Advertisment

ಸಿಡ್ನಿಯಲ್ಲೂ ವರಾಹ ರೂಪಂ ವಿಶ್ವರೂಪ; ಮೋದಿ ಕಾರ್ಯಕ್ರಮದಲ್ಲಿ ಕಾಂತಾರದ್ದೇ ಮೋಡಿ

author-image
Ganesh Nachikethu
Updated On
ಸಿಡ್ನಿಯಲ್ಲೂ ವರಾಹ ರೂಪಂ ವಿಶ್ವರೂಪ; ಮೋದಿ ಕಾರ್ಯಕ್ರಮದಲ್ಲಿ ಕಾಂತಾರದ್ದೇ ಮೋಡಿ
Advertisment
  • ಕಾಂತಾರ ಸಿನಿಮಾ ವರಾಹ ರೂಪಂ ಹಾಡಿಗೆ ನೃತ್ಯ
  • ಭಾರತದ ಕಲೆ, ಸಂಸ್ಕೃತಿಯ ಕಲರ್‌ಫುಲ್‌ ಪ್ರದರ್ಶನ
  • ಸಿಡ್ನಿಯಲ್ಲಿ ಅನಾವರಣಗೊಂಡ 'ಮಿನಿ ಇಂಡಿಯಾ'

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಕ್ಷರಶಃ ಮೋಡಿ ಮಾಡಿದ್ದಾರೆ. ಸಿಡ್ನಿಯಲ್ಲಿ ಲಿಟಲ್ ಇಂಡಿಯಾ ಕಾರ್ಯಕ್ರಮ ಆಯೋಜಿಸಿದ್ದು ಅನಿವಾಸಿ ಭಾರತೀಯರು ಮೋದಿ ಮೇನಿಯಾದಲ್ಲಿ ಮುಳುಗೆದ್ದಿದ್ದಾರೆ. ಸಾವಿರಾರು ಜನರು ಭಾರತೀಯ ಕಲೆ, ಸಂಸ್ಕೃತಿಯ ನೃತ್ಯ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದಾರೆ.

Advertisment

ಸಿಡ್ನಿಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಕೇಳಲು ಸಾವಿರಾರು ಜನ ಸೇರಿದ್ದರು. ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ನಮೋ ಇಂತಹ ವೈಭವದ ಸ್ವಾಗತ ಕೋರಿದ್ದಕ್ಕೆ ಧನ್ಯವಾದ ತಿಳಿಸಿದರು.
ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಆಂಥೋನಿ ನರೇಂದ್ರ ಮೋದಿ ನನ್ನ ಬಾಸ್ ಎಂದು ಕರೆದಿದ್ದಾರೆ.

ಇನ್ನು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾಂತಾರ ಸಿನಿಮಾ ವರಾಹ ರೂಪಂ ಹಾಡಿಗೆ ನೃತ್ಯ ಪ್ರದರ್ಶಿಸಲಾಗಿದೆ. ಉಡುಪಿ ಜಿಲ್ಲೆ ಕುಂದಾಪುರ ಮೂಲದ ನಾಟ್ಯ ವಿದುಷಿ ಪಲ್ಲವಿ ಭಾಗವತ್ ತಮ್ಮ ತಂಡದೊಂದಿಗೆ ವಿಶೇಷ ನೃತ್ಯ ಪ್ರದರ್ಶಿಸಿದರು. ಜಾನಪದ ಹಾಗೂ ಯಕ್ಷಗಾನ ವೇಷದಲ್ಲಿ ನೀಡಿದ ನಾಟ್ಯ ಪ್ರದರ್ಶನ ನೋಡುಗರ ಮನಸೂರೆಗೊಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

https://twitter.com/0Durgi3/status/1660972632227848192?s=20

Advertisment
Advertisment
Advertisment