ಟೊಮ್ಯಾಟೋ, ಹಸಿಮೆಣಸು, ಹಸಿ ಬಟಾಣಿ ದರದಲ್ಲೂ ಏರಿಕೆ..!
ರಾಜ್ಯದ ಜನಸಾಮಾನ್ಯರ ಹೊಟ್ಟೆ ಮೇಲೆ ಬರೆ ಎಳೆದ ತರಕಾರಿಗಳು
15 ದಿನದಿಂದ ರಾಜ್ಯದಲ್ಲಿ ಏರಿಕೆ ಆಗುತ್ತಲೇ ಇದೆ ವೆಜಿಟೇಬಲ್ಸ್ ದರ
ಬೆಂಗಳೂರು: ರಾಜ್ಯದಲ್ಲಿ ತರಕಾರಿಗಳ ಬೆಲೆ ಮತ್ತಷ್ಟು ದುಬಾರಿಯಾಗಿದೆ. ಈಗಾಗಲೇ ಶತಕ ಬಾರಿಸಿ ಟೊಮ್ಯಾಟೋ ದ್ವಿಶತಕದತ್ತ ದಾಪುಗಲಿಡುತ್ತಿದೆ. ಗೃಹಿಣಿಯರು ಅಡುಗೆ ಮನೆಯಲ್ಲಿ ಕೈ ಕೈ ಹಿಸುಕಿಕೊಳ್ತಿದ್ದಾರೆ. ತರಕಾರಿಗಳ ದರ ಏರಿಕೆಯಿಂದ ರುಚಿ ಕಟ್ಟಾದ ಆಹಾರ ಮಾಡೋದು ಹೇಗೆ ಎಂದು ಕಂಗಾಲಾಗಿದ್ದಾರೆ. ಅದರಲ್ಲೂ ಇವತ್ತಿನ ತರಕಾರಿ ದರ ಕೇಳಿದರೆ ಊಟವೇ ಬೇಡ ಎನಿಸುತ್ತಿದೆ. ಆದ್ರೂ ಅಷ್ಟೋ ಇಷ್ಟೋ ಕೊಂಡು ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ.
ಬೆಲೆ ಹೆಚ್ಚಳದಿಂದ ಮಹಿಳೆಯರು ಅಡುಗೆಗೆ ತರಕಾರಿಗಳ ಬಳಕೆಯನ್ನೇ ಕಡಿಮೆ ಮಾಡಿದ್ದಾರೆ. ಹಿಂದೆ 1 ಕೆಜಿ ಖರೀದಿ ಮಾಡುತ್ತಿದ್ದವರು, ಇವತ್ತು ಕಾಲು ಕೆಜಿಯಷ್ಟು ಖರೀದಿ ಮಾಡುತ್ತಿದ್ದಾರೆ. ಇದರಿಂದ ಅಡುಗೆಗೆ ಅಳೆದು ತೂಗಿ ತರಕಾರಿಗಳನ್ನ ಬಳಸುತ್ತಿದ್ದಾರೆ.
ತರಕಾರಿ ಬಲು ದುಬಾರಿ: ಶತಕ ಬಾರಿಸಿ ಮುನ್ನುಗುತ್ತಿರುವ ತರಕಾರಿಗಳು ಯಾವುವು..?
1. ಬೆಳ್ಳುಳ್ಳಿ
ಇಂದಿನ ದರ: ಕೆಜಿಗೆ ₹200
2. ಹಸಿ ಮೆಣಸಿನಕಾಯಿ
ಇಂದಿನ ದರ: ಕೆಜಿಗೆ ₹120-₹150
3. ಬೀನ್ಸ್
ಇಂದಿನ ದರ : ಕೆಜಿಗೆ ₹100
4. ಹಸಿ ಬಟಾಣಿ
ಇಂದಿನ ದರ: ಕೆಜಿಗೆ ₹240
5. ಶುಂಠಿ
ಇಂದಿನ ದರ: ಕೆಜಿಗೆ ₹280
6. ಟೊಮ್ಯಾಟೋ
ಇಂದಿನ ದರ : ಕೆಜಿಗೆ ₹120-₹130
7. ಕ್ಯಾರೆಟ್
ಇಂದಿನ ದರ : ಕೆಜಿಗೆ ₹60
8. ಕ್ಯಾಪ್ಸಿಕಂ
ಇಂದಿನ ದರ: ಕೆಜಿಗೆ ₹80
ಒಟ್ಟಾರೆಯಾಗಿ ದಿನನಿತ್ಯ ಬಳಸೋ ತರಕಾರಿ ಬೆಲೆ ಈ ರೀತಿಯಲ್ಲಿ ಏರಿಕೆಯಾದರೇ ರುಚಿಕರ ಆಹಾರ ತಿನ್ನೋದು ಹೇಗೆ ಅಂತಾ ಜನರು ಪರಿತಪಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ