newsfirstkannada.com

×

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಶಿಷ್ಯ, ಬಿಜೆಪಿ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ನಿಧನ

Share :

Published September 17, 2024 at 2:58pm

Update September 17, 2024 at 2:59pm

    ಬಿಜೆಪಿಯ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅನಾರೋಗ್ಯದಿಂದ ವಿಧಿವಶ

    ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕರಿಸದೆ ಅಸುನೀಗಿದ ಮುದ್ನಾಳ

    ಇಂದು ರಾತ್ರಿ ವೆಂಕಟರೆಡ್ಡಿ ಮುದ್ನಾಳ ಅವರ ಮೃತದೇಹ ಯಾದಗಿರಿಗೆ ರವಾನೆ

ಬೆಂಗಳೂರು: ಬಿಜೆಪಿ ಮಾಜಿ ಶಾಸಕ ಹಾಗೂ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರ ಆಪ್ತರಾಗಿದ್ದ ವೆಂಕಟರೆಡ್ಡಿ ಮುದ್ನಾಳ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೆಂಕಟರೆಡ್ಡಿ ಮುದ್ನಾಳ ಅವರನ್ನು ಬೆಂಗಳೂರಿನ ಹೆಚ್​ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ವೆಂಕಟರೆಡ್ಡಿ ಮುದ್ನಾಳ್ ವಿಧಿವಶರಾಗಿದ್ದಾರೆ.

ಇದನ್ನೂ ಓದಿ:ಮುನಿರತ್ನಗೆ ಎದೆನೋವು, ಆಸ್ಪತ್ರೆಯಿಂದ ಆಸ್ಪತ್ರೆಗೆ ಶಿಫ್ಟ್; ಬಂಧನದ ಬಳಿಕ ಕುಗ್ಗಿದ ಬಿಜೆಪಿ ಶಾಸಕ

2018ರಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿ ಯಾದಗಿರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಮುದ್ನಾಳವರು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಬಿಜೆಪಿಯಿಂದ ಸ್ಪರ್ಧೆ ಮಾಡಿ ಪರಭಾವಗೊಂಡಿದ್ದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾಗಿದ್ದ ವೆಂಕಟರೆಡ್ಡಿ ಮುದ್ನಾಳ ಯಾದಗಿರಿಯ ಪುರಸಭೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮುದ್ನಾಳ, ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷರೂ ಕೂಡ ಆಗಿದ್ದವರು.

ಇದನ್ನೂ ಓದಿ: 4 ವರ್ಷದ ಸೇಡು.. ಜಾತಿ ನಿಂದನೆ ಚಕ್ರವ್ಯೂಹ; ಮುನಿರತ್ನ V/S ಕುಸುಮಾ ಜಿದ್ದಿಗೆ ಅಸಲಿ ಕಾರಣ ಇಲ್ಲಿದೆ!

ಸದ್ಯ ಹೆಚ್​ಸಿಜಿ ಆಸ್ಪತ್ರೆಯಲ್ಲಿ ಅಸುನೀಗಿರುವ ಮುದ್ನಾಳವರ ಪಾರ್ಥಿವ ಶರೀರವನ್ನು ಇಂದು ರಾತ್ರಿ ಯಾದಗಿರಿಗೆ ತೆಗೆದುಕೊಂಡು ಹೋಗಲಿದ್ದಾರೆ. ನಾಳೆ ಸಂಜೆ ಯಾದಗಿರಿ ತಾಲೂಕಿನ ಅವರ ಸ್ವಗ್ರಾಮ ಮುದ್ನಾಳದಲ್ಲಿ ಜಮೀನಿನಲ್ಲಿ ಅಂತ್ಯಕ್ರಿಯೆ ನೆರೆವೇರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಶಿಷ್ಯ, ಬಿಜೆಪಿ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ನಿಧನ

https://newsfirstlive.com/wp-content/uploads/2024/09/VENKAREDDY-MUDNAL.jpg

Load More