newsfirstkannada.com

ವನ್ಷಿಕಾ ಹೆಸರಿನಲ್ಲಿನ ವಂಚನೆ ಆರೋಪ ಕೇಸ್​​ಗೆ ಬಿಗ್​​ ಟ್ವಿಸ್ಟ್​.. ಹೊಸದೊಂದು ಹೆಸರು ಎಳೆದು ತಂದ ಆರೋಪಿ ನಿಶಾ ನರಸಪ್ಪ..!

Share :

30-07-2023

  ಆನಂದ್ ಪತ್ನಿ ಯಶಸ್ವಿನಿ, ಹರ್ಷಿತಾ ವಿರುದ್ಧ ಮಾನಹಾನಿ ಕೇಸ್​ಗೆ ನಿರ್ಧಾರ

  ಐದಾರು ವರ್ಷದ ವನ್ಷಿಕಾ ಹೆಸರು ದುರುಪಯೋಗ ಮಾಡಿಲ್ಲ

  ಆರೋಪಗಳಿಗೆ ಎನ್.ಎನ್ ಪ್ರೊಡಕ್ಷನ್ ಮಾಲೀಕಿ ನಿಶಾ ಸ್ಪಷ್ಟನೆ

ಪಟ್​ಪಟಾಕಿ ಮಾತು.. ಮಾತಿನಲ್ಲೇ ಸೆಳೆಯೋ ಚಿನಕಿರುಳಿ.. ಕ್ಯೂಟ್ ಕ್ಯೂಟ್ ಟಾಕ್.. ಬೋಲ್ಡ್​​ ಆ್ಯಂಡ್​ ಬ್ಯೂಟಿಫುಲ್​ ಬೇಬಿ.. ಈ ಮುದ್ದಾದ ಪೋರಿ ಹೆಸರು ವನ್ಷಿಕಾ.. ನಟ ಮಾಸ್ಟರ್​ ಆನಂದ್​ ಪುತ್ರಿ.. ಇದೇ ಬಾಲನಟಿ ಹೆಸರಲ್ಲಿ ನಡೆದ ವಂಚನೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಮೋಸದ ಆರೋಪ ಹೊತ್ತ ನಿಶಾ ನರಸಪ್ಪ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಬಾಲನಟಿ ವನ್ಷಿಕಾ ಹೆಸರಿನಲ್ಲಿನ ವಂಚನೆ ಪ್ರಕರಣಕ್ಕೆ ಟ್ವಿಸ್ಟ್​​!

ಟ್ಯಾಲೆಂಟ್ ಶೋ, ಸೂಪರ್​ ಕಿಡ್​.. ಈ ಹೆಸರಲ್ಲಿ ಮೋಸದಾಟ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ನಶೆ ಏರಿಸುವ ಮಾತಿನಲ್ಲೇ ದುಡ್ಡು ಹೊಡೆಯುವ ದೊಡ್ಡ ದಂಧೆ ನಡೆಯುತ್ತಿದೆ ಎಂಬ ಆರೋಪ ಪೊಲೀಸ್​​​ ಠಾಣೆ ಮಟ್ಟಿಲಲ್ಲಿ ಕೇಳಿ ಬಂದಿತ್ತು. ಇದೇ ಆರೋಪ ನಿಶಾ ನರಸಪ್ಪ ಎಂಬ ಯುವತಿ ಜೈಲು ವಾಸ ಅನುಭವಿಸಿ ಬಂದಿದ್ದಾಗಿದೆ. ಕಂಬಿ ಹಿಂದಿದ್ದ ನಿಶಾ, ಜಾಮೀನಿನ ಮೇಲೆ ಹೊರಬರುತ್ತಲೇ ತನ್ನ ಮೇಲಿನ ಪ್ರತಿ ಆರೋಪಕ್ಕೂ ಉತ್ತರ ನೀಡಿದ್ದಾರೆ.

ಬಾಲನಟಿ ವನ್ಷಿಕಾ ಹೆಸರನ್ನ ದುರುಪಯೋಗ ಮಾಡಿಕೊಂಡು ಜನರಿಗೆ ಟೋಪಿ ಹಾಕಿದ್ದಾರೆ ಅನ್ನೋ ಆರೋಪಕ್ಕೆ ನಿಶಾ ನರಸಪ್ಪ ಸ್ಪಷ್ಟನೆ ನೀಡಿದ್ದಾರೆ. ಎನ್​.ಎನ್​ ಪ್ರೊಡಕ್ಷನ್​ ಕಟ್ಡಿ 7 ವರ್ಷ ಆಯ್ತು.. ಏಳು ವರ್ಷದಿಂದ ಕೆಲಸ ಮಾಡ್ತಿದ್ದೀನಿ.. ವನ್ಷಿಕಾಗೆ ಈಗ ಕೇವಲ ಐದಾರು ವರ್ಷ. ಅವಳ ಹೆಸರನ್ನ ದುರುಪಯೋಗ ಮಾಡೋಕಾಗುತ್ತಾ? ನನ್ನ ಪ್ರೊಡಕ್ಷನ್​ ಲೀಗಲ್ ಆಗಿದೆ. ವನ್ಷಿಕಾ ಪಾಲ್ಗೊಂಡ ಮತ್ತು ಇತರೆ ಸ್ಟಾರ್​ಗಳು ಪಾಲ್ಗೊಂಡ ಕಾರ್ಯಕ್ರಮಗಳಿಗೆ ಸಂಭಾವನೆ ನೀಡಿದ್ದೀನಿ ಅಂತ ಆರಂಭದಲ್ಲೇ ಪ್ರಸ್ತಾಪಿಸಿದ್ರು

ನಾನು ಸಾಕಷ್ಟು ವರ್ಷಗಳಿಂದ ಪ್ರೊಡೆಕ್ಷನ್ ಹೌಸ್ ನಡೆಸಿಕೊಂಡು ಬರುತ್ತಿದ್ದೇನೆ. ನನ್ನ ಪ್ರೊಡೆಕ್ಷನ್ ಹೌಸ್ ಇವರಿಂದ ಬೆಳೆಯಿತು ಅನ್ನೋದೆಲ್ಲ ಸುಳ್ಳೆ. ನಾನು ಶುರುಮಾಡಿದ್ದು ಬರೋಬ್ಬರಿ 7 ವರ್ಷಗಳ ಹಿಂದೆ. ಆದರೆ ವನ್ಷಿಕಾಗೆ ಈಗ 6 ವರ್ಷ ಅಷ್ಟೇ. ಇವರ ಮಗಳಿಂದಲೇ ನಾವು ಕಾರ್ಯಕ್ರಮ ಮಾಡಿದ್ವಾ? ಅವರಿಗೆ ಏನು ಇದೆಯೋ.. ಆ ಪೇಮೆಂಟ್ ಕೂಡ ಮಾಡಿದ್ದೇವೆ-ನಿಶಾ ನರಸಪ್ಪ, ಆರೋಪಿತೆ

ಯಶಸ್ವಿನಿಗೂ ನನ್ನ ಪ್ರೊಡಕ್ಷನ್​ಗೂ ಸಂಬಂಧವಿಲ್ಲ!

ನನ್ನ ಪ್ರೋಡಕ್ಷನ್​ಗೂ ಯಶಸ್ವಿನಿಗೂ ಸಂಬಂಧ ಇಲ್ಲ..‌ ಯಾವುದೇ ಶೇರ್ ಕೂಡ ಹೊಂದಿಲ್ಲ.. ಉಳಿದಂತೆ ಹಲವರು ಇನ್ವೆಸ್ಟ್ ಮಾಡಿದ್ದು ನಿಜ.. ಅಲ್ಲದೆ, ಆನ್​ಲೈನ್​ ಟ್ರಾನ್ಸಾಕ್ಷನ್ ಮೂಲಕ ವ್ಯವಹಾರ ಆಗಿವೆ ಅಂತ ಒಪ್ಕೊಂಡ್ರು.. ಆದ್ರೆ, ನಾನು ಯಾರಿಗೂ ಮೋಸ ಮಾಡಿಲ್ಲ ಮಾಡಿಲ್ಲ ಎಂದಿದ್ದಾರೆ.

ವಿವಾದಕ್ಕೆ ಹೊಸ ಹೆಸರು ಎಂಟ್ರಿ? ಯಾರದು ಹರ್ಷಿತಾ?

ಇಲ್ಲಿಯವರೆಗೆ ನಿಶಾ ಹೆಸರು ಚಲಾವಣೆಯಲ್ಲಿತ್ತು. ಆದ್ರೆ, ನಿಶಾ ಮತ್ತೊಬ್ಬ ಹುಡುಗಿಯತ್ತ ಬೊಟ್ಟು ಮಾಡಿದ್ದಾರೆ.. ನನ್ನ ಬಳಿ ಕೆಲಸ ಮಾಡ್ತಿದ್ದವಳು ಹರ್ಷಿತಾ. ಪ್ರೊಡಕ್ಷನ್​ ಬಗ್ಗೆ ಸಂಪೂರ್ಣ ತಿಳಿದಿದ್ಲು. ಹೀಗಾಗಿ ಎಲ್ಲರಿಗೂ ತಪ್ಪು ಮಾಹಿತಿ ಹರಡಿದ್ದಾಳೆ ಅಂತ ಮೋಸದ ಜಾಲಕ್ಕೆ ಹೊಸ ಟ್ವಿಸ್ಟ್​ ಕೊಟ್ಟಿದ್ದಾರೆ.

ನನ್ನ ಕೆಲಸಕ್ಕೆ ಹರ್ಷಿತಾ ಎಂಬ ಹುಡುಗಿಯನ್ನು ತೆಗೆದುಕೊಂಡಿದ್ದೆ. ನನ್ನ ಪ್ರತಿಯೊಂದು ಬ್ಯುಸಿನೆಸ್​ ಲಿಂಕ್ ಅವರಿಗೆ ಗೊತ್ತಿತ್ತು. ಈ ಹರ್ಷಿತ ನನ್ನ ಎಲ್ಲಾ ಕ್ಲೈಂಟ್​​ಗಳಿಗೂ ಮಿಸ್​ಗೈಡ್ ಮಾಡಲು ಶುರುಮಾಡಿದ್ದರು. ನಿಶಾ ನರಸಪ್ಪ, ಆರೋಪಿತೆ

ಲೀಗಲ್​​ ಬ್ಯಾಟಲ್​ಗೆ ಸಜ್ಜಾದ ನಿಶಾ ನರಸಪ್ಪ!

ನಿಶಾ ಬಗ್ಗೆ ಜಾಲತಾಣದಲ್ಲಿ ಮಾನಹಾನಿ ಜೊತೆ ವ್ಯವಹಾರಿಕ‌ ನಷ್ಟ ಉಂಟು ಮಾಡ್ಲಾಗಿದೆ ಅಂತ ನಿಶಾ ನರಸಪ್ಪ ವಾದಿಸಿದ್ದಾರೆ. ಈ ಬಗ್ಗೆ ಯಶಸ್ವಿನಿ ವಿರುದ್ಧ ಮಾನಹಾನಿ ಕೇಸ್​​ ದಾಖಲಿಸಲು ಚಿಂತನೆ ನಡೆಸಿದ್ದಾಗಿ ತಿಳಿಸಿದ್ದಾರೆ.

ನಾನು ನಿಶಾ ಜತೆ ಇದ್ದದ್ದು 4 ತಿಂಗಳು ಅಷ್ಟೇ

ನ್ಯೂಸ್​ಫಸ್ಟ್ ಜೊತೆ ಎಕ್ಸ್​ಕ್ಲೂಸಿವ್​​ ಆಗಿ ಮಾತನಾಡಿದ ಹರ್ಷಿತಾ, ತನ್ನ ವಿರುದ್ಧ ನಿಶಾ ಮಾಡಿದ ಆರೋಪಗಳಿಗೆ ತೀಕ್ಷ್ಣ ಉತ್ತರ ನೀಡಿದ್ದಾಳೆ.. ನಿಶಾ ಜತೆ ಇದ್ದದ್ದು 4 ತಿಂಗಳು ಅಷ್ಟೇ.. ನಾನು ಯಾವುದೇ ರೀತಿಯ ಹಣ ಪಡೆದಿಲ್ಲ. ಬೇಕಿದ್ರೆ ತನಿಖೆ ಮಾಡ್ಲಿ ಸತ್ಯ ಹೊರ ಬರಲಿದೆ ಅಂತ ಹೇಳಿದ್ದಾಳೆ. ಒಟ್ಟಾರೆ, ನಿಶಾ ಸಿಡಿಸಿದ ಹೊಸ ಬಾಂಬ್​​, ಇನ್ಯಾವ ಹಂತಕ್ಕೆ ತಿರುಗುತ್ತೆ ನೋಡ್ಬೇಕು.
ವಿಶೇಷ ವರದಿ: ಪ್ರಜ್ವಲ್ ನಿಟ್ಟೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವನ್ಷಿಕಾ ಹೆಸರಿನಲ್ಲಿನ ವಂಚನೆ ಆರೋಪ ಕೇಸ್​​ಗೆ ಬಿಗ್​​ ಟ್ವಿಸ್ಟ್​.. ಹೊಸದೊಂದು ಹೆಸರು ಎಳೆದು ತಂದ ಆರೋಪಿ ನಿಶಾ ನರಸಪ್ಪ..!

https://newsfirstlive.com/wp-content/uploads/2023/07/NISHA-1-2.jpg

Load More