newsfirstkannada.com

ಕಳೆದ ವಾರಕ್ಕಿಂತ ಮತ್ತಷ್ಟು ಹೆಚ್ಚಿದ ತರಕಾರಿ ಬೆಲೆ; ಟೊಮ್ಯಾಟೋ, ಶುಂಠಿ ಬೆಲೆ ಎಷ್ಟು?

Share :

05-07-2023

    ಶತಕ ದಾಟಿದ ತರಕಾರಿಯ ಬೆಲೆ, ಜನರ ಜೇಬಿಗೆ ಬಿತ್ತು ಬರೆ!

    ಸೊಪ್ಪು ರೇಟ್ ಕೇಳಿದ್ರೆ ಗ್ರಾಹಕರ ಮುಖ ಸಪ್ಪೆಯಾಗುತ್ತೆ..!

    ದಿನ ಕಳೆದಂತೆ ಮತ್ತಷ್ಟು ತರಕಾರಿ ದರ ಏರಿಕೆಯ ಮುನ್ಸೂಚನೆ

ರಾಜ್ಯದಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದೆ. ಮಳೆ ಕೊರತೆಯಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಿಲ್ಲ. ಕಾರಣ ಹೂವು-ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ತರಕಾರಿ ಬೆಲೆ ಇನ್ನಷ್ಟು ದುಬಾರಿ ಆಗುವ ನಿರೀಕ್ಷೆ ದಟ್ಟವಾಗಿದ್ದು ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಟೊಮ್ಯಾಟೋ ತಿನ್ನಂಗಿಲ್ಲ. ಬೀನ್ಸ್-ಕ್ಯಾರೆಟ್​ ಕೇಳಂಗಿಲ್ಲ. ಊಟದ ಮೆನುವಿನಲ್ಲಿ ಪಲಾವ್ ಕಟ್. ಈರುಳ್ಳಿ ಕಣ್ಣೀರುಳ್ಳಿಯಾಗಿದೆ. ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಆಗಿರೋ ಶುಂಠಿ ಕೊಳ್ಳುವ ಆಸಕ್ತಿ ಕುಂಠಿತಗೊಳಿಸಿದೆ. ಮೆಣಸಿನಕಾಯಿ ಖಾರ ಆಗಿದೆ. ಸೌತೆಕಾಯಿ ಭಾರ ಆಗಿದೆ. ಹೀರೇಕಾಯಿ, ಬೆಂಡೆಕಾಯಿ ಬೇಡ ಅನ್ನಿಸ್ತಿದೆ. ಸೊಪ್ಪು ರೇಟ್ ಕೇಳಿದ್ರೆ ಮುಖ ಸಪ್ಪಗಾಗ್ತಿದೆ.

ದಿನ ಕಳೆದಂತೆ ತರಕಾರಿ ಬಲು ದುಬಾರಿ!
ಜನರ ಜೇಬಿನ ಭಾರ ಇಳಿಸ್ತಿದೆ ತರಕಾರಿ!

ಹಣ್ಣುಗಳ ಹೊರತಾಗಿ ಆಹಾರವಾಗಿ ಬಳಸಲ್ಪಡುವ ಹಾಗೂ ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿರೋ ತರಕಾರಿ ಬೆಲೆ ಗಗನ ಕುಸುಮವಾಗಿಬಿಟ್ಟಿದೆ. ಮಳೆ ಕೊರತೆಯಿಂದ ತರಕಾರಿ ಬೆಳೆ ಕುಸಿದಿದ್ದು ದಿನ ಕಳೆದಂತೆ ತರಕಾರಿ ದುಬಾರಿಯಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದ್ರೆ ಹಲವು ತರಕಾರಿಗಳ ಬೆಲೆ ಶತಕದ ಗಡಿ ದಾಟಿದೆ. ಮಾರುಕಟ್ಟೆಯಲ್ಲಿ ಯಾವ ತರಕಾರಿ ದರ ಕೇಳಿದ್ರೂ ಗ್ರಾಹಕರು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತಾಗಿದೆ. ಹಾಗಿದ್ರೆ ಕಳೆದ ವಾರಕ್ಕಿಂತ ಈ ವಾರ ಯಾವ್ಯಾವ ತರಕಾರಿ ಬೆಲೆ ಎಷ್ಟೆಲ್ಲಾ ಹೆಚ್ಚಾಗಿದೆ.

ತರಕಾರಿ ಹಿಂದಿನ ದರ ಇಂದಿನ ದರ

  • ಟೊಮ್ಯಾಟೋ ₹100 ₹150
  • ಶುಂಠಿ ₹250 ₹300
  • ಮೆಣಸಿನಕಾಯಿ ₹160 ₹210
  • ಬೀನ್ಸ್ ₹40 ₹100
  • ಕ್ಯಾರೆಟ್ ₹50 ₹ 80
  • ಗೆಡ್ಡೆ ಕೋಸು ₹40 ₹100
  • ಬೆಂಡೆಕಾಯಿ ₹20 ₹ 40
  • ಹೀರೆಕಾಯಿ ₹40 ₹60
  • ಸೌತೆಕಾಯಿ ₹40 ₹60

ಇನ್ನು ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪು ಸಬ್ಬಸ್ಸಿಗೆ, ಅಡುಗೆಗೆ ಬಳಸುವ ಸೊಪ್ಪಿನ ರೇಟ್​ ಕೂಡ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಇನ್ನು ಸ್ವಲ್ಪ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆ ಖಚಿತ ಎನ್ನಲಾಗ್ತಿದೆ. ಇದು ತರಕಾರಿ ಬೆಲೆ ಹೆಚ್ಚಳಕ್ಕೆ ಜನ ಕೊಡ್ತಿರುವ ಕಾರಣ. ಅದೇನೇ ಇರಲಿ. ಹವಾಮಾನ ವೈಪರೀತ್ಯ ಹಾಗೂ ವರುಣನ ಕಣ್ಣಾಮುಚ್ಚಾಲೆ ಆಟಕ್ಕೆ ಜನ ಸುಸ್ತಾಗಿದ್ದಾರೆ. ಇದು ಹೀಗೆಯೇ ಮುಂದುವರಿದ್ರೆ ದುನಿಯಾ ಮತ್ತಷ್ಟು ದುಬಾರಿ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಳೆದ ವಾರಕ್ಕಿಂತ ಮತ್ತಷ್ಟು ಹೆಚ್ಚಿದ ತರಕಾರಿ ಬೆಲೆ; ಟೊಮ್ಯಾಟೋ, ಶುಂಠಿ ಬೆಲೆ ಎಷ್ಟು?

https://newsfirstlive.com/wp-content/uploads/2023/06/Vegetables.jpg

Load More