ಪಂಜರದಿಂದ ಬಿಗ್ಬಾಸ್ಗೆ ಸಂತೋಷ್ ನೇರವಾದ ಎಂಟ್ರಿ!
ಹೋಗಿದ್ದು ಹುಲಿ ಚರ್ಮಕ್ಕಾಗಿ, ಸಿಕ್ಕಿದ್ದು ಚಿರತೆ, ಜಿಂಕೆ ಚರ್ಮ!
ಲಕ್ಷ್ಮಣ್ ಸವದಿ ಮಗನಿಗೂ ಕಾಡಿದ ಹುಲಿ ಉಗುರು
ಹುಲಿಯ ಉಗುರು ಪರಚಿದ ಬಳಿಕ ಪರಪ್ಪನ ಪಾಲಾಗಿದ್ದ ಸಂತೋಷ್ ಪಾಲಿಗೆ ಸಂತೋಷದ ದಿನ. ಪಂಜರದ ಗಿಣಿ ಆಗಿದ್ದ ವರ್ತೂರು ಸಂತೋಷ್, ಬಿಗ್ಬಾಸ್ಗೆ ರೀಎಂಟ್ರಿ ಕೊಟ್ಟಿದ್ದಾರೆ. ಇತ್ತ, ರಾಜ್ಯದ ಹಲವೆಡೆ, ವ್ಯಾಘ್ರನ ಪರ ಅರಣ್ಯ ಇಲಾಖೆ ಘರ್ಜನೆ ಮೊಳಗಿಸಿದೆ.
ಅಭಿಮಾನಿಗಳ ಜೈಕಾರ. ಹಾರ-ತೂರಾಯಿ. ಎಲ್ಲರಲ್ಲೂ ಸಂಭ್ರಮ. ಮೊಗದಲ್ಲಿ ಕಾನೂನು ಸಮರ ಗೆದ್ದು ಬಂದ ಖುಷಿ. ಅಂದಹಾಗೆಯೆ ಇದು ಜಾಮೀನಿನ ಮೇಲೆ ವರ್ತೂರ್ ಸಂತೋಷ್, ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್ ಆಗಿ ಹೊರಬಂದ ವೇಳೆ ಕಂಡ ದೃಶ್ಯಗಳು.
ಹುಲಿಯ ಉಗುರು ಪರಚಿದ ಬಳಿಕ ಸಿಕ್ತು ಪರಪ್ಪನಿಂದ ಮುಕ್ತಿ!
ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪದ ಮೇಲೆ ಬಂಧನವಾಗಿದ್ದ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್, ಫೈನಲಿ ಸೆರೆಮನೆ ವಾಸದಿಂದ ಹೊರ ಬಂದಿದ್ದಾರೆ. ಇನ್ನು, ಹೊರಬರ್ತಿದ್ದಂತೆ ಸಂತೋಷ್ ಅಭಿಮಾನಿಗಳು, ಸನ್ಮಾನ ಮಾಡಿ ಜೈಕಾರ ಹಾಕಿದ್ದಾರೆ. ಇದೇ ವೇಳೆ, ಸಂತೋಷ್ ಮುಖದಲ್ಲಿ ಪಂಜರದಿಂದ ಹಾರಿ ಬಂದ ಹಕ್ಕಿಯ ಸಂತೋಷ ತುಂಬಿ ತುಳುಕ್ತಿತ್ತು.
ಕಳೆದ ಅಕ್ಟೋಬರ್ 24ರಂದು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಅರಣ್ಯಾಧಿಕಾರಿಗಳು ವರ್ತೂರು ಸಂತೋಷ್ನನ್ನ ಅರೆಸ್ಟ್ ಮಾಡಿ ಕರೆದೊಯ್ದಿದ್ರು. ಇದೀಗ ವರ್ತೂರು ಸಂತೋಷ್ಗೆ ಜಾಮೀನು ಸಿಕ್ಕಿದೆ. ಜೈಲಿನಿಂದ ಹೊರಬಂದ ವರ್ತೂರ್ ಸಂತೋಷ್, ಬಿಗ್ ಮನೆ ರಿಎಂಟ್ರಿ ಆಗಿದ್ದಾರೆ. ಈ ಬಗ್ಗೆ ಖದ್ದು ಸಂತೋಷ್ ತಾಯಿ ಮಂಜುಳಾ ಪ್ರತಿಕ್ರಿಯಿಸಿದ್ದಾರೆ.
ಧರಿಸಿದ್ದ ಪೆಂಡೆಂಟ್ ಬಗ್ಗೆ ಸವದಿ ಪುತ್ರ ಹೇಳಿದ್ದೇನು?
ಹೆಬ್ಬಾಳ್ಕರ್ ಪುತ್ರನ ಬಳಿಕ ಮಾಜಿ ಡಿಸಿಎಂ ಸವದಿ ಪುತ್ರನಿಗೂ ಹುಲಿ ಕಂಟಕ ಶುರುವಾಗಿದೆ. ಸವದಿ ನಿವಾಸಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿ, ಹುಲಿ ಉಗುರು ವಶಕ್ಕೆ ಪಡೆದಿದ್ದಾರೆ. ಆದರೆ, ಅದು ನಿಜವಾದ ಹುಲಿ ಉಗುರಲ್ಲ, ನಮ್ಮ ತಮ್ಮನ ಕೊರಳಲ್ಲಿರೋದು ಪ್ಲಾಸ್ಟಿಕ್ ಅಂತ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸ್ಪಷ್ಟನೆ ಕೊಟ್ಟಿದ್ದಾರೆ. ಅರಣ್ಯಾಧಿಕಾರಿಗಳ ತನಿಖೆಗೆ ನಾವು ಸಹಕರಿಸ್ತೇವೆ ಎಂದಿದ್ದಾರೆ.
6 ಗಂಟೆ ನಾಪತ್ತೆ ಬಳಿಕ ಸಿಕ್ಕ ಮಾಲೀಕನಿಂದ ಡ್ರಾಮ!
ಇತ್ತ, ತುಮಕೂರಿನ ಜ್ಯುವೆಲರಿ ಶಾಪ್ ಮಾಲೀಕನಿಗೂ ಹುಲಿ ಉಗುರು ಪರಚಿದೆ.. ಪೆಂಡೆಂಟ್ ಧರಿಸಿ ಜಾಹೀರಾತು ನೀಡಿದ್ದ ವಿಶ್ವಾಸ್ ಜ್ಯುವೆಲರಿ ಶಾಪ್ ಮಾಲೀಕನ ಮನೆ ಶೋಧಿಸಲಾಗಿದೆ.. ಈ ವೇಳೆ, ಮೂರು ಪೆಂಡೆಂಟ್ಗಳು ಪತ್ತೆಯಾಗಿದೆ ಅಂತ ಗೊತ್ತಾಗಿದೆ.. ಆರು ಗಂಟೆಗಳ ಬಳಿಕ ಸಂಪರ್ಕಕ್ಕೆ ಸಿಕ್ಕ ವಿಶ್ವಾಸ್ ಜ್ಯುವೆಲರಿ ಮಾಲೀಕ, ಮಾತ್ರೆ ಹಿಡಿದು ಡ್ರಾಮಾ ಮಾಡಿದ್ದಾರೆ.. ಬಳಿಕ ಸಮಾಧಾನ ಪಡಿಸಿ ಜ್ಯುವೆಲರಿ ಶಾಪ್ನ ಇಂಚಿಂಚು ಶೋಧಿಸಿದ್ದಾರೆ.
ದತ್ತಪೀಠದ ಶಾಖಾದ್ರಿ ಸೈಯದ್ ಗೌಸ್ ಮೊಹಿನುದ್ದಿನ್ ಶಾಕ್!
ಅತ್ತ ಹುಲಿ ಉಗುರು ಎಲ್ಲೆಡೆ ಸದ್ದು ಮಾಡ್ತಿದೆ. ಆದರೆ, ಕಾಫಿನಾಡು ಶಾಖಾದ್ರಿ ಮನೆ ತಪಾಸಣೆ ವೇಳೆ, ಅರಣ್ಯ ಅಧಿಕಾರಿಗಳು ಶಾಕ್ ಆಗಿದ್ದಾರೆ. ದತ್ತಪೀಠದ ಶಾಖಾದ್ರಿ ಸೈಯದ್ ಗೌಸ್ ಮೊಹಿನುದ್ದಿನ್ ಶಾಖಾದ್ರಿ ಮನೆಗೆ ಹುಲಿ ಚರ್ಮದ ಶೋಧಕ್ಕೆ ಹೋದವರಿಗೆ ಚಿರತೆ ಹಾಗೂ ಜಿಂಕೆ ಚರ್ಮ ಸಿಕ್ಕಿದೆ. ಹುಲಿ ಚರ್ಮದ ಮೇಲೆ ಶಾಖಾದ್ರಿ ಕೂತ ಫೋಟೋ ವೈರಲ್ ಆಗಿತ್ತು. ಈ ಹಿನ್ನೆಲೆ ಈ ದಾಳಿ ನಡೆದಿದೆ. 10 ಗಂಟೆ ಕಾಲ ಬೆಂಗಳೂರಿನಿಂದ ಬರುವ ಕೀಗಾಗಿ ಕಾದು ತಪಾಸಣೆ ನಡೆದಿದೆ.
ವ್ಯಾಘ್ರನಖ, ಮಾಟ ಮಂತ್ರ ಬಗ್ಗೆ ಜ್ಯೋತಿಷಿಗಳು ಹೇಳಿದ್ದೇನು?
ರಾಜ್ಯಾದ್ಯಂತ ಹುಲಿ ಉಗುರು ವಿವಾದ ಪ್ರತಿ ಜಿಲ್ಲೆಗೂ ತಟ್ಟಿದೆ. ಹುಲಿಯುಗರು ತೊಟ್ಟು ಸೆಲೆಬ್ರಿಟಿಗಳು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಅಷ್ಟಕ್ಕೂ ಹುಲಿ ಉಗುರು ತೊಡುವುದು ಯಾಕೆ? ಸೆಲೆಬ್ರಿಟಿಗಳಿಗೆ ಯಾಕೆ ಹುಲಿಯುಗರಿನ ಕ್ರೇಜ್? ಹೀಗೆ ಹತ್ತಾರು ಪ್ರಶ್ನೆಗಳಿಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಹೇಳಿಕೆ ನೀಡಿದ್ದಾರೆ.
ಹುಲಿ ಉಗುರು, ಆನೆ ರೋಮ, ಹಂದಿಯ ಬಾಲದ ರೋಮ ಇದನ್ನಲ್ಲೆಲ್ಲ ಉಂಗುರ ರೂಪದಲ್ಲಿಯೋ, ಹಾರದ ರೂಪದಲ್ಲಿಯೋ ಹೀಗೆ ಮಾಡಿಕೊಂಡು ಬರುವ ಅಭ್ಯಾಸ ಶುರುವಾಗಿದೆ. ಇನ್ನು ಇದಕ್ಕೆ ಮಾರಾಟ ಮಾಡುವವರು ಕೆಲವು ಕಥೆಗಳನ್ನು ಕಟ್ಟುತ್ತಾರೆ. ಅವರಿಗೆ ಒಳ್ಳೆಯದಾಗಿದೆ, ಇವರಿಗೆ ಒಳ್ಳೆಯದಾಗಿದೆ ಎಂದು ಕಥೆ ಕಟ್ಟುತ್ತಾರೆ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ
ನಾನು ಹಾಡಿ ಜನಾಂಗದವರತ್ರ ಮಾತನಾಡಿದ್ದೇನೆ. ಆವಾಗ ಅವ್ರು ಹೇಳುವಂತ ವಿಚಾರ ನೋಡಿದ್ರೆ, ಅದು ನಮ್ಮ ಶಾಸ್ತ್ರಕ್ಕೆ ತುಂಬಾ ಹತ್ತಿರದಲ್ಲಿ ಕಾಣುತ್ತದೆ. ವಾಸ್ತುವಿಗೆ ಬೇಕಾಗಿ ಪಂಚ ವಾಸ್ತು ಶಿರಗಳನ್ನು ಭೂಮಿಯಡಿಯಲ್ಲಿ ಸ್ಥಾಪನೆ ಮಾಡುತ್ತಾರೆ. ಚಿನ್ನದಲ್ಲಿ ಮಾಡಿದ್ದು, ಅದರಲ್ಲಿ ಹುಲಿ, ಸಿಂಹ, ಆಮೆ, ಕುದುರೆ, ಹಂದಿ, ಆನೆ. ಈ ಐದು ಶಿರಗಳನ್ನು ಭೂಮಿಯ ಅಡಿಯಲ್ಲಿ ಸ್ಥಾಪನೆ ಮಾಡುತ್ತಾರೆ. ಅದಕ್ಕೂ ಮತ್ತು ಧಾರಣೆ ಮಾಡುವ ವಿಚಾರಕ್ಕು ಹತ್ತಿರ ಕಾಣುತ್ತದೆ.
ಹಾಡಿ ಜನಾಂಗದವರು ಹೇಳಿದಂತೆ, ಕಾಡಿನಲ್ಲಿ ಬೇಟೆಯಾಡಲು ಹೋದಾಗ ಬೇರೆ ಪ್ರಾಣಿಗಳಿಗೆ ಹುಲಿ ಉಗುರನ್ನು ಗ್ರಹಣ ಮಾಡುವ ಸಾಮರ್ಥ್ಯವಿದೆ. ಅದಕ್ಕಾಗಿ ಇದನ್ನು ಧರಿಸುತ್ತಾರೆ. ಇದು ಅವರ ಅಧ್ಯಯನದಲ್ಲಿ ಕಂಡುಕೊಂಡತ ಸತ್ಯ. ಇನ್ನು ಹುಲಿ ಉಗುರನ್ನು ನಕಲಿ ಮಾಡಿ ಪ್ರಚಾರ ಮಾಡುವವರು ಇದ್ದಾರೆ. ಇನ್ನು ಕೆಲವರು ಅಲಂಕಾರಿಕವಾಗಿ, ಹೆಗ್ಗಳಿಕೆ ಬೇಕಾಗಿ ಧರಿಸುತ್ತಾರೆ. ಇದಕ್ಕೆಲ್ಲ ಸರ್ಕಾರ ಯಾಕೆ ನಿಯಂತ್ರಣ ಮಾಡಿದೆ ಅಂದ್ರೆ ಅದು ವ್ಯಾಪಾರ ಆಗಬಾರದು ಎಂದು. ಹುಲಿ ಉಗುರಿಗೆ ರೇಟ್ ಇದೆ ಎಂದು ಹುಲಿ ಕೊಲ್ಲುತ್ತಾರೆ, ಮಾರುತ್ತಾರೆ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ
ಒಟ್ಟಾರೆ, ಹುಲಿ ಉಗುರು ಬೇಟೆ ಭರ್ಜರಿ ಸಾಗಿದೆ. ಪಟ್ಟೆ ಚಲುವನ ಉಂಗುರು ತೊಟ್ಟು ಶೋಕಿ ಮಾಡ್ತಿದ್ದವರಿಗೆ ಶಾಕ್ ಕೊಡಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ