newsfirstkannada.com

ಯಶ್-ರಾಧಿಕಾ ಮನೆಯಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬ; ಬ್ಯೂಟಿಫುಲ್​ ಫೋಟೋಗಳು ಇಲ್ಲಿವೆ..!

Share :

27-08-2023

    ಯಶ್​-19 ಸಿನಿಮಾ ಅನೌನ್ಸ್​ ಮಾಡದಿರುವ ನಟ

    KGF-2 ನಂತರ ಯಶ್​ ನಿಗೂಢವಾಗಿ ಶೂಟಿಂಗ್?

    ಮನೆಯಲ್ಲಿ ಸಡಗರದ ಹಬ್ಬದಲ್ಲಿ ಕ್ಯೂಟ್ ಕಪಲ್ಸ್​

ಕೆಜಿಎಫ್​ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಪ್ರೀತಿಸಿ ಮದುವೆಯಾದವರು. ಈ ಕ್ಯೂಟ್ ಕಪಲ್ ಮನೆಯಲ್ಲಿ ಸಂಭ್ರಮದಿಂದ ಹಬ್ಬಗಳನ್ನು ಆಚರಣೆ ಮಾಡುತ್ತಿರುತ್ತಾರೆ. ಈ ಸುಂದರ ಸ್ಟಾರ್ ಕಪಲ್, ಅಷ್ಟೇ ಅದ್ಭುತವಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮಿಸಿದ್ದಾರೆ. ತಮ್ಮ ನಿವಾಸದಲ್ಲಿ ಆಚರಣೆ ಮಾಡಿದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಫುಲ್ ವೈರಲ್ ಆಗಿವೆ.

ಸ್ಯಾಂಡಲ್‍ವುಡ್‍ನ ಅತ್ಯಂತ ಸೂಪರ್ ಜೋಡಿ ನಟ ಯಶ್ ಮತ್ತು ರಾಧಿಕಾ ಪಂಡಿತ್. ಸದ್ಯ ತಮ್ಮ ನಿವಾಸದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಮಕ್ಕಳೊಂದಿಗೆ ಆಚರಣೆ ಮಾಡಿದ್ದಾರೆ. ದೇವಿಗೆ ಸೀರೆ, ವಿಧ ವಿಧವಾದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಹಣ್ಣು, ತೆಂಗಿನ ಕಾಯಿ, ಎಳೆನೀರು, ಸ್ವೀಟ್​ ಸೇರಿದಂತೆ ಏನೇನು ಬೇಕೋ ಅದನ್ನೆಲ್ಲ ವರಮಹಾಲಕ್ಷ್ಮಿಗೆ ಅರ್ಪಣೆ ಮಾಡಿದ್ದರು. ಯಶ್ ದಂಪತಿ ಮಕ್ಕಳಾದ ಐರಾ ಹಾಗೂ ಯಥರ್ವ್ ಹೊಸ ಡ್ರೆಸ್​ನಲ್ಲಿ ಕಂಗೊಳಿಸುತ್ತಿದ್ದು ಫುಲ್ ಖುಷ್..​ ಖುಷ್​ ಆಗಿದ್ದರು.

ರಾಕಿಂಗ್ ಸ್ಟಾರ್ ಯಶ್​ ಅವರು ತಮ್ಮ ಚಿಕ್ಕದಾದ ಫ್ಯಾಮಿಲಿ ಜೊತೆ ವರಮಹಾಲಕ್ಷ್ಮಿಗೆ ಆರತಿಯನ್ನು ಬೆಳಗುತ್ತಿದ್ದಾರೆ. ದೇವಿ ವರಮಹಾಲಕ್ಷ್ಮಿಯನ್ನು ಸೀರೆ, ಹಲವು ಹೂವುಗಳಿಂದ ಅದ್ಭುತವಾಗಿ ಸಿಂಗಾರ ಮಾಡಿರುವುದು ಫೋಟೋದಲ್ಲಿ ಕಾಣಬಹುದಾಗಿದೆ.

ಹಬ್ಬದ ಪ್ರಯುಕ್ತ ವರಮಹಾಲಕ್ಷ್ಮಿ ದೇವಿಯನ್ನು ಸಿಂಗಾರಗೊಳಿಸಿರುವುದು. ಮನೆಯಲ್ಲಿ ವರ ಮಹಾಲಕ್ಷ್ಮಿಯನ್ನು ಕೂರಿಸಿ ಬಗೆಬಗೆಯಾದ ಹೂವುಗಳು, ಹಾರಗಳಿಂದ ವೈಭವವಾಗಿ ಕಾಣುವಂತೆ ಸಿದ್ಧ ಮಾಡಿದ್ದರು.

ನಟಿ ರಾಧಿಕಾ ಪಂಡಿತ್ ಅವರು ವರಮಹಾಲಕ್ಷ್ಮಿಗೆ ಪೂಜೆ ಸಲ್ಲಿಸುವ ವೇಳೆ ಕಳಸಕ್ಕೆ ದೀಪ ಹಚ್ಚಿದರು. ಬಲಗಡೆ ಇರೋ ಫೋಟೋದಲ್ಲಿ ರಾಧಿಕಾ ಪಂಡಿತ್ ಅವರು ತಮ್ಮ ಮುದ್ದಾದ ಮಗಳಿಗೆ ಏನೋ ಹೇಳಿಕೊಡುತ್ತಿದ್ದಾರೆ.

ಯಶ್ ಅವರು ಮಗ ಯಥರ್ವ್ ಜೊತೆ ನಿಂತುಕೊಂಡು ಫೋಟೋಗೆ ಫೋಸ್ ಕೊಟ್ಟರೆ ಪತ್ನಿ ರಾಧಿಕಾ ಪಂಡಿತ್ ಅವ್ರು ಮಗಳು ಐರಾ ಜೊತೆ ನಿಂತುಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ.

ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರು ತಮ್ಮ ನಿವಾಸದಲ್ಲಿ ಸಡಗರ, ಸಂಭ್ರಮದಿಂದ ಆಚರಣೆ ಮಾಡಿದ ವರಮಹಾಲಕ್ಷ್ಮೀ ಹಬ್ಬದ ಫೋಟೋಗಳನ್ನು ಎಕ್ಸ್​ನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಇವು ಫುಲ್ ವೈರಲ್ ಆಗಿವೆ. ಕೆಜಿಎಫ್​ -2 ಬಳಿಕ ಯಾವುದೇ ಸಿನಿಮಾವನ್ನು ಅನೌನ್ಸ್​ ಮಾಡದ ಯಶ್ ಅವರು ಸದ್ಯ ಫ್ಯಾಮಿಲಿ ಜೊತೆ ಕಾಣಿಸಿಕೊಂಡಿರುವುದು ಹೀಗೆ.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಶ್-ರಾಧಿಕಾ ಮನೆಯಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬ; ಬ್ಯೂಟಿಫುಲ್​ ಫೋಟೋಗಳು ಇಲ್ಲಿವೆ..!

https://newsfirstlive.com/wp-content/uploads/2023/08/YASH_RADHIKA.jpg

Load More