newsfirstkannada.com

ಟೊಮ್ಯಾಟೋ ಕಾಯಲು 2 ಬೌನ್ಸರ್​ ನೇಮಿಸಿಕೊಂಡಿದ್ದ ಅಂಗಡಿ ಮಾಲೀಕನ ಬಂಧನ! ಯಾಕೆ? 

Share :

12-07-2023

  ಟೊಮ್ಯಾಟೋ ಕಾಯಲು ಇಬ್ಬರು ಬೌನ್ಸರ್​ ನೇಮಿಸಿಕೊಂಡಿದ್ದ ಮಾಲೀಕ

  ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹಂಚಿಕೊಂಡಿದ್ದ ಮಾಲೀಕ

  ಟೊಮ್ಯಾಟೋ ವ್ಯಾಪಾರಿ ಮತ್ತು ಆತನ ಮಗನ ಬಂಧನ, ವಿಚಾರಣೆ

ದೇಶದೆಲ್ಲೆಡೆ ಟೊಮ್ಯಾಟೋ ಬೆಲೆ ಏರಿಕೆ ಕಂಡಿರುವ ವಿಚಾರ ಗೊತ್ತೇ ಇದೆ. ಮತ್ತೊಂದೆಡೆ ದೆಹಲಿಯಲ್ಲಿ ಟೊಮ್ಯಾಟೋ ಬೆಲೆ 200 ರೂಪಾಯಿಯಾಗಿದೆ. ಹೀಗಿರುವಾಗ ವ್ಯಾಪಾರಿಗಳು, ರೈತರು ಟೊಮ್ಯಾಟೋಗೆ ರಕ್ಷಣೆ ನೀಡುವ ವಿಚಾರ ದೇಶದೆಲ್ಲೆಡೆ ವೈರಲ್​ ಆಗಿತ್ತು. ವಾರಣಾಸಿಯಲ್ಲಂತೂ ವ್ಯಾಪಾರಿಯೊಬ್ಬ ಟೊಮ್ಯಾಟೋ ಕಾಯಲೆಂದು 2 ಬೌನ್ಸರ್​ಗಳನ್ನು ನೇಮಕ ಮಾಡಿರುವ ಸಂಗತಿ ಬೆಳಕಿಗೆ ಬಂದಿತ್ತು. ಆದರೀಗ ಆ ವ್ಯಾಪಾರಿ ಮತ್ತು ಆತನ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ

ನಾರಾಯಣ್​ ಯಾದವ್​ ಹಾಗೂ ಮಗ ವಿಕಾಸ್​ ಯಾದವ್​​ನನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲೆಂದು ಟೊಮ್ಯಾಟೋ ಅಂಗಡಿಯ ಮಾಲೀಕನಾದ ಅಜಯ್​ ಫೌಜಿ 2 ಬೌನ್ಸರ್​ಗಳನ್ನು ನೇಮಿಸಿಕೊಂಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾನೆ. ಆದರೆ ಈ ವಿಚಾರ ಭಾರೀ ವೈರಲ್​ ಆಗಿತ್ತು.

ಫೌಜಿ ನಾಪತ್ತೆ

ಅಜಯ್​ ಫೌಜಿ ಸಮಾಜವಾದಿ ಪಕ್ಷದವನಾಗಿದ್ದು, ವಿಚಾರಣೆ ವೇಳೆ ಸರ್ಕಾರಕ್ಕೆ ಕೆಟ್ಟ ಹೆಸರು ತರಲೆಂದು ಇಬ್ಬರು ಬೌನ್ಸರ್​ ನೇಮಕ ಮಾಡಿರೋದಾಗಿ ಬೆಳಕಿಗೆ ಬಂದಿದೆ. ಇದೇ ಕಾರಣಕ್ಕೆ ಫೌಜಿ ಮೇಲೆ ಗಲಭೆ ಪ್ರಚೋದನ ಪ್ರಕರಣ ದಾಖಲಿಸಲಾಗಿದೆ. ಆದರೆ ಫೌಜಿ ಮಾತ್ರ ನಾಪತ್ತೆಯಾಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೊಮ್ಯಾಟೋ ಕಾಯಲು 2 ಬೌನ್ಸರ್​ ನೇಮಿಸಿಕೊಂಡಿದ್ದ ಅಂಗಡಿ ಮಾಲೀಕನ ಬಂಧನ! ಯಾಕೆ? 

https://newsfirstlive.com/wp-content/uploads/2023/07/Tomatto-1.jpg

Load More