ವನ್ಷಿಕಾ ಹೆಸರಲ್ಲಿ ವಂಚನೆ ಕೇಸ್ಗೆ ಬಿಗ್ ಟ್ವಿಸ್ಟ್
ನನ್ನ ನೇಮ್ ಹಾಳು ಮಾಡಲು ಮಾಡಿದ ಸಂಚು
ನಿಶಾ ಆರೋಪಕ್ಕೆ ಹರ್ಷಿತಾ ಸಖತ್ ಕೌಂಟರ್!
ಬೆಂಗಳೂರು: ನಿಶಾ ನರಸಪ್ಪ ಸ್ಟಾರ್ ಕಿಡ್ ವನ್ಷಿಕಾ ಹೆಸರಲ್ಲಿ ವಂಚನೆ ಪ್ರಕರಣದಲ್ಲಿ ರಾಜ್ಯಾದ್ಯಂತ ಸುದ್ದಿಯಾಗಿದ್ದ ಲೇಡಿ. ಈಕೆ ವಿರುದ್ಧ ಸದ್ಯ 70ಕ್ಕೂ ಹೆಚ್ಚು ದೋಖಾ ಕೇಸ್‌ಗಳು ದಾಖಲಾಗಿವೆ. ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ನಿಶಾ ಹೊರ ಬರುತ್ತಿದ್ದಂತೆಯೇ ಆರೋಪ ಮಾಡಿದ್ದು ಮತ್ತೊಬ್ಬರ ವಿರುದ್ಧ. ಇಂದು ಈ ಕೇಸ್ಗೆ ಅವರ ಎಂಟ್ರಿಯಾಗಿದ್ದು ಹೊಸ ಟ್ವಿಸ್ಟ್ ಸಿಕ್ಕಿದೆ.
ನನ್ನ ಇಮೇಜ್ಗೆ ಮಸಿ ಬಳಿಯುತ್ತಿದ್ದಾರೆ ಎಂದು ಸ್ಟಾರ್ ಕಿಡ್ ವನ್ಷಿಕಾ ಹೆಸರಲ್ಲಿ ನೂರಾರು ಜನರಿಗೆ ದೋಖಾ ಮಾಡಿದ ಆರೋಪ ಹೊತ್ತ ನಿಶಾ ಕೊಟ್ಟ ಉತ್ತರ ಇದು. ಆರೋಪಗಳಿಗೆ ಸ್ಪಷ್ಟನೆ ಕೊಟ್ಟ ನಿಶಾ ಬಾಲನಟಿ ವನ್ಷಿಕಾ ತಾಯಿ ಯಶಸ್ವಿನಿ ಹಾಗೂ ಹರ್ಷಿತಾ ಎಂಬಾಕೆ ವಿರುದ್ಧವೂ ಆರೋಪ ಮಾಡಿದ್ರು. ಯಾವಾಗ ನಿಶಾ ಮಾಧ್ಯಮದ ಮುಂದೆ ಪ್ರತ್ಯಕ್ಷಗೊಂಡು ಹರ್ಷಿತಾ ಹೆಸರು ರಿವಿಲ್ ಮಾಡಿದರು. ಈಗ ಕೇಸ್ ಟ್ವಿಸ್ಟ್ ಪಡೆದುಕೊಂಡಿದೆ.
ನಿಶಾ ನರಸಪ್ಪ ಆರೋಪಕ್ಕೆ ಹರ್ಷಿತಾ ಪ್ರತ್ಯಾರೋಪ
ನ್ಯೂಸ್ಫಸ್ಟ್ ಜೊತೆ ಮಾತನಾಡಿದ ಹರ್ಷಿತಾ, ತನ್ನ ವಿರುದ್ಧ ನಿಶಾ ಮಾಡಿದ ಆರೋಪಗಳಿಗೆ ತೀಕ್ಷ್ಣ ಉತ್ತರ ನೀಡಿದ್ದಾರೆ. ನಿಶಾ ಜತೆ ನಾನು ಇದ್ದಿದ್ದೇ 4 ತಿಂಗಳು. ನಾನು ಯಾವುದೇ ರೀತಿಯ ಹಣ ಪಡೆದಿಲ್ಲ. ಬೇಕಿದ್ರೆ ತನಿಖೆ ಮಾಡಲಿ, ಸತ್ಯ ಹೊರ ಬರಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಮೂಲಕ ನಿಶಾ ಇನ್‌ಸ್ಟಾ ಲಾಗಿನ್ ಆರೋಪಕ್ಕೆ ಹರ್ಷಿತಾ ಕೌಂಟರ್ ಕೊಟ್ಟಿದ್ದಾರೆ.
ಒಟ್ಟಾರೆ ನಿಶಾ ನರಸಪ್ಪ ಜೈಲಿಗೆ ಹೋಗುತ್ತಿದ್ದಂತೆ ತಣ್ಣಗಾಗಿದ್ದ ಪ್ರಕರಣ ಈಗ ಬೇಲ್ ಮೇಲೆ ಆಕೆ ಬಿಡುಗಡೆಯಾಗಿ ಮಾಧ್ಯಮದ ಮುಂದೆ ಬರುತ್ತಿದ್ದಂತೆಯೇ ಮತ್ತೆ ಸದ್ದು ಮಾಡುತ್ತಿದೆ. ಹರ್ಷಿತಾ ಎಂಟ್ರಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ. ಈ ಕೇಸ್ ಎಲ್ಲಿಗೆ ಹೋಗಿ ಮುಟ್ಟುತ್ತೆ? ಹಣ ಕಳೆದುಕೊಂಡವರ ಪಾಡೇನು ಅನ್ನೋದೇ ಸದ್ಯದ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ