newsfirstkannada.com

ವರ್ತೂರು ಸಂತೋಷ್‌ಗೆ​ ನಿಜಕ್ಕೂ​ ಮದುವೆ ಆಗಿದ್ಯಾ? ಈ ವೈರಲ್​ ಫೋಟೋಸ್​​ ಅಸಲಿಯತ್ತು ಏನು?

Share :

14-11-2023

    ವರ್ತೂರು ಸಂತೋಷ್ ತಾಳಿ ಕಟ್ಟಿರೋ ಫೋಟೋ ಅಸಲಿಯತ್ತೇನು?

    ಬಿಗ್​ಬಾಸ್​ ಮನೆಯಲ್ಲಿ ತನಿಷಾ ಮಧ್ಯೆ ಸ್ನೇಹ, ಪ್ರೀತಿಯ ಗುಸುಗುಸು

    ಮದುವೆಯಾದ ವಿಚಾರವನ್ನ ವರ್ತೂರು ಸಂತೋಷ್ ಮುಚ್ಚಿಟ್ಟಿದ್ದಾರಾ?

ಬಿಗ್​ಬಾಸ್​ ಸೀಸನ್​ 10ಕ್ಕೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ವರ್ತೂರು ಸಂತೋಷ್ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವಿಡಿಯೋಸ್​ ಹಾಗೂ ಫೋಟೋಗಳು ವೈರಲ್​ ಆಗುತ್ತಿವೆ. ಬಿಗ್​ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​ ಅವರು ಮದುವೆ ಆಗಿರೋ ಫೋಟೋಗಳೇ ಸಖತ್​ ವೈರಲ್​ ಆಗುತ್ತಿವೆ.

ಬಿಗ್​ಬಾಸ್​​ ಮನೆಗೆ ಎಂಟ್ರಿ ಕೊಟ್ಟಿದ್ದ ವರ್ತೂರು ಸಂತೋಷ್​​ ಹುಲಿ ಉಗುರಿನ ಪೆಂಡೆಂಟ್​​ ಧರಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಬಳಿಕ ಮೊನ್ನೆಯಷ್ಟೇ ಬಿಗ್​ಬಾಸ್​ ಮನೆಯಲ್ಲಿ ನನಗೆ ಇರಲು ಆಗುತ್ತಿಲ್ಲ ಎಂದು ಹೇಳಿ ಎಲ್ಲರಲ್ಲೂ ಆತಂಕ ಮೂಡಿಸಿದ್ದರು. ಇದೀಗ ವರ್ತೂರು ಸಂತೋಷ್​ಗೆ ಸಂಬಂಧಪಟ್ಟಂತೆ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿ ಚರ್ಚೆಯಾಗುತ್ತಿದೆ. ಎಸ್‌.ಜಯಶ್ರೀ ಎಂಬುವರನ್ನು ವರ್ತೂರು ಸಂತೋಷ್​ ಮದುವೆಯಾಗಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಸದ್ಯ ಈ ಬಗ್ಗೆ ವರ್ತೂರು ಸಂತೋಷ್​ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ಇನ್ನೂ, ಬಿಗ್​ಬಾಸ್​ ಮನೆಯಲ್ಲಿ ವರ್ತೂರು ಸಂತೋಷ್​ ಹಾಗೂ ತನಿಷಾ ಮಧ್ಯೆ ಸ್ನೇಹ, ಆತ್ಮೀಯತೆ ಇದೆ. ಹೀಗಾಗಿ, ಇಬ್ಬರ ಮಧ್ಯೆ ಸಂಥಿಂಗ್ ನಡೆಯುತ್ತಿದೆ ಅಂತ ಸ್ಪರ್ಧಿಗಳೇ ರೇಗಿಸುತ್ತಿದ್ದಾರೆ. ಹೀಗಿರುವಾಗಲೇ, ವರ್ತೂರು ಸಂತೋಷ್ ಮದುವೆಗೆ ಸಂಬಂಧಪಟ್ಟ ಫೋಟೋಗಳನ್ನು ಟ್ರೋಲ್ ಪೇಜ್‌ಗಳು ಶೇರ್​ ಮಾಡಿಕೊಂಡಿದ್ದಾರೆ. ವರ್ತೂರು ಸಂತೋಷ್‌ ವಿವಾಹವಾಗಿದ್ದಾರೆ ಅಂತ ಹೇಳಲಾಗಿದೆ. ಮುಹೂರ್ತ ಮತ್ತು ರಿಸೆಪ್ಷನ್ ಫೋಟೋಸ್‌ ವೈರಲ್ ಆಗಿವೆ. ಇದರ ಜೊತೆಗೆ ವರ್ತೂರು ಸಂತೋಷ್ ಬಿಗ್‌ಬಾಸ್ ಮನೆಯ ಒಳಗೆ, ಹೊರಗೂ ವೀಕ್ಷಕರಿಗೆ ಟ್ವಿಸ್ಟ್ ಕೊಡುತ್ತಿದ್ದಾರೆ ಎಂದು ಕಮೆಂಟ್ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರ್ತೂರು ಸಂತೋಷ್‌ಗೆ​ ನಿಜಕ್ಕೂ​ ಮದುವೆ ಆಗಿದ್ಯಾ? ಈ ವೈರಲ್​ ಫೋಟೋಸ್​​ ಅಸಲಿಯತ್ತು ಏನು?

https://newsfirstlive.com/wp-content/uploads/2023/11/bigg-boss-2023-11-14T100246.322.jpg

Load More