newsfirstkannada.com

ಇಂದು ಬಹುಕಾಲದ ಗೆಳತಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ವಾಸುಕಿ ವೈಭವ್! ಯಾರು ಈ ಚೆಲುವೆ?

Share :

16-11-2023

  ಬಹುಕಾಲದ ಗೆಳತಿ ಜೊತೆಗೆ ಹಸೆಮಣೆ ಏರಿದ ಗಾಯಕ

  ಇಂದು ತಮ್ಮ ಗೆಳತಿಯನ್ನು ವಿವಾಹವಾಗಲಿರುವ ವಾಸುಕಿ ವೈಭವ್​

  ವಾಸುಕಿ ವೈಭವ್ ಪ್ರೀತಿಸುತ್ತಿದ್ದ ಗೆಳತಿ ಯಾರು? ಹಿನ್ನೆಲೆ ಏನು ಗೊತ್ತಾ?

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಗಾಯಕ, ಸಂಗೀತ ನಿರ್ದೇಶಕ, ನಟ ವಾಸುಕಿ ವೈಭವ್‌ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಬಹುಕಾಲದ ಗೆಳತಿ ಬೃಂದಾ ವಿಕ್ರಮ್‌ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಸದ್ಯ ಈ ವಿಚಾರವನ್ನು ವಾಸುಕಿ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಾಸುಕಿ ವೈಭವ್​ ಮತ್ತು ಬೃಂದಾ ವಿಕ್ರಮ್​ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ವೃತ್ತಿಯಲ್ಲಿ ಶಿಕ್ಷಕಿ ಹಾಗೂ ರಂಗಭೂಮಿ ಕಲಾವಿದೆಯಾಗಿರುವ ಬೃಂದಾ ಅವರು ಇಂದು ತಮ್ಮ ಗೆಳೆಯ ವಾಸುಕಿ ವೈಭವ್​ ಅವರನ್ನು ವಿವಾಹವಾಗುತ್ತಿದ್ದಾರೆ.

ವೈಭವ್​ ಇನ್​​ಸ್ಟಾಗ್ರಾಂನಲ್ಲಿ ‘ಹೊಸ ಪ್ರಯಾಣ ಆರಂಭವಾಗಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆ ಬೇಕು’ ಎಂದು ಸ್ಟೇಟಸ್​ ಹಾಕಿಕೊಂಡಿದ್ದಾರೆ. ಸದ್ಯ ಗಾಯಕ ಸದ್ದಿಲ್ಲದೆ ವಿವಾಹವಾಗುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ವಾಸುಕಿ ಆಪ್ತರ ಮತ್ತು ಕುಟುಂಬ ಸಮ್ಮುಖದಲ್ಲಿ ವಿವಾಹವಾಗುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಬಹುಕಾಲದ ಗೆಳತಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ವಾಸುಕಿ ವೈಭವ್! ಯಾರು ಈ ಚೆಲುವೆ?

https://newsfirstlive.com/wp-content/uploads/2023/11/Vasuki-vaibhav.jpg

Load More