newsfirstkannada.com

ರಜನಿ ಜೈಲರ್​​ ಸಿನಿಮಾದಲ್ಲಿ ನಟಿಸಿದ್ದ ಶಿವಣ್ಣ ವಿರುದ್ಧ ವಾಟಾಳ್​​ ನಾಗರಾಜ್​ ಕಿಡಿ; ಏನಂದ್ರು?

Share :

10-08-2023

    ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​​

    ರಜನಿ ಸಿನಿಮಾ ರಿಲೀಸ್​ಗೆ ವಾಟಾಳ್​​ ವಿರೋಧ..!

    ಶಿವಣ್ಣ ನಟಿಸಬಾರದಿತ್ತು ಎಂದು ವಾಟಾಳ್​​​ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದೆ. ಈ ಹಿಂದೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಆಗ್ರಹಿಸಿ ತಮಿಳುನಾಡು ಆಚರಿಸಿದ್ದ ಬಂದ್​ ವೇಳೆ ತಮಿಳಿನ ಸೂಪರ್​ ಸ್ಟಾರ್ ರಜನಿಕಾಂತ್ ಕರ್ನಾಟಕದ ವಿರುದ್ಧ ಹೇಳಿಕೆ ನೀಡಿದ್ದರು. ತಮಿಳುನಾಡು ಪರ ಕರ್ನಾಟಕದ ವಿರುದ್ಧ ಮಾತಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಹೀಗಾಗಿ ಸದ್ಯ ರಿಲೀಸ್​ ಆಗಿರೋ ರಜನಿಕಾಂತ್​​ ಜೈಲರ್​​​ ಸಿನಿಮಾಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಇಂದು ವಿಧಾನಸೌಧದಲ್ಲಿ ಈ ಸಂಬಂಧ ಮಾತಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ನಾನು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಅಪಾರ ಕೆಲಸ ಮಾಡಿದ್ದೇನೆ. ಈ ಹಿಂದೆಯೇ ಕನ್ನಡ ಸಿನಿಮಾಗೆ ಸಬ್ಸಿಡಿ ನೀಡಿ ಎಂದು ಮನವಿ ಮಾಡಿದ್ದೆ. ಅಂದು ರಾಮಕೃಷ್ಣಾ ಹೆಗ್ಡೆ ಸರ್ಕಾರ ನನ್ನ ಮನವಿಗೆ ಒಪ್ಪಿಗೆ ನೀಡಿತ್ತು ಎಂದರು.

ಕನ್ನಡ ಸಿನಿಮಾ ಇಂಡಸ್ಟ್ರೀ ಗಾಂಭೀರ್ಯತೆ ಹೋಗಿದೆ. ರಜನಿಕಾಂತ್​ ಕನ್ನಡ ದ್ರೋಹಿ. ಶಿವಣ್ಣ ರಜನಿ ಸಿನಿಮಾದಲ್ಲಿ ನಟಿಸೋ ಮುನ್ನ ಯೋಚನೆ ಮಾಡಬೇಕಿತ್ತು. ಜೈಲರ್​​ 2.5 ಸಾವಿರ ಪರದೆಗಳ ಮೇಲೆ ರಿಲೀಸ್​ ಆಗಿದೆ. ತಮಿಳುನಾಡು, ಆಂಧ್ರಪ್ರದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ರಿಲೀಸ್​ ಆಗಿಲ್ಲ. ಕರ್ನಾಟಕದಲ್ಲಿ ಆಗಿರೋ ಕಾರಣ ಇದರಿಂದ ಕನ್ನಡ ಸಿನಿಮಾಗಳಿಗೆ ತೊಂದರೆ ಆಗಲಿದೆ. ಕಾವೇರಿ ವಿರುದ್ಧ ಮಾತಾಡಿದ ರಜನಿಕಾಂತ್​ ಸಿನಿಮಾ ರಿಲೀಸ್​ಗೆ ಅವಕಾಶ ಮಾಡಿಕೊಟ್ಟಿದ್ದು ತಪ್ಪು ಎಂದು ಗುಡುಗಿದರು ವಾಟಾಳ್​​.

ರಜನಿ ಜೈಲರ್​​ ಸಿನಿಮಾದಲ್ಲಿ ನಟಿಸಿದ್ದ ಶಿವಣ್ಣ ವಿರುದ್ಧ ವಾಟಾಳ್​​ ನಾಗರಾಜ್​ ಕಿಡಿ; ಏನಂದ್ರು?

https://newsfirstlive.com/wp-content/uploads/2023/08/Vatal-Nagaraj.jpg

Load More