newsfirstkannada.com

ವರ್ತೂರು ಸಂತೋಷ್ ಗೇಮ್ ಸ್ಟಾರ್ಟ್‌ ನೌ.. ಕೊನೆಗೂ ಮಗನಿಗೆ ಧೈರ್ಯ ತುಂಬಿದ ಅಮ್ಮ; ಹಳ್ಳಿಕಾರ್‌ ಆಟ ಈಗ ಶುರು!

Share :

14-11-2023

    ಅಮ್ಮನ ಮಾತು ಕೇಳಿ ಕೊನೆಗೂ ಬದಲಾಯ್ತು ವರ್ತೂರು ಸಂತೋಷ್​ ನಿರ್ಧಾರ

    ಬಿಗ್​ಬಾಸ್​​​ ಸ್ಪರ್ಧಿ ವರ್ತೂರು ಸಂತೋಷ್​ಗೆ ಆತ್ಮಸ್ಥೈರ್ಯ ತುಂಬಿದ ಅಮ್ಮ

    ವರ್ತೂರು ಸಂತೋಷ್​ ವಿಡಿಯೋ ನೋಡಿ ತಾಯಿಗೆ ತಕ್ಕ ಮಗ ಎಂದ ನೆಟ್ಟಿಗರು

ಮೊನ್ನೆಯಿಂದ ಬಿಗ್​ಬಾಸ್ ಮನೆಯಲ್ಲಿ ವರ್ತೂರು ಸಂತೋಷರದ್ದೇ ಮಾತು. ನಾಮಿನೇಟ್ ಪ್ರಕ್ರಿಯೆಯಿಂದ ಸಂತೋಷ್ ಸೇಫ್ ಅಂತ ಕಿಚ್ಚ ಸುದೀಪ್​ ಅವರು ಹೇಳಿದ ಮೇಲೂ, ಈ ಮನೆಯಲ್ಲಿ ಇರೋಕೆ ನನಗೆ ಆಗುತ್ತಿಲ್ಲ ಅಂತ ವರ್ತೂರು ಸಂತೋಷ್ ಕಣ್ಣೀರಿಟ್ಟರು. ಅದಕ್ಕೆ ತಮ್ಮದೇ ಆದ ಕಾರಣವನ್ನೂ ಕೊಟ್ಟರು. ಆದರೂ, ಅವರನ್ನ ಮನವೊಲಿಸೋ ಪ್ರಯತ್ನ ಮಾಡಲಾಯಿತು. ಯಾವುದಕ್ಕೂ ಜಗ್ಗಲಿಲ್ಲ. ಆದರೆ ಯಾವಾಗ ಬಿಗ್​ಬಾಸ್​ ಮನೆಗೆ ಅಮ್ಮನ ಆಗಮನವಾಯಿತೋ ಆಗಿನಿಂದ ವರ್ತೂರು ಸಂತೋಷ್​ ಮುಖದಲ್ಲಿ ಮಂದಹಾಸ ಮೂಡಿದೆ.

ಹೌದು, ಬಿಗ್​ಬಾಸ್‌ ಮನೆಯೊಳಗೆ ವರ್ತೂರು ಸಂತೋಷ್ ಆಡಲೇ ಬೇಕು ಅನ್ನೋ ಕಾರಣಕ್ಕೆ ಬಿಗ್​ಬಾಸ್​ ಟೀಮ್ ಒಂದು ಪ್ಲಾನ್​ ಮಾಡಿಕೊಂಡರು. ಬಿಗ್​ಬಾಸ್​ ಮನೆಗೆ ವರ್ತೂರು ಸಂತೋಷ್ ಅವರ ತಾಯಿಯನ್ನ ಕಳುಹಿಸಿದ್ದಾರೆ. ಇದು ಬಿಗ್‌ಬಾಸ್ ಇತಿಹಾಸದಲ್ಲೇ ಮೊಟ್ಟ ಮೊದಲನೇ ಬಾರಿಗೆ ನಡೆದಿರೋ ಘಟನೆಯಾಗಿದೆ. ಇನ್ನೂ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಹೊಸ ಪ್ರೋಮೋವೊಂದು ರಿಲೀಸ್​ ಆಗಿದೆ. ರಿಲೀಸ್​ ಆದ ಪ್ರೋಮೊದಲ್ಲಿ ಬಿಗ್​ಬಾಸ್​ ಮನೆಗೆ ವರ್ತೂರು ಸಂತೋಷ್ ಅವರ ತಾಯಿ ಭೇಟಿ ಕೊಟ್ಟು ಮಗನಿಗೆ ಆತ್ಮ ಸ್ಥೈರ್ಯ ತುಂಬಿದ್ದಾರೆ. ಅಮ್ಮನ ನೋಡಿದ ಖುಷಿಯಲ್ಲಿ ವರ್ತೂರು ಸಂತೋಷ್ ಅವರು ಕಣ್ಣೀರು ಹಾಕಿದ್ದಾರೆ.

ಸದ್ಯ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಸಂತೋಷ್ ತಾಯಿ, ಜನ ನಿನ್ನ ಹಿಂದೆ ಇದ್ದಾರೆ ಅದಕ್ಕೆ ನೀನು ಬೆಲೆ ಕೊಡಬೇಕು. ನೀನು ಈಗಾಗಲೇ ಮುಂದೆ ಹೆಜ್ಜೆ ಇಟ್ಟಿದ್ದೀಯಾ ಹಿಂದೆ ಇಡಬೇಡ. ಇದೊಂದು ಗೆದ್ದುಕೊಂಡ ಬಾ ಕಂದ. ರಾಜ ಅಲ್ಲ ಮಹಾರಾಜ ಆಗುತ್ತೀಯಾ ನೀನು ಎಂದು ಹೇಳುತ್ತಾರೆ. ಅಮ್ಮನ ಮಾತಿಗೆ ಸಂತೋಷ್ ಅವರು ಖುಷಿಯಿಂದ ಒಪ್ಪಿಕೊಂಡು ಮನೆ ಮಂದಿಯ ಮುಂದೆ ಈಗ ಗೇಮ್​​​ ಸ್ಟಾರ್ಟ್​​ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳುತ್ತಿದ್ದಂತೆ ಉಳಿದ ಸ್ಪರ್ಧಿಗಳು ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರ್ತೂರು ಸಂತೋಷ್ ಗೇಮ್ ಸ್ಟಾರ್ಟ್‌ ನೌ.. ಕೊನೆಗೂ ಮಗನಿಗೆ ಧೈರ್ಯ ತುಂಬಿದ ಅಮ್ಮ; ಹಳ್ಳಿಕಾರ್‌ ಆಟ ಈಗ ಶುರು!

https://newsfirstlive.com/wp-content/uploads/2023/11/bigg-boss-2023-11-14T080944.661.jpg

Load More