ಮಕ್ಕಳ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ತಾಯಿಯ ಆಶೀರ್ವಾದ ಅತಿ ಮುಖ್ಯ
ಅಮ್ಮನ ಒಂದೇ ಒಂದು ಮಾತಿಗೆ ಕಷ್ಟಗಳನ್ನು ಮರೆತ ಮುದ್ದು ಮಗ
ಅಮ್ಮನನ್ನು ನೋಡುತ್ತಿದ್ದಂತೆ ಮಗುವಂತೆ ಕಣ್ಣೀರಿಟ್ಟ ವರ್ತೂರು ಸಂತೋಷ್
ಬಾಳಿಗೆ ಒಂದೇ ಮನೆ.. ಬಾಳೆಗೆ ಒಂದೇ ಗೊನೆ.. ಭೂಮಿಗೆ ದೈವ ಒಂದೇನೆ ತಾಯಿ.. ದಾರಿಗೆ ಒಂದೇ ಕೊನೆ.. ರಾಗಿಗೆ ಒಂದೇ ತೆನೆ.. ಸೃಷ್ಟಿಸೊ ಜೀವ ಒಂದೇನೆ ತಾಯಿ ಎಂಬ ಹಾಡು ಇಲ್ಲಿ ಅಕ್ಷರಶಃ ಸಹ ಸತ್ಯವಾಗಿದೆ. ಹೆತ್ತ ತಾಯಿಯ ಮಾತು ಕೇಳಿದ ಪ್ರತಿಯೊಬ್ಬರು ಜೀವನದಲ್ಲಿ ಮುಂದೆ ಬರುತ್ತಾರೆ. ತಾಯಿಯೇ ಮೊದಲ ದೇವರು ಎಂಬ ಹಾಗೆ ಮಾತಿನಂತೆ, ತಾಯಿಯ ಮಾತನ್ನು ಮೀರಿದವರು ಎಂದು ಸೋಲನ್ನು ಕಂಡಿಲ್ಲ. ಏಕೆಂದರೆ ಮಕ್ಕಳ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ತಾಯಿಯ ಆಶೀರ್ವಾದ ಇದ್ದೇ ಇರುತ್ತದೆ. ಬಿಗ್ಬಾಸ್ ಸೀಸನ್ 10 ಸ್ಪರ್ಧಿಯಾಗಿರೋ ವರ್ತೂರು ಸಂತೋಷ್ ಅವರ ಬಾಳಿನಲ್ಲಿ ಈ ಹಾಡಿನ ಸಾಲು ನಿಜವಾಗಿದೆ.
ಇಲ್ಲಿ ನನಗೆ ಆಟವಾಡಲು ಆಗುತ್ತಿಲ್ಲ. ನನಗೆ ಹೊರಗಡೆ ಕಳುಹಿಸಿ ಎಂದು ವರ್ತೂರು ಸಂತೋಷ್ ಅವರು ಹೇಳಿದ್ದರು. ಬಿಗ್ಬಾಸ್ ಮನೆಯ ಸ್ಪರ್ಧಿಗಳು ಹಾಗೂ ಕಿಚ್ಚ ಸುದೀಪ್ ಕೂಡ ಅವರ ಮನವೊಲಿಸಲು ಯತ್ನಿಸಿದ್ದರು. ಬಳಿಕ ಬಿಗ್ಬಾಸ್ ಮನೆಗೆ ಖುದ್ದು ವರ್ತೂರು ಸಂತೋಷ್ ಅವರ ತಾಯಿ ಮನೆಗ ಆಗಮಿಸಿ ಧೈರ್ಯ ತುಂಬಿದ್ದಾರೆ. ಮನೆಯಿಂದ ಹೊರಗಡೆ ಹೋಗಬೇಕು ಎನ್ನುವ ವರ್ತೂರು ಸಂತೋಷ್ ಅವರ ನಿರ್ಧಾರವನ್ನು ತಾಯಿ ಬದಲಾಯಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ವರ್ತೂರು ಅವರ ತಾಯಿ ಧೈರ್ಯವನ್ನು ತುಂಬಿ ಮುಂದಿನ ಆಟವನ್ನು ಆಡು ಎಂದಿದ್ದಾರೆ. ಮಗನ ಜೊತೆ ಕುಳಿತುಕೊಂಡು ಜನ ನಿನ್ನ ಹಿಂದೆ ಇದ್ದಾರೆ ಅದಕ್ಕೆ ನೀನು ಬೆಲೆ ಕೊಡಬೇಕು. ನೀನು ಈಗಾಗಲೇ ಮುಂದೆ ಹೆಜ್ಜೆ ಇಟ್ಟಿದ್ದೀಯಾ ಹಿಂದೆ ಇಡಬೇಡ. ಇದೊಂದು ಗೆದ್ದುಕೊಂಡ ಬಾ ಕಂದ. ರಾಜ ಅಲ್ಲ ಮಹಾರಾಜ ಆಗುತ್ತೀಯಾ ನೀನು ಎಂದು ಹೇಳುತ್ತಾರೆ. ಅಮ್ಮನ ಮಾತನ್ನು ಕೇಳಿದ ವರ್ತೂರು ಸಂತೋಷ್ ಅವರು ತಮ್ಮ ಮನಸ್ಸನ್ನು ಬದಲಾಯಿಸಿಕೊಂಡಿದ್ದಾರೆ. ಬಳಿಕ ಬಿಗ್ಬಾಸ್ ಮನೆಯಿಂದ ಅಮ್ಮನನ್ನು ಕಳುಹಿಸುವಾಗ ಮನೆ ಮಂದಿಯ ಮುಂದೆ ಈಗ ಗೇಮ್ ಸ್ಟಾರ್ಟ್ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳುತ್ತಿದ್ದಂತೆ ಉಳಿದ ಸ್ಪರ್ಧಿಗಳು ಫುಲ್ ಖುಷ್ ಆಗಿದ್ದಾರೆ. ಗೇಮ್ ಸ್ಟಾರ್ಟ್ ನೌ ಅಂದಿರೋ ವರ್ತೂರು ಸಂತೋಷ್ ಆಟಕ್ಕೆ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಹಳ್ಳಿಕಾರ್ ಹೈದ ಗೆದ್ದೇ ಗೆಲ್ಲುತ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ