newsfirstkannada.com

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ.. ಲೆಕ್ಕಕ್ಕೆ ಸಿಗದ 39 ಕೋಟಿ ಹಿಂದೆ ಬಿದ್ದ ಎಸ್​ಐಟಿ!

Share :

Published June 30, 2024 at 5:40am

  ಬಾರ್​, ಚಿನ್ನದ‌ ಅಂಗಡಿಗಳಿಗೆ ವರ್ಗಾವಣೆ ಆಗಿದ್ದ 10 ಕೋಟಿ ಅಧಿಕಾರಿಗಳ ವಶಕ್ಕೆ

  5 ಕೋಟಿಯಂತೆ 20 ಕೋಟಿಗೂ ಅಧಿಕ ಹಣ ವರ್ಗಾವಣೆ ಬಗ್ಗೆ ವಿಚಾರ ಬೆಳಕಿಗೆ

  ವಿಜಯ್ ಕೃಷ್ಣ ಮತ್ತು ನವೀನ್​ ಎಂಬುವರಿಂದ ಕೆ.ಪಿ.ಅಗ್ರಹಾರ ಠಾಣೆಯಲ್ಲಿ FIR ದಾಖಲು

ವಾಲ್ಮೀಕಿ ನಿಗಮದ ಹಗರಣ ಬಗೆದಷ್ಟೂ ಬಯಲಾಗ್ತಿದೆ. ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಇರಿಸಿದ್ದ ಹಣ ಹೊಡೆಯಲು ಹೇಗೆಲ್ಲಾ ಪ್ಲಾನ್ ನಡೆದಿತ್ತು ಅನ್ನೋ ಸತ್ಯ ಬಯಲಾಗಿದೆ. ಕಂಪನಿ ಮಾಲೀಕರ ಹೆಸರಲ್ಲಿ ನಕಲಿ ಖಾತೆ ತೆರೆದು ಹಣ ವರ್ಗಾವಣೆ ಮಾಡಿರುವ ವಿಚಾರ ಬಯಲಾಗಿದೆ. ಮತ್ತೊಂದೆಡೆ ಎಸ್​​ಐಟಿ ತಂಡ ಲೆಕ್ಕಕ್ಕೆ ಸಿಗದ 39 ಕೋಟಿ ಹಣದ ಬೆನ್ನುಬಿದ್ದಿದೆ.

ಇದನ್ನೂ ಓದಿ: ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ; ಅಸಲಿಗೆ ಆಗಿದ್ದೇನು?

ವಾಲ್ಮೀಕಿ ನಿಗಮದಲ್ಲಿ ನಡೆದಿರುವ 187 ಕೋಟಿ ಹಗರಣ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣ ಆಗಿರೋ ಪ್ರಕರಣ. ಈ ಹಗರಣದಿಂದ ಸಚಿವರೊಬ್ಬರ ತಲೆದಂಡವೇ ಆಗ್ಬಿಟ್ಟಿದೆ. ಈಗ ತನಿಖೆಯ ದಿಕ್ಕು ಸಾಗಿದಂತೆ ಸ್ಫೋಟಕ ವಿಚಾರಗಳು ಬಯಲಾಗ್ತಿವೆ. ನಿಗಮದ ಅಭಿವೃದ್ಧಿಗೆ ಇಟ್ಟಿದ್ದ ಬಹುಕೋಟಿ ಹಣ ಯಾಱರ ಜೇಬು ಸೇರಿದೆ. ಹೇಗೆಲ್ಲಾ ಹಣ ವರ್ಗಾವಣೆಯಾಗಿದೆ ಎಂಬ ಒಂದೊಂದೇ ಮಾಹಿತಿಗಳು ಹೊರ ಬರ್ತಿವೆ. ಸದ್ಯ ಬಿ.ನಾಗೇಂದ್ರ ಹಾಗೂ ಅಧಿಕಾರಿಗಳ ತಲೆದಂಡ ಆಗಿದ್ದು ಮತ್ತಷ್ಟು ಮಂದಿಯ ಬುಡಕ್ಕೆ ಬಿಸಿ ತಟ್ಟುವ ಸಾಧ್ಯತೆ ಹೆಚ್ಚಾಗಿದೆ.

ಆರೋಪ ಏನು..?

ವಾಲ್ಮೀಕಿ ನಿಗಮದ ಕೋಟ್ಯಂತರ ಹಣ ವಹಿವಾಟು ಮಾಡಲು 193 ಖಾತೆಗಳನ್ನು ಬಳಸಿಕೊಂಡಿದ್ದ ವಿಚಾರ ಬಯಲಾಗಿದೆ. ಹೈದರಾಬಾದ್ ಮೂಲದ ಸತ್ಯನಾರಾಯಣವರ್ಮ ಈ ಎಲ್ಲಾ ಅಕ್ರಮಕ್ಕೆ ಮಾಸ್ಟರ್ ಮೈಂಡ್ ಆಗಿದ್ದ. ಯಾರದ್ದೋ ಕಂಪನಿ ಹೆಸರಿನಲ್ಲಿ ಇನ್ಯಾರೋ ಖಾತೆ ತೆರೆದು ಕೋಟಿ ಕೋಟಿ ಹಣ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಮಾಲೀಕರನ್ನ ಕರೆಸಿ ವಿಚಾರಣೆ ನಡೆಸಿದ ವೇಳೆ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಅಸಲಿ ಕಂಪನಿಗಳ ಮಾಲೀಕರ ಗಮನಕ್ಕೆ ಬಾರದ ರೀತಿಯಲ್ಲಿ ವಂಚನೆ ಮಾಡಲಾಗಿದೆ. ಅದೇ ಕಂಪನಿ ಹೆಸರಿನಲ್ಲಿ ನಕಲಿ ಖಾತೆ ತೆರೆದು ಕೋಟಿ ಕೋಟಿ ಹಣ ವಹಿವಾಟು ಮಾಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಕಂಪನಿ ಮಾಲೀಕನ ಹೆಸರಲ್ಲಿ ನಕಲಿ ಖಾತೆ ತೆರೆದು ಹಣ ವರ್ಗಾವಣೆ ಮಾಡಲಾಗಿದೆ. ಈ ಸಂಬಂಧ ಅಸಲಿ ಕಂಪನಿ ಮಾಲೀಕರಿಂದ ನಾಲ್ಕು FIR ದಾಖಲು ಮಾಡಲಾಗಿದೆ. ವಿಜಯ್ ಕೃಷ್ಣ ಅಂಡ್ ನವೀನ್​ ಎಂಬುವರಿಂದ ಕೆ.ಪಿ.ಅಗ್ರಹಾರ ಠಾಣೆಯಲ್ಲಿ FIR ದಾಖಲಾಗಿದೆ. ಇನ್ನು ವಿಜಯನಗರ ಠಾಣೆಯಲ್ಲಿ ರಾಘವೇಂದ್ರ, ರೇಖಾರಿಂದ ದೂರು ದಾಖಲಾಗಿದೆ. ಈ ಖಾತೆಯಲ್ಲಿ 5 ಕೋಟಿಯಂತೆ 20ಕೋಟಿಗೂ ಅಧಿಕ ಹಣ ವರ್ಗಾವಣೆ ಆಗಿದ್ದು ಹಣ ವರ್ಗಾವಣೆ ಮಾಡಿ ಮತ್ತೆ ಆ ಖಾತೆಗಳಿಂದ ಡ್ರಾ ಮಾಡಿಕೊಂಡಿರುವ ವಿಚಾರ ಬಯಲಾಗಿದೆ ಎನ್ನಲಾಗಿದೆ. ಮತ್ತೊಂದೆಡೆ ಹಗರಣದಲ್ಲಿ 89 ಕೋಟಿಯಲ್ಲಿ ಸದ್ಯ ಸಿಕ್ಕಿರೋದು 50 ಕೋಟಿ ಮಾತ್ರ. ಆರ್​​ಬಿಎಲ್​ ಬ್ಯಾಂಕ್​​ನಲ್ಲಿದ್ದ 30 ಕೋಟಿ ರೂಪಾಯಿ ಫ್ರೀಜ್ ಮಾಡಲಾಗಿದ್ದು ಬಂಧಿತರಿಂದ 20 ಕೋಟಿ ಮೌಲ್ಯದ ಹಣ, ಕೆಲ ವಸ್ತುಗಳನ್ನ ಜಪ್ತಿ ಮಾಡ್ಲಾಗಿದೆ. ಬಾಕಿ 39 ಕೋಟಿ ಎಲ್ಲೋಯ್ತು ಎನ್ನುವ ಬಗ್ಗೆ ಅಧಿಕಾರಿಗಳು ಶೋಧ ನಡೆಸ್ತಿದ್ದಾರೆ.

ಇದನ್ನೂ ಓದಿ: ಸ್ನೇಹಿತನನ್ನೇ ಭೀಕರವಾಗಿ ಕೊಂದ ಹಂತಕ.. ಅಸಲಿಗೆ ನಡೆದಿದ್ದೇನು ಗೊತ್ತಾ?

ಮತ್ತೊಂದೆಡೆ ಬಾರ್, ಚಿನ್ನದ‌ ಅಂಗಡಿಗಳಿಗೆ ವರ್ಗಾವಣೆ ಆಗಿದ್ದ 10 ಕೋಟಿ ಹಣವನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶದ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗಿದ್ದ ಹಣವನ್ನು ಪಡೆದು ಎಸ್​ಐಟಿ ತನಿಖೆ ಚುರುಕುಗೊಳಿಸಿದೆ. ಹಗರಣದಲ್ಲಿ ಇದುವರೆಗೆ 28 ಕೋಟಿ ಹಣವನ್ನ ಎಸ್​ಐಟಿ ವಶಕ್ಕೆ ಪಡೆದಿದೆ. ಈ ನಡುವೆ ವಾಲ್ಮೀಕಿ ಹಗರಣ ಖಂಡಿಸಿ ಬಿಜೆಪಿ ಪ್ರತಿಭಟನೆ ಮುಂದುವರಿಸಿದೆ. ಬೆಂಗಳೂರು, ಕೊಪ್ಪಳ, ಕೋಲಾರ ಸೇರಿ ಹಲವೆಡೆ ಪ್ರತಿಭಟನೆಯ ಕಹಳೆ ಮೊಳಗಿದೆ, ಬಿ.ನಾಗೇಂದ್ರ ಬಂಧನ ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದೆ. ಒಟ್ಟಾರೆ, ವಾಲ್ಮೀಕಿ ನಿಗಮದ ಹಗರಣ ಸರ್ಕಾರಕ್ಕೆ ತೀವ್ರ ಮುಜುಗರ ತರಿಸಿದ್ದು, ತನಿಖೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬರುವ ಲಕ್ಷಣ ಗೋಚರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ.. ಲೆಕ್ಕಕ್ಕೆ ಸಿಗದ 39 ಕೋಟಿ ಹಿಂದೆ ಬಿದ್ದ ಎಸ್​ಐಟಿ!

https://newsfirstlive.com/wp-content/uploads/2024/05/NAGENDRA.jpg

Load More