newsfirstkannada.com

ಒನ್​​ ಡೇ, T20 ಮಾದರಿಯಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ; ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟರ್​ ಆಕ್ರೋಶ

Share :

30-07-2023

    ವೆಸ್ಟ್​​ ಇಂಡೀಸ್​ ವಿರುದ್ಧ ಟೀಂ ಇಂಡಿಯಾಗೆ ಸೋಲು

    ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟರ್​ ಭಾರೀ ಆಕ್ರೋಶ!

    ಹಣ & ಅಧಿಕಾರ ಅಲ್ಲ, ದೇಶಕ್ಕಾಗಿ ಕ್ರಿಕೆಟ್​ ಆಡಿ ಅಂದ್ರು

ಬೆಂಗಳೂರು: ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಸೋತ ಟೀಂ ಇಂಡಿಯಾ ವಿರುದ್ಧ ಮಾಜಿ ಕ್ರಿಕೆಟರ್​​ ವೆಂಕಟೇಶ್​ ಪ್ರಸಾದ್ ಕಿಡಿಕಾರಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಕ್ರಿಕೆಟ್​ ದಿಗ್ಗಜ ವೆಂಕಟೇಶ್​ ಪ್ರಸಾದ್ ಅವರು, ಟೆಸ್ಟ್​ ಕ್ರಿಕೆಟ್​ ಹೊರತುಪಡಿಸಿ ಒನ್​ ಡೇ, ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಬಹಳ ಕಳಪೆ ಪ್ರದರ್ಶನ ನೀಡುತ್ತಿದೆ ಎಂದಿದ್ದಾರೆ.

ಇತ್ತೀಚೆಗೆ ನಡೆದ ಬಾಂಗ್ಲಾದೇಶ, ಸೌತ್​ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ಟೀಂ ಇಂಡಿಯಾ ಹೀನಾಯ ಸೋಲು ಕಂಡಿತ್ತು. ಜತೆಗೆ ಕಳೆದ ಎರಡು T20 ವಿಶ್ವಕಪ್​​ನಲ್ಲೂ ಅತ್ಯಂತ ಕಳಪೆ ಪ್ರದರ್ಶನ ನೀಡಿ ಸೋತು ಹೋಯ್ತು. ಟೀಂ ಇಂಡಿಯಾ ಇಂಗ್ಲೆಂಡ್​​, ಆಸ್ಟ್ರೇಲಿಯಾ ತಂಡದ ರೀತಿಯಲ್ಲಿ ದೇಶಕ್ಕಾಗಿ ಆಡುತ್ತಿಲ್ಲ ಎಂದು ವೆಂಕಟೇಶ್​ ಪ್ರಸಾದ್​ ಆಕ್ರೋಶ ಹೊರಹಾಕಿದ್ದಾರೆ.

ಟೀಂ ಇಂಡಿಯಾ ಶೂನ್ಯ

ಇನ್ನು, ದುಡ್ಡು ಮತ್ತು ಅಧಿಕಾರ ಹೊರತು ಟೀಂ ಇಂಡಿಯಾ ಶೂನ್ಯವಾಗಿದೆ. ಎಂದಿಗೂ ಚಾಂಪಿಯನ್​​ ತಂಡದ ರೀತಿಯಲ್ಲಿ ಪ್ರದರ್ಶನ ನೀಡಿಲ್ಲ. ಒಂದು ತಂಡ ಗೆಲ್ಲಲು ಆಡುತ್ತದೆ, ಆದರೆ, ಭಾರತ ಎಂದಿಗೂ ಹಾಗೇ ಇಲ್ಲ. ನಮ್ಮ ಆ್ಯಟಿಟ್ಯೂಡ್​​ ಟೀಂ ಇಂಡಿಯಾದ ಸೋಲಿಗೆ ಕಾರಣ ಎಂದು ಆರೋಪಿಸಿದ್ದಾರೆ.

ಇತ್ತೀಚೆಗೆ ಟೆಸ್ಟ್​​ ಸೀರೀಸ್​ ಗೆದ್ದಿದ್ದ ಟೀಂ ಇಂಡಿಯಾ ಈಗ ವೆಸ್ಟ್​​ ಇಂಡೀಸ್​​ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ಟೀಂ ಇಂಡಿಯಾಗೆ 2ನೇ ಒನ್​ ಡೇ ಮ್ಯಾಚ್​​ನಲ್ಲಿ ಭಾರೀ ಮುಖಭಂಗ ಆಗಿದೆ.

ವೆಸ್ಟ್​ ಇಂಡೀಸ್​ ವಿರುದ್ಧ ಹೀನಾಯ ಸೋಲು

ಯೆಸ್​​, 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ವಿರುದ್ಧ ವೆಸ್ಟ್​ ಇಂಡೀಸ್​ ಭರ್ಜರಿ ಗೆಲುವು ಸಾಧಿಸಿದೆ. ಸುಮಾರು 6 ವಿಕೆಟ್​​ಗಳ ಗೆಲುವಿನ ಜತೆ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಆದರೀಗ, ಟೀಂ ಇಂಡಿಯಾದಲ್ಲಿ ಯಂಗ್​ಸ್ಟರ್ಸ್​ಗೆ ಚಾನ್ಸ್​ ಸಿಕ್ಕರೂ ಯಾಕೆ ಆಡುತ್ತಿಲ್ಲ? ತಂಡದ ಸೋಲಿಗೆ ಕಾರಣವೇನು? ಎಂಬ ಚರ್ಚೆ ಜೋರಾಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಒನ್​​ ಡೇ, T20 ಮಾದರಿಯಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ; ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟರ್​ ಆಕ್ರೋಶ

https://newsfirstlive.com/wp-content/uploads/2023/07/Team-India_2-1.jpg

Load More