ಬಿಗ್ಬಾಸ್ಗೆ ಗ್ರ್ಯಾಂಡ್ ಆಗಿ ರೀ ಎಂಟ್ರಿ ಕೊಟ್ಟಿದ್ದ ವರ್ತೂರು ಸಂತೋಷ್
ಕಿಚ್ಚ ಸುದೀಪ್ ಮುಂದೆ ವರ್ತೂರು ಸಂತೋಷ್ ಹೀಗೆ ಹೇಳಿದ್ದು ಯಾಕೆ?
34,15,472 ಮತಗಳನ್ನು ಪಡೆದುಕೊಂಡು ಮನೆಯಿಂದ ಹೊರಗೆ ಹೋಗ್ತಾರಾ?
ಕನ್ನಡ ಕಿರುತೆರೆ ಬಿಗ್‌ಬಾಸ್ ರಿಯಾಲಿಟಿ ಶೋ ವೀಕ್ಷಕರಿಗೆ ಇವತ್ತು ಹೊಸ ಟ್ವಿಸ್ಟ್ ಕಾದಿದೆ. ಹುಲಿ ಉಗುರಿನ ಪೆಂಡೆಟ್ ಧರಿಸಿದ ಆರೋಪದಲ್ಲಿ ಹೊರಗೆ ಬಂದು ಒಳಗೆ ಹೋಗಿದ್ದ ವರ್ತೂರ್ ಸಂತೋಷ್ ಅವರು ಮತ್ತೆ ಹೊರಗೆ ಬರುವ ತೀರ್ಮಾನ ಮಾಡಿದ್ದಾರೆ. ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಿಗ್‌ಬಾಸ್ ಪ್ರೋಮೋವೊಂದು ರಿಲೀಸ್ ಆಗಿದೆ. ರಿಲೀಸ್ ಆದ ಪ್ರೋಮೋದಲ್ಲಿ ಬಿಗ್‌ಬಾಸ್ ಸ್ಪರ್ಧಿ ವರ್ತೂರ ಸಂತೋಷ್ ಅವರು ನನಗೆ ಇಲ್ಲಿ ಇರಲು ಆಗುತ್ತಿಲ್ಲ. ದಯಮಾಡಿ ಆಚೆ ಕಳುಹಿಸಿ ಎಂದು ಕಿಚ್ಚ ಸುದೀಪ್ ಮುಂದೆ ಬೇಡಿಕೊಂಡಿದ್ದಾರೆ.
ಬಿಗ್‌ಬಾಸ್ ಸೀಸನ್ 10ಕ್ಕೆ ವರ್ತೂರು ಸಂತೋಷ್ ಅವರು ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದರು. ಕೆಲ ದಿನಗಳ ಹಿಂದೆ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪದ ಮೇಲೆ ವರ್ತೂರು ಸಂತೋಷ್ ಅವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದರು. ವರ್ತೂರು ಸಂತೊಷ್ ಬಿಗ್‌ಬಾಸ್ ಮನೆಯಿಂದ ಹೊರ ಬಂದು ಒಂದೇ ವಾರದಲ್ಲಿ ಜೈಲಿಗೂ ಸಹ ಹೋಗಿದ್ದರು. ಅಲ್ಲಿಂದ ಒಂದು ವಾರದ ಬಳಿಕ ಕೋರ್ಟ್ನ ಎಲ್ಲಾ ರೀತಿಯ ನಿಯಮಗಳು ಷರತ್ತುಗಳು ಮುಗಿದ ಮೇಲೆ ವರ್ತೂರ್ ಸಂತೋಷ್ ಬಿಗ್‌ಬಾಸ್ ಮನೆಗೆ ವಾಪಸ್ ಆಗಿದ್ದರು.
View this post on Instagram
ಆದರೆ ಈಗ ನನಗೆ ಬಿಗ್‌ಬಾಸ್ ಮನೆಯಲ್ಲಿ ಆಡಲು ಆಗುತ್ತಿಲ್ಲ. ನಾನು ಬಿಗ್‌ಬಾಸ್ ಮನೆಯಿಂದ ಹೊರಗಡೆ ಹೋಗಲು ಇಷ್ಟ ಪಡುತ್ತೇನೆ. ನನ್ನನ್ನು ಕಳುಹಿಸಿ ಎಂದು ವರ್ತೂರು ಸಂತೋಷ್ ಕಿಚ್ಚ ಸುದೀಪ್ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಆದರೆ ಇದಕ್ಕೆ ಕಿಚ್ಚ ಸುದೀಪ್ ಒಪ್ಪಿಕೊಂಡಿಲ್ಲ. ವರ್ತೂರ್ ಸಂತೋಷ್ ಅವರಿಗೆ ಬಂದ ವೋಟ್ ಪೋಲ್ ಬಗ್ಗೆ ಹೇಳಿದ್ದಾರೆ. ಆದರೂ ಸಹ ನಾನು ಹೋಗುತ್ತೇನೆ ಎಂದು ಬಿಗ್‌ಬಾಸ್ ಮನೆಯಿಂದ ಹೊರಗಡೆ ಬರಲು ತೀರ್ಮಾನಿಸಿದ್ದಾರೆ. ಇಂದಿನ ಎಪಿಸೋಡ್ನಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ