ಭಿನ್ನ ವಿಭಿನ್ನ ವಿಡಿಯೋ ಮೂಲಕ ನೆಟ್ಟಿಗರ ಗಮನ ಸೆಳೆದಿರೋ ವರ್ಷ
ಈ ಬಾರಿ ಬಿಗ್ಬಾಸ್ಗೆ ಹೋಗೇ ಹೋಗ್ತಾರೆ ಅಂದುಕೊಂಡಿದ್ದಾರೆ ಫ್ಯಾನ್ಸ್!
ಬಿಗ್‌ಬಾಸ್ ಸೀಸನ್ 11ಗೆ ಎಂಟ್ರಿ ಕೊಡ್ತಾರಾ ರೀಲ್ಸ್ ರಾಣಿ ವರ್ಷ ಕಾವೇರಿ?
ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ತಮ್ಮದೇ ಆದ ಹವಾ ಕ್ರಿಯೇಟ್ ಮಾಡಿದ್ದಾರೆ ವರ್ಷ ಕಾವೇರಿ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ಸ್ ಹಾಗೂ ಫೋಟೋಸ್ ಮೂಲಕ ನೆಟ್ಟಿಗರ ಗಮನ ಸೆಳೆದಿರೋ ಕ್ರಿಯೆಟಿವ್ ಕ್ರಿಯೆಟರ್ ವರ್ಷ ಈಗ ಸ್ಟೋರಿಯೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಹೌದು, ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಈ ಬಾರಿಯ ಬಿಗ್ಬಾಸ್ಗೆ ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷ ಕಾವೇರಿ ಹೋಗುತ್ತಾರೆ ಅಂತ ಫೋಟೋಗಳು ವೈರಲ್ ಆಗಿದ್ದವು. ಸಾಕಷ್ಟು ನೆಟ್ಟಿಗರು ಕೂಡ ಇದೇ ನಿಜ ಅಂತ ಅಂದುಕೊಂಡಿದ್ದರಂತೆ. ಹೀಗಾಗಿ ನಟಿಗೆ ಸಾಕಷ್ಟು ಜನ ಮೆಸೇಜ್ ಮಾಡಲು ಶುರು ಮಾಡಿದ್ದರಂತೆ. ಹೀಗಾಗಿ ವರ್ಷ ಕಾವೇರಿ ಇನ್ಸ್ಟಾದಲ್ಲಿ ಸ್ಟೋರಿ ಶೇರ್ ಮಾಡಿಕೊಳ್ಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್ ಬೆಡಗಿ ಸಂಗೀತಾ ಶೃಂಗೇರಿಗೆ ಒಲಿದ ಅವಾರ್ಡ್; ಅನುಬಂಧದಲ್ಲಿ ಗಿಟ್ಟಿಸಿಕೊಂಡ ಬಿರುದೇನು?
ಸದ್ಯ ಎಲ್ಲೆಲ್ಲೂ ಬಿಗ್‌ಬಾಸ್ ಬಗ್ಗೆ ಫೀವರ್ ಶುರುವಾಗಿದೆ. ಯಾವಾಗಪ್ಪಾ ಬಿಗ್‌ಬಾಸ್ ಶುರುವಾಗುತ್ತೆ ಅಂತ ವೀಕ್ಷಕರು ಕಾಯುತ್ತಿದ್ದಾರೆ. ಅದರಲ್ಲೂ ಕೆಲವರು ಸೀಸನ್ 11ಕ್ಕೆ ಬರುವ ಸ್ಪರ್ಧಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲೂ ಬಿಗ್‌ಬಾಸ್ ಶುರುವಾಗುವ ಎರಡು ತಿಂಗಳ ಮುಂಚೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಹೆಸರುಗಳು ಹರಿದಾಡಲು ಶುರು ಮಾಡಿದ್ದವು. ಆ ಪಟ್ಟಿಯಲ್ಲಿ ವರ್ಷ ಕಾವೇರಿ ಅವರ ಹೆಸರನ್ನು ನೋಡಿದ ಸಾಕಷ್ಟು ಮಂದಿ ಇವರು ಹೋದರೆ ಚೆನ್ನಾಗಿರುತ್ತೆ ಅಂತೇಲ್ಲಾ ಕಾಮೆಂಟ್ಸ್ ಹಾಕಿದ್ದರು.
ಆದರೆ ಜನರು ನಂಬುತ್ತಿದ್ದ ಸುಳ್ಳು ಸುದ್ದಿಗೆ ವರ್ಷ ಕಾವೇರಿ ತೆರೆ ಎಳೆದಿದ್ದಾರೆ. ನೀವು ನೋಡುವುದೆಲ್ಲವೂ ಅಥವಾ ಕೇಳುವುದೆಲ್ಲವೂ ಒಂದು ಕಥೆ ಎಂದು ನೀವು ತಿಳಿದಿರಬೇಕು. ಟಿಆರ್‌ಪಿಗಾಗಿ ಅವರೇ ಕಥೆ ಕಟ್ಟುವವರು. ನಾನು ಯಾವುದೇ ರಿಯಾಲಿಟಿ ಶೋಗೆ ಹೋಗುವುದಿಲ್ಲ. ನನ್ನ ಪ್ರೊಫೈಲ್ ಅಥವಾ ಸುದ್ದಿ ಚಾನಲ್ ಪ್ರೊಫೈಲ್‌ನಲ್ಲಿ ಜನರು ಕಾಮೆಂಟ್ ಮಾಡುವುದನ್ನು ನಾನು ನೋಡಿದ್ದೇನೆ. ಆ ಬಗ್ಗೆ ನಾನು ತಿಳಿಸುವವರೆಗೂ ಅದನ್ನು ನಂಬಬೇಡಿ. ನಾನು ಹೋಗುತ್ತಿದ್ದರೆ, ನಿಮಗೆ ಸುಳಿವು ಸಿಗುತ್ತದೆ. ಸದ್ಯಕ್ಕೆ ನಾನು ಹೋಗುತ್ತಿಲ್ಲ ನನಗೆ ತುಂಬಾ ಜವಾಬ್ದಾರಿಗಳು ಮತ್ತು ಕಾಳಜಿ ವಹಿಸಲು ವಿಷಯಗಳಿವೆ. ಪ್ರದರ್ಶನಕ್ಕೆ ಹೋಗಲು ನಾನು ಏನನ್ನೂ ಸಾಧಿಸಲಿಲ್ಲ. ಹಲವಾರು ಸಾಧನೆಗಳನ್ನು ಮಾಡಿದ ಜನರಿದ್ದಾರೆ ನಾನು ಯಾರೂ ಅಲ್ಲ ನಾನು ಕೇವಲ ಬೆಳೆಯುತ್ತಿರುವ ವ್ಯಕ್ತಿ ನಾನು ಸಾಧಿಸಲು ಇನ್ನೂ ಹೆಚ್ಚಿನ ಸಮಯವಿದೆ ನಂತರ ನೋಡೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ