newsfirstkannada.com

ವರ್ತೂರು ಸಂತೋಷ್‌ಗಾಗಿ ಅಮ್ಮನೇ ಬಂದ್ರು.. ಬಿಗ್‌ಬಾಸ್‌ ಮನೆಯಲ್ಲಿ ಹಳ್ಳಿಕಾರ್ ಹೈದ ಆಟ ಆಡೋದು ಪಕ್ಕಾ?

Share :

Published November 13, 2023 at 2:36pm

    ವರ್ತೂರು ಸಂತೋಷ್ ಅವರಿಗೆ ಆತ್ಮಸ್ಥೈರ್ಯ ತುಂಬಲು ಬಂದ ಅಮ್ಮ

    ಅಮ್ಮನ ಮಡಿಲಿನಲ್ಲಿ ಮಲಗಿ ಕಣ್ಣೀರಿಟ್ಟ ವರ್ತೂರು ಸಂತೋಷ್

    ಅಮ್ಮನ ಮಾತುಗಳಿಂದ ವರ್ತೂರು ಸಂತೋಷ್ ನಿರ್ಧಾರ ಬದಲಾಗುತ್ತಾ?

ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್‌ ಮನೆಯಲ್ಲಿ ಕಿಚ್ಚನ ಜೊತೆ ಮನೆಯ ಸದಸ್ಯರೆಲ್ಲರೂ ದೀಪಾವಳಿ ಹಬ್ಬವನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ದೀಪಾವಳಿ ಹಬ್ಬದ ಖುಷಿಯ ಜೊತೆ ಬೇಸರ ಕೂಡ ಆಗಿದೆ. ಬೇಸರಕ್ಕೆ ಕಾರಣ ವರ್ತೂರು ಸಂತೋಷ್ ಅವರ ನಿರ್ಧಾರ.

ವರ್ತೂರು ಸಂತೋಷ್ ಅವರು ಬಿಗ್ ಬಾಸ್‌ ಮನೆಯಿಂದ ಆಚೆ ಬರಲೇ ಬೇಕು ಎನ್ನುವ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಮನೆಯಲ್ಲಿ ವರ್ತೂರು ಸಂತೋಷ್ ಅವರ ಮಾನಸಿಕ ಸ್ಥಿತಿ ಗಂಭೀರ ಎನ್ನುವಂತಾಗಿದೆ. ಸಂತೋಷ್‌ ಅವರ ಮನವೊಲಿಸಲು ಕಿಚ್ಚ ಸುದೀಪ್‌ ಕೂಡ ಒಂದಷ್ಟು ವಿಚಾರಗಳನ್ನು ಕೂಡ ಹೇಳಿದ್ದಾರೆ. ನಿಮ್ಮ ಕುಟುಂಬ ನಿಮ್ ಸ್ನೇಹಿತರು ಎಲ್ಲರೂ ಕ್ಷೇಮವಾಗಿದ್ದಾರೆ. ಏನು ಬೇಸರ ಪಡದೆ ಇರುವಷ್ಟು ದಿನ ಆರಾಮಾಗಿ ಆಟ ಆಡಿ ಎಂದು ಧೈರ್ಯ ಹೇಳಿದ್ದಾರೆ. ವರ್ತೂರು ಅವರಿಗೆ ಅದೇಷ್ಟು ಲಕ್ಷಾಂತರ ಅಭಿಮಾನಿಗಳು ಇದ್ದಾರೆ ಅನ್ನೋದನ್ನ ಕೂಡ ಬಿಡಿಸಿ ಹೇಳಿದ್ದಾರೆ.

ಇಷ್ಟಾದ ನಂತರದಲ್ಲಿಯೂ ವರ್ತೂರು ಸಂತೋಷ್ ಅವರ ಮಾನಸಿಕ ಸ್ಥಿತಿ ಸರಿಯಾಗಿಲ್ಲ. ಅವರಿಗೆ ಆಚೆಯ ಸ್ಥಿತಿಗತಿಗಳು ತುಂಬಾ ಗಂಭೀರವಾಗಿ ಕಾಡ್ತಿದೆ. ಇನ್ನೂ ಮನೆಯ ಸದಸ್ಯರು ಕೂಡ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅದಕ್ಕೂ ಕರಗದ ವರ್ತೂರು ಅವರಿಗೆ ದೀಪಾವಳಿಯ ಗೆಸ್ಟ್ ಆಗಿ ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾಗ್ಯ ಕೂಡ ಒಳಗೆ ಹೋಗಿ ಆಚೆಯ ಸ್ಥಿತಿ ಏನು ಆಗಿಲ್ಲ. ನೀವು ಧೈರ್ಯ ತಗೊಳ್ಳಿ ಎಂದು ಸಮಾಧಾನ ಮಾಡೋ ಪ್ರಯತ್ನ ಮಾಡಿದ್ದಾರೆ. ಇದಕ್ಕೂ ಇಲ್ಲ ಎಂದಿದ್ದಾರೆ ವರ್ತೂರು ಸಂತೋಷ್.

ಬಿಗ್‌ ಬಾಸ್‌ ಮನೆಯೊಳಗೆ ವರ್ತೂರು ಸಂತೋಷ್ ಆಡಲೇ ಬೇಕು ಅನ್ನೋ ಕಾರಣಕ್ಕೆ ಬಿಗ್ ಬಾಸ್ ಟೀಮ್ ಇದೀಗ ವರ್ತೂರು ಸಂತೋಷ್ ಅವರ ತಾಯಿಯನ್ನ ಒಳಗೆ ಕಳುಹಿಸಿದ್ದಾರೆ. ಇದು ಬಿಗ್‌ಬಾಸ್ ಇತಿಹಾಸದಲ್ಲೇ ಮೊಟ್ಟ ಮೊದಲನೇ ಬಾರಿಗೆ ನಡೆದಿರೋ ಘಟನೆ. ಮಗನಿಗೆ ಆತ್ಮ ಸ್ಥೈರ್ಯ ತುಂಬಲು ಸಂತೋಷ್ ಆವರ ತಾಯಿಯೇ ದೀಪಾವಳಿ ಹಬ್ಬದ ಉಡುಗೊರೆಗಳನ್ನು ತೆಗೆದುಕೊಂಡು ಮಗನನ್ನು ಕಾಣಲು ಒಳಗಡೆ ಬಂದಿದ್ದಾರೆ. ಅಮ್ಮನ ನೋಡಿದ ಖುಷಿಯಲ್ಲಿ ವರ್ತೂರು ಸಂತೋಷ್ ಅವರ ಕಣ್ಣಾಲೆಗಳು ಒದ್ದೆಯಾಗಿದೆ.

ಸದ್ಯ ವರ್ತೂರು ಸಂತೋಷ್ ಅವರಿಗೆ ಆತ್ಮಸ್ಥೈರ್ಯ ತುಂಬಲು ಅವರ ತಾಯಿ ಬಿಗ್‌ಬಾಸ್ ಮನೆಯೊಳಗೆ ಬಂದಿದ್ದಾರೆ. ಅಮ್ಮನ ಮಡಿಲಿನಲ್ಲಿ ಮಲಗಿ ಸಂತಸಗೊಂಡಿರುವ ವರ್ತೂರು ಸಂತೋಷ್ ಅವರು ಧೈರ್ಯ ತಂದುಕೊಂಡು ಮತ್ತೆ ಮನೆಯಲ್ಲಿ ರೇಸ್​ಗೆ ಇಳಿಯುತ್ತಾರಾ. ಅಮ್ಮನ ಮಾತುಗಳಿಂದ ಸಂತೋಷ್ ಬಿಗ್‌ಬಾಸ್‌ ಮನೆಯಲ್ಲಿ ಆಟವನ್ನ ಮುಂದುವರೆಸುತ್ತಾರಾ ಅನ್ನೋದೇ ಸದ್ಯದ ಕುತೂಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರ್ತೂರು ಸಂತೋಷ್‌ಗಾಗಿ ಅಮ್ಮನೇ ಬಂದ್ರು.. ಬಿಗ್‌ಬಾಸ್‌ ಮನೆಯಲ್ಲಿ ಹಳ್ಳಿಕಾರ್ ಹೈದ ಆಟ ಆಡೋದು ಪಕ್ಕಾ?

https://newsfirstlive.com/wp-content/uploads/2023/11/Varthur-Santhosh-4.jpg

Load More