newsfirstkannada.com

ಹುಲಿ ಉಗುರು ಬೆನ್ನಲ್ಲೇ ಬಿಗ್​ಬಾಸ್ ಸ್ಪರ್ಧಿ ವರ್ತೂರು ಸಂತೋಷ್​ಗೆ ಮತ್ತೊಂದು ಸಂಕಷ್ಟ.. ಕಾರಣವೇನು?

Share :

Published June 25, 2024 at 10:13am

Update June 25, 2024 at 5:09pm

  ವರ್ತೂರು ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಿದ ಅಧಿಕಾರಿ

  ಈಗಾಗಲೇ ಪೊಲೀಸ್​ ಠಾಣೆಗೆ ಹಾಜರಾದ ಹಳ್ಳಿಕಾರ್ ಸಂತೋಷ್

  ಕೋರ್ಟ್​ಗೆ ಹೋಗಲು ರೆಡಿಯಾದ್ರಾ ದೂರುದಾರ?

ಬೆಂಗಳೂರು: ವರ್ತೂರು ಸಂತೋಷ್, ಹಳ್ಳಿಕಾರ್ ಸಂತೋಷ್ ಎಂದೇ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕಳೆದ ಬಿಗ್​ಬಾಸ್​​ನಲ್ಲೂ ಸ್ಪರ್ಧೆ ಮಾಡಿ ಸೈ ಎನಿಸಿಕೊಂಡಿದ್ದವರು. ಇವರು ಬಿಗ್​ಬಾಸ್​ ಮನೆಯಲ್ಲಿ ಇರುವಾಗಲೇ ಹುಲಿ ಉಗುರು ಧರಿಸಿದ್ದಾರೆಂದು ಅರೆಸ್ಟ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಸಂತೋಷ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ‘ಕಷ್ಟದಲ್ಲಿದ್ದಾಗ ತುಳಿಯೋಕೆ ಬಂದ್ರು.. ಅವ್ರಿಗೆ ಉತ್ತರ ಕೊಡ್ತೀನಿ’ – ವರ್ತೂರು ಸಂತೋಷ್ ಖಡಕ್ ಸವಾಲು! 

ವರ್ತೂರ್ ಸಂತೋಷ್ ಅವರು ಪ್ರಾಣಿಗಳ ಸಾಗಾಣಿಕೆ ಮಾಡುವಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಇದೆ. SPCA ಪ್ರಾಣಿ ಕಲ್ಯಾಣ ಅಧಿಕಾರಿ (SPCA animal welfare officer) ಹರೀಶ್​ ಅವರು ಸಂಬಂಧ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವರ್ತೂರು ಸಂತೋಷ್ ಅವರು ಒಂದು ಸುತ್ತಿನ ವಿಚಾರಣೆ ಮುಗಿಸಿದ್ದಾರೆ. ಕೇವಲ ಎನ್​ಸಿಆರ್​ ಮಾಡಿ ಪ್ರಕರಣ ಮುಚ್ಚಿ ಹಾಕುವುದ ಬೇಡ. ಎಫ್​ಐಆರ್​ ದಾಖಲು ಮಾಡಿ ಕೋರ್ಟ್​​ ಮೆಟ್ಟಿಲೇರಲು ದೂರುದಾರ ಹರೀಶ್ ಅವರು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಎಫ್​ಐಆರ್ ದಾಖಲಾದರೆ ವರ್ತೂರು ಸಂತೋಷ್​ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ನನ್ನ ಮಗನಿಗೆ ಮೋಸ ಮಾಡಿದ್ದೀರಿ’- ಎಲಿಮಿನೇಟ್​​ ಮಾಡಿದ ಬಿಗ್​ಬಾಸ್​​ ವಿರುದ್ಧ ವರ್ತೂರು ಸಂತೋಷ್ ತಾಯಿ ​ಆಕ್ರೋಶ 

ಏನಿದು ಪ್ರಕರಣ?

ವರ್ತೂರು ಸಂತೋಷ್ ಅವರು ಒಂದು ಕಡೆ ಹಳ್ಳಿಕಾರ್ ರೇಸ್​ಗೆ ಸಿದ್ಧತೆ ನಡೆಸಿದ್ದಾರೆ. ಇದು ಇರುವಾಗಲೇ ಹಳ್ಳಿಕಾರ್ ಹಸುಗಳನ್ನ ವಾಹನದಲ್ಲಿ ಸಾಗಾಣಿಕೆ ಮಾಡುವಾಗ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಒಂದೇ ಒಂದು ಟ್ರಕ್​ನಲ್ಲಿ ಬರೋಬ್ಬರಿ 9 ಹೋರಿಗಳನ್ನು ಹಾಗೂ ಇತರೆ ಸಂಬಂಧಿಸಿದ ವಸ್ತುಗಳನ್ನಿಟ್ಟು ಫಾರ್ಮ್ ಹೌಸ್​ನಿಂದ ಸಾಗಾಟ ಮಾಡಿರುವ ಆರೋಪ ಇದೆ. ಇದು ಪ್ರಾಣಿ ಹಿಂಸೆ, ಪ್ರಾಣಿಗಳ ಸಾಗಾಟ ನಿಯಮವನ್ನು ಉಲ್ಲಂಘಿಸದಂತೆ ಆಗುತ್ತದೆ. ಇದೇ ಸಂಬಂಧ ಠಾಣೆಗೆ ದೂರು ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಲಿ ಉಗುರು ಬೆನ್ನಲ್ಲೇ ಬಿಗ್​ಬಾಸ್ ಸ್ಪರ್ಧಿ ವರ್ತೂರು ಸಂತೋಷ್​ಗೆ ಮತ್ತೊಂದು ಸಂಕಷ್ಟ.. ಕಾರಣವೇನು?

https://newsfirstlive.com/wp-content/uploads/2024/06/VARTURU_SANTHOSH.jpg

Load More