ಬಹುಕಾಲದ ಗೆಳತಿಯೊಂದಿಗೆ ವಾಸುಕಿ ಹೊಸ ಜೀವನ!
ವಾಸುಕಿ ಮದುವೆ ಬಗ್ಗೆ ಸುಳಿವು ಕೊಟ್ಟಿದ್ದ ನಟಿ ತಾರಾ
ವಾಸುಕಿ-ಬೃಂದಾ ಮದುವೆಯಲ್ಲಿ ಸ್ಯಾಂಡಲ್ವುಡ್ ಸ್ಟಾರ್
ಸ್ಯಾಂಡಲ್ವುಡ್ನ ಯಂಗ್ ಅಂಡ್ ಟ್ಯಾಲೆಂಟೆಡ್ ಮ್ಯೂಸಿಕ್ ಡೈರೆಕ್ಟರ್ ವಾಸುಕಿ ವೈಭವ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ರಿಸೆಂಟ್ ಆಗಿ ವಾಸುಕಿ ಮದುವೆ ಬಗ್ಗೆ ಹಿರಿಯ ನಟಿ ತಾರಾ ಸುಳಿವು ಕೊಟ್ಟಿದ್ದರು. ಆದ್ರೆ ವಾಸುಕಿ ಕೈ ಹಿಡಿಯಲಿರುವ ಹುಡುಗಿ ಯಾರು? ಲವ್ ಮ್ಯಾರೇಜ್ ಅಥವಾ ಅರೆಂಜ್ ಮ್ಯಾರೇಜ್ ಅಂತ ಗೊತ್ತಾಗಿರಲಿಲ್ಲ.
ಇದೀಗ ಗುರು-ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದು, ಜೀವನದ ಮತ್ತೊಂದು ಹಂತ ಪ್ರವೇಶಿಸಿದ್ದಾರೆ. ತುಂಬಾ ದಿನದಿಂದ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರ ಮದುವೆ ಸುದ್ದಿ ಸದ್ದು ಮಾಡ್ತಿತ್ತು. ವಾಸುಕಿ ಮದುವೆ ಫಿಕ್ಸ್ ಆಗಿದೆ. ಶೀಘ್ರದಲ್ಲೇ ಮದುವೆನೂ ಆಗ್ತಾರೆ ಎನ್ನಲಾಗಿತ್ತು. ಆದ್ರೆ ಯಾವತ್ತೂ, ಎಲ್ಲಿ ಅನ್ನೋ ಯಾವ ವಿಚಾರವನ್ನ ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ ಸರ್ಪ್ರೈಸ್ ಎನ್ನುವ ರೀತಿ ವಾಸುಕಿ ಮದುವೆ ಸಂಪ್ರದಾಯವಾಗಿ ನೆರೆವೇರಿದ್ದು, ಫೋಟೋ ವಿಡಿಯೋಗಳು ವೈರಲ್ ಆಗಿವೆ.
ಪ್ರೀತಿಸಿದ ಹುಡುಗಿ ಕೈ ಹಿಡಿದ ವಾಸುಕಿ ವೈಭವ್!
ಬಹುಕಾಲದ ಗೆಳತಿಯೊಂದಿಗೆ ವಾಸಕಿ ಹೊಸ ಜೀವನ!
ವಾಸುಕಿ ವೈಭವ್ ಮದುವೆ ಅಂದಾಕ್ಷಣ ವಧು ಯಾರು ಅನ್ನೋದು ಬಹಳಷ್ಟು ಕುತೂಹಲ ಕೆರಳಿಸಿತ್ತು. ಸಿನಿಮಾ ನಟಿ ಇರಬಹುದಾ? ಬಿಗ್ಬಾಸ್ ಸಹ ಸ್ಪರ್ಧಿ ಇರಬಹುದಾ ಅನ್ನೋ ಕನ್ಫ್ಯೂಶನ್ ಕಾಡಿತ್ತು. ಆದರೆ ಬಹುಕಾಲದ ಗೆಳತಿಯ ಜೊತೆ ಸಪ್ತಪದಿ ತುಳಿದಿರುವ ವಾಸುಕಿ ತಮ್ಮ ಪ್ರೀತಿಯನ್ನ ಉಳಿಸಿಕೊಂಡಿದ್ದಾರೆ. ಹೌದು, ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ವಾಸುಕಿ ವೈಭವ್ ಕಲ್ಯಾಣ ಜರುಗಿದೆ. ತುಂಬಾ ವರ್ಷದಿಂದ ಇವರಿಬ್ಬರು ಸ್ನೇಹಿತರಾಗಿದ್ದು, ಆಮೇಲೆ ಈ ಸ್ನೇಹ ಪ್ರೀತಿಗೆ ತಿರುಗಿ ಎರಡೂ ಕುಟುಂಬದವನ್ನು ಒಪ್ಪಿಸಿ ಈಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತರಷ್ಟೇ ಭಾಗಿಯಾಗಿದ್ದರು. ಹಿರಿಯ ನಟ ಸಿಹಿ ಕಹಿ ಚಂದ್ರು ಈ ಮದುವೆಯಲ್ಲಿ ಭಾಗಿಯಾಗಿದ್ದು, ನವಜೋಡಿಯ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಸತೀಶ್ ನೀನಾಸಂ, ಡಾಲಿ ಧನಂಜಯ್, ಅಮೃತಾ ಅಯ್ಯಂಗರ್, ಶ್ರುತಿ ಹರಿಹರನ್, ಕೃಷಿ ತಾಪಂಡ, ಸಪ್ತಮಿ ಗೌಡ ಸಹ ವಾಸುಕಿ ಮದುವೆಯಲ್ಲಿ ಭಾಗವಹಿಸಿ ನವಜೋಡಿಗೆ ವಿಶ್ ಮಾಡಿದ್ದಾರೆ.
ವೃತ್ತಿಯಲ್ಲಿ ಬೃಂದಾ ವಿಕ್ರಮ್ ಏನು ಮಾಡುತ್ತಿದ್ದಾರೆ?
ವಾಸುಕಿ ಮನೆಯ ಒಡತಿಯಾಗಿರುವ ವಾಸುಕಿ ಮೂಲತಃ ರಂಗಭೂಮಿ ಕಲಾವಿದೆ ಅಂತ ಗೊತ್ತಾಗಿದೆ. ಸಾಕಷ್ಟು ವರ್ಷದಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದು ಹಲವು ನಾಟಕಗಳಲ್ಲಿ ನಟಿಸಿದ್ದಾರೆ. ಹಲವಾರು ಸ್ಟೇಜ್ಗಳಲ್ಲಿ ಶೋ ಪರ್ಫಾಮ್ ಮಾಡಿದ್ದಾರೆ. ಜೊತೆಗೆ ಶಿಕ್ಷಕಿಯಾಗಿಯೂ ಕೆಲಸ ಮಾಡ್ತಿದ್ದಾರಂತೆ. ಅಂದ್ಹಾಗೆ, ವಾಸುಕಿ ಮತ್ತು ಬೃಂದಾ ಪರಿಚಯ ಬೆಳೆದಿದ್ದು ಸಹ ಇದೇ ರಂಗಭೂಮಿಯಲ್ಲಿ. ವಾಸುಕಿ ವೈಭವ್ ತಮ್ಮ ಜರ್ನಿ ಆರಂಭಿಸಿದ್ದೇ ರಂಗಭೂಮಿಯಲ್ಲಿ. ಬೃಂದಾ ಜೊತೆ ವಾಸುಕಿ ಸಹ ಹಲವು ನಾಟಕಗಳಲ್ಲಿ ಪ್ರದರ್ಶನ ಮಾಡಿದ್ದಾರೆ. ಬೃಂದಾ ನಟಿಸಿರುವ ನಾಟಕಗಳಿಗೆ ಮ್ಯೂಸಿಕ್ ಸಹ ಕೊಟ್ಟಿದ್ದಾರೆ. ಆಗಿಂದಲೂ ಇಬ್ಬರು ನಡುವೆ ಒಳ್ಳೆಯ ಒಡನಾಟ ಬೆಳೆದಿದ್ದು, ಅದು ಮದುವೆವರೆಗೂ ತಂದು ನಿಲ್ಲಿಸಿದೆ.
ವಾಸುಕಿ ವೈಭವ್ ಬಿಗ್ ಬಾಸ್ ಜರ್ನಿ ಸಂಭ್ರಮಿಸಿದ್ದ ಬೃಂದಾ!
ಬಿಗ್ಬಾಸ್ ಕನ್ನಡ ಏಳನೇ ಆವೃತ್ತಿಯಲ್ಲಿ ವಾಸುಕಿ ವೈಭವ್ ಸ್ಪರ್ಧಿಯಾಗಿದ್ದರು. ವಾಸುಕಿ ಮನೆಯೊಳಗೆ ಇದ್ದಾಗ ವಾಸುಕಿ ಪರ ಬೃಂದಾ ಕ್ಯಾಂಪೇನ್ ಮಾಡಿದ್ದರು. ಬಿಗ್ಬಾಸ್ ಮನೆಯಿಂದ ವಾಸುಕಿ ಹೊರಬಂದಾಗಲೂ ಬೃಂದಾ ಪಾರ್ಟಿ ಆಯೋಜಿಸಿದ್ದರು. ವಾಸುಕಿ ಹಾಗೂ ಸ್ನೇಹಿತರೊಂದಿಗೆ ಬಿಗ್ ಬಾಸ್ ಸಂಭ್ರಮಿಸಿದ್ದರು. ಇನ್ನು, ವಾಸುಕಿ ವೈಭವ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೃಂದಾ ಅವರ ಹಲವು ಫೋಟೋಗಳನ್ನ ಶೇರ್ ಮಾಡಿದ್ದಾರೆ. ತುಂಬಾ ಹಳೆಯ ಫೋಟೋಗಳು ನೋಡಬಹುದು. ಈ ಇಬ್ಬರಿಗೂ ತುಂಬಾ ಹಳೆಯ ಪರಿಚಯ ಇದೆ ಅನ್ನೋದನ್ನ ಈ ಫೋಟೋಗಳು ಸಾರಿ ಸಾರಿ ಹೇಳುತ್ತಿವೆ. ಆದರೆ, ಅವರನ್ನೇ ಮದುವೆಯಾಗಲಿದ್ದಾರೆ ಅನ್ನೋದರ ಬಗ್ಗೆ ಯಾರೊಬ್ಬರಿಗೂ ಸುಳಿವು ಸಿಕ್ಕಿರಲಿಲ್ಲ. ಆದರೆ ಇದೀಗ ವಾಸುಕಿ ಮದುವೆ ಬೆನ್ನಲ್ಲೇ ಬೃಂದಾ ಮತ್ತು ವಾಸುಕಿ ಹಳೆಯ ಫೋಟೋಗಳು ವೈರಲ್ ಆಗ್ತಿದ್ದು, ಜನ ಸರ್ಪ್ರೈಸ್ ಆಗಿ ನೋಡ್ತಿದ್ದು, ವಿಶ್ ಮಾಡ್ತಿದ್ದಾರೆ.
ವಾಸುಕಿ ಮದುವೆ ಬಗ್ಗೆ ಸುಳಿವು ಕೊಟ್ಟಿದ್ದ ನಟಿ ತಾರಾ!
ಅಂದ್ಹಾಗೆ, ವಾಸುಕಿ ವೈಭವ್ ಮದುವೆ ಬಗ್ಗೆ ಹಿರಿಯ ನಟಿ ತಾರಾ ಸಣ್ಣದಾಗಿ ಹಿಂಟ್ ಕೊಟ್ಟಿದ್ದರು. ಆ್ಯಣಕರ್ ಅನುಶ್ರೀ ಜೊತೆ ಟಗರುಪಲ್ಯ ಸಿನಿಮಾದ ಪ್ರಚಾರ ಮಾಡುವಾಗ ನಟಿ ತಾರಾ, ವಾಸುಕಿ ಮದುವೆ ಬಗ್ಗೆ ಮಾತಾಡಿದ್ದಾರೆ. ಟಗರುಪಲ್ಯ ಸಿನಿಮಾದಲ್ಲಿ ಮದುವೆ ಗಂಡಿನ ಪಾತ್ರ ಮಾಡಿದ್ದಾನೆ, ಶೀಘ್ರದಲ್ಲೇ ಅದು ನಿಜ ಆಗ್ತಿದೆ ಎಂದಿದ್ದರು. ಆಗ ಸಡನ್ ಆಗಿ ತಾರಾ ಅವರನ್ನ ನಿಲ್ಲಿಸಿದ್ದ ವಾಸುಕಿ ಸೀಕ್ರೆಟ್ ರಿವೀಲ್ ಮಾಡದಂತೆ ವಿನಂತಿಸಿದ್ದರು. ಆಗ್ಲೇ ನೋಡಿ ವಾಸುಕಿ ಮದುವೆ ಗುಟ್ಟು ರಟ್ಟಾಗಿತ್ತು. ಆದ್ರೆ ಹುಡುಗಿ ಯಾರು? ಮದುವೆ ಯಾವಾಗ ಅನ್ನೋದರ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ. ಹಾಗಾಗಿ ಅಷ್ಟೇ ಗುಟ್ಟಾಗಿ ಬರೀ ಕುಟುಂಬಸ್ಥರು ಮತ್ತು ಸಂಬಂಧಿಕರ ಸಮ್ಮುಖದಲ್ಲೇ ವಾಸುಕಿ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
ಸದ್ಯ ವಾಸುಕಿ ವೈಭವ್ ಸ್ಯಾಂಡಲ್ವುಡ್ನ ಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದಾರೆ. ‘ರಾಮಾ ರಾಮಾ ರೇ’ ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಗಮನ ಸೆಳೆದ ವಾಸುಕಿ ಮ್ಯೂಸಿಕ್ ಮಾಡೋದ್ರ ಜೊತೆಗೆ ಗಾಯಕರಾಗಿಯೂ ಖ್ಯಾತಿ ಗಳಿಸಿಕೊಂಡಿದ್ದಾರೆ. ಬರವಣಿಗೆಯಲ್ಲೂ ಮೋಡಿ ಮಾಡಿರುವ ವಾಸುಕಿ ಕೆಲವು ಹಾಡುಗಳನ್ನ ಖುದ್ದು ತಾವೇ ರಚಿಸಿ ಹಾಡಿದ್ದಾರೆ ಕೂಡ. ವಾಸುಕಿ ವೈಭವ್ ಜೀವನದಲ್ಲಿ ಎಲ್ಲವೂ ಚೆನ್ನಾಗಿ ಸಾಗ್ತಿದೆ. ಪ್ರೋಫೆಶನಲ್ ಲೈಫ್ ಅಂತೂ ಸಾಲೀಡ್ ಆಗಿ ಹೋಗ್ತಿದೆ. ಒಳ್ಳೋಳ್ಳೆ ಸಿನಿಮಾಗಳಿಗೆ ಮ್ಯೂಸಿಕ್ ಕೊಡ್ತಿದ್ದು, ಒಳ್ಳೋಳ್ಳೆ ಪಾತ್ರಗಳಲ್ಲಿ ನಟಿಸ್ತಿದ್ದಾರೆ. ಈಗ ದಾಂಪತ್ಯಕ್ಕೆ ಕಾಲಿಟ್ಟಿದ್ದು, ಜೀವನದ ಮತ್ತೊಂದು ಹಂತ ಪ್ರವೇಶಿಸಿದ್ದಾರೆ. ಈ ದಾಂಪತ್ಯ ಸುಖಕರವಾಗಿರಲಿ ಅಂತಾ ನಾವು ಹಾರೈಸೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ