ಬಿಗ್ಬಾಸ್ ಮನೇಲಿ ಸ್ಪರ್ಧೆಗಳ ಬಗ್ಗೆ ವರ್ತೂರು ಭವಿಷ್ಯ
ವರ್ತೂರು ಫನ್ನಿ ಭವಿಷ್ಯಕ್ಕೆ ಬಿದ್ದುಬಿದ್ದು ನಕ್ಕ ಇತರೆ ಸ್ಪರ್ಧಿಗಳು
ವೈಲ್ಡ್ ಲೈಫ್ ಅನಿಮಲ್ ಆ್ಯಕ್ಟ್ ಅಡಿಯಲ್ಲಿ ವರ್ತೂರು ಬಂಧನ
ವೈಲ್ಡ್ ಲೈಫ್ ಅನಿಮಲ್ ಆ್ಯಕ್ಟ್ ಅಡಿಯಲ್ಲಿ ರಾಮೇಹಳ್ಳಿ ಅರಣ್ಯಾಧಿಕಾರಿಗಳು ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ನನ್ನು ಬಂಧಿಸಿದ್ದಾರೆ. ಸಂತೋಷ್ ವಿರುದ್ಧ ಹುಲಿ ಉಗುರಿನ ಲಾಕೆಟ್ ಧರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಅರಣ್ಯಾಧಿಕಾರಿಗಳು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಿಗ್ಬಾಸ್ ಮನೆಗೆ ಅರಣ್ಯಾಧಿಕಾರಿಗಳು ಎಂಟ್ರಿ ನೀಡುತ್ತಿದ್ದಂತೆಯೇ, ಬಿಗ್ಬಾಸ್ ಸ್ಪರ್ಧಿ ಒಂದು ಕ್ಷಣ ಶಾಕ್ ಆಗಿದ್ದಾರೆ. ಅಲ್ಲದೇ ಬಿಗ್ಬಾಸ್ ವೀಕ್ಷಕರಿಗೂ ತೀವ್ರ ಕುತೂಹಲ ಮೂಡಿಸಿದೆ.
ಏಕಾಏಕಿ ಸಂತೋಷ್ ಬಂಧನ ಹಿನ್ನೆಲೆಯಲ್ಲಿ ಇವತ್ತಿನ ಬಿಗ್ಬಾಸ್ ಮನೆಯಲ್ಲಿ ಏನಾಗಲಿದೆ ಅನ್ನೋ ಕುತೂಹಲ ಮೂಡಿದೆ. ಆದರೆ ಕಲರ್ಸ್ ಕನ್ನಡ ಪ್ರೊಮೋ ಒಂದನ್ನು ರಿಲೀಸ್ ಮಾಡಿದೆ. ಆ ಪ್ರಮೋದಲ್ಲಿ ಸಂತೋಷ್, ಸ್ಪರ್ಧಿಗಳ ಜೊತೆ ತಮಾಷೆಯಿಂದ ಇರೋದನ್ನು ನೋಡಬಹುದು.
ತುಕಾಲಿ ಸಂತೋಷ್, ರಕ್ಷಕ್, ಸ್ನೇಹಿತ್, ವಿನಯ್ ಗೌಡ ಹಾಗೂ ವರ್ತೂರ್ ಸಂತೋಷ್ ಲೀವಿಂಗ್ ಏರಿಯಾದಲ್ಲಿ ಕೂತಿರುತ್ತಾರೆ. ಆಗ ತುಕಾಲಿ ಸಂತೋಷ್ ಅವರು, ಸ್ನೇಹಿತ್ ಅವರ ಭವಿಷ್ಯ ಹೇಳಿ ಎಂದು ವರ್ತೂರ್ ಸಂತೋಷ್ಗೆ ಕೇಳಿಕೊಳ್ತಾರೆ. ‘ಗುರುಗಳೇ..’ ಎಂದು ತುಕಾಲಿ ಸಂತೋಷ್ ಧ್ವನಿ ಎಳೆಯುತ್ತಾರೆ.. ಅದಕ್ಕೆ ‘ನೋಡು ಮಗ..’ ಎಂದು ವರ್ತೂರು ಪ್ರತಿಕ್ರಿಯಿಸುತ್ತಾರೆ. ಆಗ ಮುಂದೆ ಸ್ನೇಹಿತ್ ಏನಾಗುತ್ತಾನೆ ಎಂದು ತುಕಾಲಿ ಕೇಳುತ್ತಾರೆ. ‘ಒಳ್ಳೆ ಮನುಷ್ಯ ಆಗುತ್ತಾನೆ’ ಎನ್ನುತ್ತಾರೆ. ಆಗ ತುಕಾಲಿ ನನ್ನ ಬಗ್ಗೆ ಹೇಳು ಎನ್ನುತ್ತಾರೆ..
ಆಗ ತಮಾಷೆಯಾಗಿ ಭವಿಷ್ಯ ನುಡಿದ ವರ್ತೂರು.. ಇಲ್ಲಿಂದ ಹೊರಗಡೆ ಹೋದ್ಮೇಲೆ ನಾಯಿಗೆ ಹೊಡೆದಂಗೆ ಹೊಡೆಯುತ್ತಾರೆ ಜನ ಎನ್ನುತ್ತಾರೆ. ಈ ಮಾತು ಕೇಳಿ ಇತರೆ ಸ್ಪರ್ಧಿಗಳು ಗೊಳ್ ಎಂದು ನಗುತ್ತಾರೆ. ಮುಂದಕ್ಕೆ ಇನ್ನೂ ಹೇಳಬೇಕು ಅಂದರೆ ನಮ್ಮನ್ನು ಕರೆದು ಎಡೆ ಇಡಬೇಕು ಅಂತಾರೆ. ತಮಾಷೆ ಪ್ರಸಂಗದ ಸಂಪೂರ್ಣ ಎಪಿಸೋಡ್ ಇವತ್ತು ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ