newsfirstkannada.com

×

ವಾಲ್ಮೀಕಿ ಗುರುಪೀಠದಲ್ಲಿ ಅನೈತಿಕ ಚಟುವಟಿಕೆ ನಡೀತಿದ್ಯಾ?; ಪ್ರಸನ್ನಾನಂದಪುರಿ ಸ್ವಾಮೀಜಿಗೆ ಮುಖಂಡರ ತರಾಟೆ

Share :

Published August 13, 2023 at 12:47pm

    ಮಠದಲ್ಲಿ ಇಂತಹ ಕೃತ್ಯಗಳಿಗೆ ಯಾಕೆ ಅವಕಾಶ ಕೊಟ್ಟಿದ್ದೀರಿ?

    ವಾಲ್ಮೀಕಿ ಮಹಾಸಭಾದ ಮುಖಂಡರಿಂದಲೇ ಖಡಕ್ ಎಚ್ಚರಿಕೆ

    ಬೇರೆ ಸಮುದಾಯದವರನ್ನ ಜೊತೆಗೆ ಇಟ್ಟುಕೊಂಡಿದ್ದು ಯಾಕೆ?

ದಾವಣಗೆರೆ: ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಮಠದಲ್ಲಿ ವ್ಯಕ್ತಿಯೊಬ್ಬ ಮಹಿಳೆಯರ ಜೊತೆ ಇರುವುದನ್ನ ನಾವು ಕಣ್ಣಾರೆ ಕಂಡಿದ್ದೇವೆ. ಮಠದಲ್ಲಿ ಇಂತಹ ಅಸಹ್ಯ ಕೃತ್ಯಗಳಿಗೆ ಯಾಕೆ ಅವಕಾಶ ಕೊಟ್ಟಿದ್ದೀರಿ? ಮಠದ ಎಲ್ಲಾ ಲೋಪದೋಷಗಳು ಮುಂದಿನ 20 ದಿನಗಳೊಳಗೆ ಸರಿಯಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಕರ್ನಾಟಕ ವಾಲ್ಮೀಕಿ ಮಹಾಸಭಾದ ಯುವ ಘಟಕ ಹಾಗೂ ಸಮಾಜದ ಮುಖಂಡರು ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಗುರುಪೀಠವಿದೆ. ಈ ಮಠಕ್ಕೆ ರಾಜ್ಯದ ವಿವಿಧ ಜಿಲ್ಲೆಗಳ ವಾಲ್ಮೀಕಿ ಸಮಾಜದ ಮುಖಂಡರು ಆಗಮಿಸಿದ್ದು ಸ್ವಾಮೀಜಿ ವಿರುದ್ಧ ಹಲವು ಆರೋಪ ಮಾಡಿದ್ದಾರೆ. ನಿಮ್ಮ ಹಿಂಬಾಲಕರನ್ನಾಗಿ ಬೇರೆ ಸಮುದಾಯದವರನ್ನ ಯಾಕೆ ಇಟ್ಟುಕೊಂಡಿದ್ದೀರಿ? ಇದರಿಂದ ಮಠದ ಮತ್ತು ಸಮಾಜದ ಘನತೆ ಹಾಳಾಗುತ್ತಿದೆ. ಕೊಪ್ಪಳದಲ್ಲಿರುವ ಮಠದ ಬೆಳ್ಳಿಯನ್ನ ಯಾರನ್ನ ಕೇಳಿ ಮಾರಾಟ ಮಾಡಿದ್ದೀರಿ? ಹೀಗೆಂದು ಸಮಾಜದ ಮುಖಂಡರು ಪ್ರಸನ್ನಾನಂದ ಪುರಿ ಶ್ರೀಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಾಜದ ಮುಖಂಡರು ಕೇಳಿದ ಪ್ರಶ್ನೆಗಳಿಗೆ ಸ್ವಾಮೀಜಿಗಳು ಮೌನವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹೀಗೆ ಪ್ರಸನ್ನಾನಂದಪುರಿ ಸ್ವಾಮೀಜಿಗೆ ತರಾಟೆ ತೆಗೆದುಕೊಂಡ ವಾಲ್ಮೀಕಿ ಸಮಾಜದ ಮುಖಂಡರು ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ. ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಶ್ರೀ ಸಮಾಜದವರನ್ನೇ ಕಡೆಗಣಿಸುತ್ತಿದ್ದಾರೆ. ಕೂಡಲೇ ಈ ನಡವಳಿಕೆಯನ್ನು ಸರಿ ಮಾಡಿಕೊಳ್ಳುವಂತೆ ಸ್ವಾಮೀಜಿಗೆ ಸೂಚನೆ ನೀಡಲಾಗಿದೆ. 20 ದಿನಗಳೊಳಗೆ ಎಲ್ಲಾ ಲೊಪದೋಷ ಸರಿಪಡಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಸಮಾಜದ ಮುಖಂಡರು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಲ್ಮೀಕಿ ಗುರುಪೀಠದಲ್ಲಿ ಅನೈತಿಕ ಚಟುವಟಿಕೆ ನಡೀತಿದ್ಯಾ?; ಪ್ರಸನ್ನಾನಂದಪುರಿ ಸ್ವಾಮೀಜಿಗೆ ಮುಖಂಡರ ತರಾಟೆ

https://newsfirstlive.com/wp-content/uploads/2023/08/Valmiki-Swamiji.jpg

Load More