newsfirstkannada.com

×

ಇಷ್ಟೆಲ್ಲಾ ದೊಡ್ಡ ಇಶ್ಯೂ ಆಗುತ್ತೆ ಅಂತ ಗೊತ್ತೇ ಇರಲಿಲ್ಲ.. Varun Aradya ಮಾಜಿ ಪ್ರೇಯಸಿ ಮತ್ತೊಂದು ಎಡವಟ್ಟು!

Share :

Published September 12, 2024 at 8:47pm

Update September 12, 2024 at 9:52pm

    ಯುವತಿ ಜೊತೆ ಇರೋ ಫೋಟೋ ನೋಡಿದ್ದೆ ಎಂದ ಮಾಜಿ ಪ್ರೇಯಸಿ

    ರೀಲ್ಸ್​ ಮಾಡಿ ಸಖತ್ ಫೇಮಸ್​ ಆಗಿದ್ದ ನಟ ವರುಣ್ ಆರಾಧ್ಯ

    ವರುಣ್ ಆರಾಧ್ಯ ಮೇಲೆ ಮಾಜಿ ಪ್ರೇಯಸಿ ಗಂಭೀರ ಆರೋಪ

ಕನ್ನಡ ಸೀರಿಯಲ್ ನಟ, ರೀಲ್ಸ್ ಸ್ಟಾರ್ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಗಂಭೀರ ಆರೋಪ ಮಾಡಿದ್ದರು. ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್​ ಮಾಡುವ ಬಗ್ಗೆ ಪೊಲೀಸ್​ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ಈಗ ವರುಣ್​ ಆರಾಧ್ಯ ಹಾಗೂ ಮಾಜಿ ಪ್ರೇಯಸಿ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋವನ್ನು ಶೇರ್​ ಮಾಡಿ ಇದೇಲ್ಲಾ ಸುಳ್ಳು ಸುದ್ದಿ ಅಂತ ಹೇಳುತ್ತಿದ್ದಾರೆ.

ಇದನ್ನೂ ಓದಿ: ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡಿದ್ದ ಸೀರಿಯಲ್​ ನಟ ಕೇಸ್​ಗೆ ಬಿಗ್​ ಟ್ವಿಸ್ಟ್​​; ಅಸಲಿಗೆ ಆಗಿದ್ದೇನು?

ಆದರೆ ವರುಣ್​ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಪೊಲೀಸ್​ ಅಧಿಕಾರಿಗೆ ದೂರು ಸಲ್ಲಿಸಿದ FIRನಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 4 ವರ್ಷಗಳ ಹಿಂದೆ ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾಗಿದ್ದ ವರುಣ್ ಆರಾಧ್ಯ ತನ್ನನ್ನ ಪ್ರೀತಿಸಿ ವಂಚಿಸಿದ್ದಾನೆ. ನಾನು ವರುಣ್ ಫೋನ್​ನಲ್ಲಿ ಆತ ಬೇರೆ ಯುವತಿ ಜೊತೆಗಿರೋ ಖಾಸಗಿ ‌ಫೋಟೋ ನೋಡಿದೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ನಮ್ಮಿಬ್ಬರ ಲವ್‌ ಬ್ರೇಕಪ್ ಆಗಿತ್ತು. ಲವ್‌ ಬ್ರೇಕಪ್‌ ಆಗುತ್ತಿದ್ದಂತೆ ವರುಣ್ ನನ್ನ ಬ್ಲ್ಯಾಕ್ ಮೇಲ್ ಮಾಡ್ತಿದ್ದಾನೆ. ಖಾಸಗಿ ಫೋಟೋಗಳ ಬಗ್ಗೆ ಎಲ್ಲೂ ಬಾಯ್ಬಿಡದಂತೆ‌ ನನಗೆ ಧಮ್ಕಿ ಹಾಕಿದ್ದಾನೆ. ಅಷ್ಟೇ ಅಲ್ಲ 2023ರ ಸೆಪ್ಟೆಂಬರ್ 10ನೇ ತಾರೀಕು ವರುಣ್​ ವಾಟ್ಸ್​ಆ್ಯಪ್ ನಂಬರ್​ನಿಂದ ವಾಟ್ಸ್​ಆ್ಯಪ್ ನಂಬರ್​ಗೆ ನನ್ನ ಖಾಸಗಿ ಫೋಟೋವನ್ನು ಕಳುಹಿಸಿದ್ದಾನೆ. ಇದನ್ನು ನೋಡಿ ಶಾಕ್ ಆಗಿ, ಈ ರೀತಿ ಯಾಕೆ ಕಳುಹಿಸುತ್ತಿದ್ದೀಯಾ ಅಂತ ನಾನು ಕೇಳಿದ್ದೆ. ತನ್ನ ಹತ್ತಿರ ಇನ್ನೂ ಹೆಚ್ಚಿನ ಖಾಸಗಿ ಫೋಟೋ ಮತ್ತು ವಿಡಿಯೋಗಳಿವೆ. ಅವುಗಳನ್ನು ನಾನು ಸೋಷಿಯಲ್​ ಮೀಡಿಯಾದಲ್ಲಿ ಹರಿ ಬಿಡ್ತೀನಿ ಅಂತ ನನಗೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಹಾಗೂ ಮುಂದೆ ನೀನು ಯಾರನ್ನಾದ್ರು ಮದುವೆಯಾದ್ರೆ, ಮದುವೆಯಾಗೋ ಹುಡುಗನನ್ನೂ ಸೇರಿ ನಿನ್ನನ್ನು ಸಾಯಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿದ್ದಾನೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆದರೆ ಇದೀಗ ಮಾಜಿ ಪ್ರೇಯಸಿ ಉಲ್ಟಾ ಹೊಡೆದಿದ್ದಾರೆ. ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿವೊಂದನ್ನು ಶೇರ್ ಮಾಡಿ ಇದೇಲ್ಲಾ ಸುಳ್ಳು ಸುದ್ದಿ ಅಂತಾ ಮೀಡಿಯಾ ಮೇಲೆ ಗೂಬೆ ಕುರಿಸಿದ್ದಾರೆ. ಇದು ಮಾಧ್ಯಮಗಳ ಮೂಲಕ ನೀವು ನೋಡುತ್ತಿರುವ ಸುಳ್ಳು ಮಾಹಿತಿಯಾಗಿದೆ. ಇದು ಇನ್‌ಸ್ಟಾಗ್ರಾಮ್ ಪ್ರೊಫೈಲ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಎಲ್ಲಾ ರೀಲ್‌ಗಳನ್ನು ತೆಗೆದುಹಾಕುವುದರ ಕುರಿತು ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ ಅಂತ ಬರೆದಿಕೊಂಡಿದ್ದಾರೆ.

ಇದನ್ನೂ ಓದಿ: ವರುಣ್ ಆರಾಧ್ಯ ಮತ್ತು ಮಾಜಿ ಪ್ರೇಯಸಿಯ ಕತೆಯಲ್ಲಿ ಬಿಗ್​​ ಟ್ವಿಸ್ಟ್​​! ಇನ್​​ಸ್ಟಾಗ್ರಾಂನಲ್ಲಿ ಹೀಗೊಂದು ಪೋಸ್ಟ್​

ಹೀಗೆ ಇದೇ ವಿಚಾರವಾಗಿ ಸಂದರ್ಶನವೊಂದಲ್ಲಿ ಮಾತಾಡಿದ ಯುವತಿ, ನನಗೆ ಗೊತ್ತಿರಲಿಲ್ಲ ನಾನು ಎಫ್​ಐಆರ್​ ಹಾಕಿದ ಮೇಲೆ ಟಿವಿಯಲ್ಲಿ ಟೆಲಿಕಾಸ್ಟ್​ ಆಗುತ್ತೆ ಅಂಥ. ಈ ಬಗ್ಗೆ ಅಲ್ಲಿ ಇರೋ ಅಧಿಕಾರಿಗಳಿಗೆ ನಾನು ಕೇಳಿದೆ ಈ ವಿಚಾರ ಎಲ್ಲೂ ಹೊರಗಡೆ ಬರೋದಿಲ್ವಾ ಅಂತ. ಅವರು ಕೂಡ ಹೇಳಿದ್ರು ಎಲ್ಲೂ ಆಚೆ ಬರೋದಿಲ್ಲ ಅಂತ. ಆದರೆ ಅದು ಹೇಗೆ ಆಚೆ ಬಂತು ಅಂತ ನನಗೆ ಗೊತ್ತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಷ್ಟೆಲ್ಲಾ ದೊಡ್ಡ ಇಶ್ಯೂ ಆಗುತ್ತೆ ಅಂತ ಗೊತ್ತೇ ಇರಲಿಲ್ಲ.. Varun Aradya ಮಾಜಿ ಪ್ರೇಯಸಿ ಮತ್ತೊಂದು ಎಡವಟ್ಟು!

https://newsfirstlive.com/wp-content/uploads/2024/09/Varun-Aradya-Varsha-Kaveri-5.jpg

Load More