newsfirstkannada.com

ಎಲ್ಲರೂ ಬಿಟ್ಟು ಹೋಗುತ್ತಿದ್ದಾರೆ.. ಕಿರುತೆರೆ ನಟ ವರುಣ್​​ ಆರಾಧ್ಯ ಪೋಸ್ಟ್​ ವೈರಲ್‌; ಫ್ಯಾನ್ಸ್ ಭಾವುಕ!

Share :

Published June 27, 2024 at 6:18pm

    ತೇಜಸ್ ನಿಧನಕ್ಕೆ ಕಿರುತೆರೆ ನಟ ವರುಣ್ ಆರಾಧ್ಯ ಸೇರಿ ಹಲವರು ಭಾವುಕ

    ಇಂತಹ ದೋಸ್ತ್​ನ ಪಡಿಯೋಕೆ ಪುಣ್ಯ ಮಾಡಿದ್ರಿ ಬ್ರೋ ಎಂದ ನೆಟ್ಟಿಗರು

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ತೇಜಸ್ ಕೊನೇ ವಿಡಿಯೋ

ಸೋಷಿಯಲ್ ಮೀಡಿಯಾ ರೀಲ್ಸ್‌ ಸ್ಟಾರ್ ಎಂದೇ ಖ್ಯಾತಿ ಪಡೆದಿರೋ ಕಿರುತೆರೆ ನಟ ವರುಣ್ ಆರಾಧ್ಯ ಹಾಗೂ ವರ್ಷ ಕಾವೇರಿ ಅವರ ಆಪ್ತ ಸ್ನೇಹಿತ ತೇಜಸ್ ನಿನ್ನೆ ಮೃತಪಟ್ಟಿದ್ದರು. ನಿನ್ನೆ ಬೆಳಗಿನ ಜಾವ 12 ಗಂಟೆ 30 ನಿಮಿಷಕ್ಕೆ ಕೆಲಸದ ನಿಮಿತ್ತ ಸ್ನೇಹಿತನ ಜೊತೆಯಲ್ಲಿ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ವಾಪಸ್ಸು ಬರುತ್ತಿದ್ದಾಗ ದುರ್ಘಟನೆಯೊಂದು ಸಂಭವಿಸಿದೆ. ಈ ಘಟನೆಯಲ್ಲಿ ತೇಜಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಕಿರುತೆರೆ ನಟನ ಗೆಳೆಯ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವು.. ಇನ್ನೊಬ್ಬ ಗಂಭೀರ

ತೇಜಸ್​ ಜೊತೆಗೆ ಬೈಕ್​ನಲ್ಲಿದ್ದ ಆಕಾಶ್ (19) ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇಷ್ಟು ದಿನ ವರುಣ್ ಆರಾಧ್ಯ ಬೆನ್ನೆಲುಬಾಗಿ ನಿಂತಿದ್ದ ತೇಜಸ್ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ತೇಜಸ್ ಸ್ನೇಹಿತರು, ಕುಟುಂಬಸ್ಥರು ಹಾಗೂ ಅವರ ಇನ್​ಸ್ಟಾ ಫಾಲೋವರ್ಸ್ ಬರಸಿಡಿಲು ಬಡಿದಂತೆ ಆಗಿ ಹೋಗಿತ್ತು. ಅದೇಷ್ಟೋ ಜನರು ಇದೊಂದು ಸುದ್ದಿ ಸುಳ್ಳಾಗಿ ಬಿಡಲಿ ಅಂತ ಅಂದುಕೊಳ್ಳುತ್ತಿದ್ದರು. ಆದರೆ ಅತಿ ವೇಗವಾಗಿ ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೇಜಸ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

View this post on Instagram

A post shared by Varun Aradya (@varun._.aradya)

ಆದರೆ ಗೆಳೆಯನ ಸಾವನ್ನು ನೀಗಿಸಿಕೊಳ್ಳಲು ಆಗದ ವರುಣ್​​ ಆರಾಧ್ಯ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಭಾವುಕ ಪೋಸ್ಟ್​ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್​ ಮಾಡಿಕೊಂಡ ವಿಡಿಯೋದಲ್ಲಿ ಎಲ್ಲರೂ ಬಿಟ್ಟು ಹೋಗುತ್ತಿದ್ದಾರೆ. ನೀನು ಹೋಗ್ಬೇಡ ದೋಸ್ತ್ ಎಂಬ ಡೈಲಾಗ್​ ಹೇಳಿದ್ದಾರೆ. ಇನ್ನು ಇದೇ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಜೀವನದಲ್ಲಿ ಇಂಥಾ ಒಬ್ಬ ದೋಸ್ತ್​ನ ಪಡಿಯೋಕೆ ನೀವು ಪುಣ್ಯ ಮಾಡಿದ್ರಿ ಬ್ರೋ, ಮಿಸ್​ ಯೂ ತೇಜಸ್​ ಬ್ರೋ, ಇಷ್ಟು ಚಿಕ್ಕ ವಯಸ್ಸಿಗೆ ಇದೆಂಥಾ ಸಾವು ದೇವ್ರೇ ಅಂತಾ ಕಾಮೆಂಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲ್ಲರೂ ಬಿಟ್ಟು ಹೋಗುತ್ತಿದ್ದಾರೆ.. ಕಿರುತೆರೆ ನಟ ವರುಣ್​​ ಆರಾಧ್ಯ ಪೋಸ್ಟ್​ ವೈರಲ್‌; ಫ್ಯಾನ್ಸ್ ಭಾವುಕ!

https://newsfirstlive.com/wp-content/uploads/2024/06/varun.jpg

Load More