದೇ ಮೊದಲ ಬಾರಿಗೆ ‘ಬಿಗ್​ಬಾಸ್‌’ ಅನ್ನು ನಡೆಸಿಕೊಡುತ್ತಿದ್ದಾರೆ. ಶೋಗೆ ಆಶ್ಚರ್ಯಕರ ರೀತಿಯ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಈ ಬಿಗ್​ ಬಾಸ್​ಗೆ ಆಯ್ಕೆಯಾದ ವಡಾ ಪಾವ್ ಗರ್ಲ್ ಎಂದೇ ಖ್ಯಾತಿಯಾದ ಚಂದ್ರಿಕಾ ದೀಕ್ಷಿತ್ ತನ್ನ ದಿನದ ಹಣದ ಗಳಿಕೆಯ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ: ಲಾಂಗ್ ಹಿಡಿದು ಇನ್​​ಸ್ಟಾದಲ್ಲಿ ವಿಡಿಯೋ​ ಶೇರ್​.. ಜನರನ್ನ ಹೆದರಿಸ್ತಿದ್ದ ಇಬ್ಬರು ಕಿರಾತಕರು ಅರೆಸ್ಟ್​

ಈ ಸಲದ ಬಿಗ್​ ಬಾಸ್ ಸ್ಪರ್ಧಿ ಚಂದ್ರಿಕಾ ದೀಕ್ಷಿತ್ ನೋಡುವುದಕ್ಕೆ ಸಖತ್ ಬ್ಯೂಟಿಯಾಗಿದ್ದಾರೆ. ಇದರ ಜೊತೆಗೆ ಕೋಪ, ಮಾತು ಎಲ್ಲವೂ ಈಕೆಗೆ ಜಾಸ್ತಿನೆ. ಹೀಗಾಗಿಯೇ ಈ ಬ್ಯೂಟಿಯನ್ನು ಬಿಗ್​ಬಾಸ್​ಗೆ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ ಎನ್ನುವ ಜನರ ಪ್ರಶ್ನೆಗಳು ಬಂದಿದ್ವು. ಆದರೆ ಈ ಎಲ್ಲದ ಬಗ್ಗೆ ಬಿಗ್​ಬಾಸ್​ ಮನೆಯಲ್ಲಿ ಮಾತನಾಡಿರುವ ಚಂದ್ರಿಕಾ ದೀಕ್ಷಿತ್ ಅವರು, ವಡಾ ಪಾವ್ ಮಾರಾಟ ಮಾಡಿ ಒಂದು ದಿನಕ್ಕೆ ಬರೋಬ್ಬರಿ 40 ಸಾವಿರ ರೂಪಾಯಿಗಳನ್ನು ಗಳಿಸುತ್ತೇನೆ. ಇದಕ್ಕಾಗಿ ನಾನು ತುಂಬಾ ಕಷ್ಟ ಪಡುತ್ತೇನೆ. ನೀವು ಕಷ್ಟಪಟ್ಟರೇ ಒಳ್ಳೆಯ ಫಲ ಸಿಗುತ್ತದೆ. ಯಾವುದೇ ಕಾರಣಕ್ಕೂ ನೀವು ಸ್ಮಾರ್ಟ್​ಫೋನ್, ನೆಟ್​ಫ್ಲಿಕ್ಸ್​ ಅಂತವುಗಳನ್ನ ಬಳಸಬೇಡಿ. ಬೆಳಗ್ಗೆ ಎದ್ದ ತಕ್ಷಣ ಹೊರಗಡೆ ಹೋಗಿ ನಿಮಗಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗಿಲ್​​​ಕ್ರಿಸ್ಟ್​​ರಂತೆ ​ಮೋಸ್ಟ್ ಡೇಂಜರಸ್ ಪಂತ್​.. ರಿಷಬ್ ಡೈನಾಮಿಕ್ ಬ್ಯಾಟಿಂಗ್, ಕೀಪಿಂಗ್ ಹೇಗಿರುತ್ತೆ?

ಚಂದ್ರಿಕಾ ದೀಕ್ಷಿತ್ ಅವರು ಮಹಾರಾಷ್ಟ್ರದ ಫೇಮಸ್​ ವಡಾ ಪಾವ್ ಅನ್ನು ದೆಹಲಿ ಬೀದಿಯಲ್ಲಿ ಮಾರಾಟ ಮಾಡ್ತಾರೆ. ವಡಾ ಪಾವ್ ಮಾರಾಟ ಮಾಡುತ್ತಲೇ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಹೀಗಾಗಿ ಇವರು ಈ ಸಲದ ಹಿಂದಿಯ ಬಿಗ್​ಬಾಸ್​ ಒಟಿಟಿ ಸೀಸನ್- 3ಯ ಸ್ಪರ್ಧಿಯಾಗಿದ್ದಾರೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ಜೊತೆ ನಡೆದ ಮಾತುಕತೆಯಲ್ಲಿ ಚಂದ್ರಿಕಾ ದೀಕ್ಷಿತ್ ತಮ್ಮ ದಿನದ ಗಳಿಕೆ 40 ಸಾವಿರ ಎಂದು ಹೇಳಿದ್ದಾರೆ. ಇದನ್ನು ಕೇಳಿರುವ ಸಹ ಸ್ಪರ್ಧಿಗಳು ಕೂಡ ಒಂದು ಕ್ಷಣ ಶಾಕ್​ಗೆ ಒಳಗಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಡಾ ಪಾವ್ ಮಾರಾಟ ಮಾಡಿ ದಿನಕ್ಕೆ ₹40 ಸಾವಿರ ಗಳಿಸೋ ಬಿಗ್​ಬಾಸ್ ಸ್ಪರ್ಧಿ.. ಈ ಸುಂದರಿ ಬಗ್ಗೆ ಗೊತ್ತಾ?

https://newsfirstlive.com/wp-content/uploads/2024/06/BIGG_BOSS_CHANDRIKA.jpg

Load More