newsfirstkannada.com

ಅಬ್ಬಬ್ಬಾ! 25kg ಚಿನ್ನಾಭರಣ ಧರಿಸಿ ತಿಮ್ಮಪ್ಪನ ದರ್ಶನ.. ಈ ರಾಯಲ್ ಫ್ಯಾಮಿಲಿ ಯಾವುದು?

Share :

Published August 23, 2024 at 2:49pm

Update August 23, 2024 at 2:53pm

    ಕೋಟಿ ಕೋಟಿ ರೂ. ಚಿನ್ನ ಹಾಕಿಕೊಂಡು ವೆಂಕಟೇಶ್ವರನ ದರ್ಶನ

    ಬಂಗಾರ ಮೈಗೆ ಹೊದ್ದುಕೊಂಡು ಬಂದಿದ್ದ ಶ್ರೀಮಂತ ಕಟುಂಬ..!

    25 ಕೆ.ಜಿ ಮೌಲ್ಯದ ಚಿನ್ನದ ಆಭರಣಗಳಿಗೆ ದುಡ್ಡು ಎಷ್ಟು ಆಗುತ್ತದೆ?

ಭಾರತೀಯ ಸಂಸ್ಕೃತಿಯಲ್ಲಿ ಅದರಲ್ಲಿ ಮಹಿಳೆಯರಲ್ಲಿ ಬಂಗಾರವು ಮಹತ್ವದ ಸ್ಥಾನ ಪಡೆದುಕೊಂಡಿದೆ. ಹಾಗೇ ತಿರುಪತಿಯ ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ಶ್ರೀಮಂತ ದೇವರೆಂದೆ ಖ್ಯಾತಿ ಪಡೆದಿದ್ದಾನೆ. ಈ ಶ್ರೀಮಂತದೇವರಿಗೆ ಭಕ್ತರು ಬರೋಬ್ಬರಿ 25 ಕೆ.ಜಿಯ ಚಿನ್ನದ ಒಡೆವೆಗಳನ್ನ ಧರಿಸಿಕೊಂಡು ಬಂದಿದ್ದು ಉಳಿದ ಭಕ್ತರು ಫುಲ್ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣ ಬೈಎಲೆಕ್ಷನ್​ಗೆ ರೆಡಿಯಾದ್ರಾ ನಿಖಿಲ್ ಕುಮಾಸ್ವಾಮಿ..? ‘ಸೈನಿಕ’ ಬಿಗಿ ಪಟ್ಟು, ದಳಪತಿ ದಂಡಯಾತ್ರೆ 

ಮಹಾರಾಷ್ಟ್ರದ ಪುಣೆ ಮೂಲದ ಕುಟುಂಬವೊಂದು ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ದರ್ಶನಕ್ಕೆಂದು ತಿರುಪತಿಗೆ ಭೇಟಿ ನೀಡಿದೆ. ಕುಟುಂಬದ ಮಹಿಳೆ ಸೀರೆ ಧರಿಸಿದ್ರೆ, ಇಬ್ಬರು ವ್ಯಕ್ತಿಗಳು ಬನಿಯನ್ ಹಾಗೂ ಪಂಚೆ ಹಾಕಿದ್ದರು. ಈ ವೇಳೆ ದೇವರ ದರ್ಶನ ಪಡೆಯಲು ತೆರಳುವಾಗ ಆ ಕುಟುಂಬದ ಇಬ್ಬರು ವ್ಯಕ್ತಿಗಳು, ಓರ್ವ ಮಹಿಳೆ ಹಾಗೂ ಒಂದು ಮಗು ಇವರೆಲ್ಲ ಸೇರಿ ಒಟ್ಟು 25 ಕೆ.ಜಿ ಮೌಲ್ಯದ ಚಿನ್ನದ ಆಭರಣಗಳನ್ನು ಧರಿಸಿದ್ದಾರೆ. ಇದರಲ್ಲಿ ಮಹಿಳೆ ಧರಿಸಿದ ಒಡೆವೆಗಳು ಎಲ್ಲರ ಕಣ್ಮನ ಸೆಳೆಯುವಂತೆ ಇವೆ. ಇನ್ನು ವ್ಯಕ್ತಿ ಕುತ್ತಿಗೆಗೆ ಹಾಕಿಕೊಂಡಿದ್ದ ಚಿನ್ನ ಸರಪಣಿಯಂತೆ ಡಿಸೈನ್​ ಮಾಡಲಾಗಿದೆ. ವ್ಯಕ್ತಿ ಬ್ರ್ಯಾಂಡೆಡ್​ ಸನ್​ಗ್ಲಾಸ್​ ಅನ್ನು ಕೂಡ ಹಾಕಿಕೊಂಡಿದ್ದಾರೆ.

ಪುಣೆ ಕುಟುಂಬ ಹಾಕಿಕೊಂಡಿರುವ ಚಿನ್ನಾಭರಣಗಳ ಒಟ್ಟು ಮೊತ್ತ ಬರೋಬ್ಬರಿ 16 ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ನಿಖರ ಎಷ್ಟು ಎನ್ನುವುದು ತಿಳಿದು ಬಂದಿಲ್ಲ ಸದ್ಯ ಇಷ್ಟೊಂದು ಮೊತ್ತದ ಚಿನ್ನಾಭರಣಗಳನ್ನು ಧರಿಸಿ ತಿಮ್ಮಪ್ಪನ ದರ್ಶನ ಪಡೆದುಕೊಂಡ ಕುಟುಂಬದ ದೃಶ್ಯಗಳನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ: IPS ಅಧಿಕಾರಿಗೆ ಸಂಬಳ ಎಷ್ಟು.. ಯಾವ ಪೋಸ್ಟ್​​ಗೆ ಹೆಚ್ಚು ಸ್ಯಾಲರಿ ನೀಡುತ್ತೆ ಸರ್ಕಾರ?

ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ವಿಡಿಯೋ ನೋಡಿದವರೆಲ್ಲ ಒಂದು ಕ್ಷಣ ಬೆರಗಾಗುತ್ತಿದ್ದಾರೆ. ಆದರೆ ಈ ಕುಟುಂಬ ಯಾವುದು, ತಿಮ್ಮಪ್ಪನ ಬಳಿಗೆ ಬಂದವರ ಹೆಸರೇನು ಎಂಬುದು ಯಾರಿಗೂ ತಿಳಿದಿಲ್ಲ. ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಬರುವಂತ ಸಾಕಷ್ಟು ಭಕ್ತರು ಹಣ, ಚಿನ್ನ, ಬೆಳ್ಳಿಯಂತಹವುಗಳನ್ನು ಕಾಣಿಕೆಯಾಗಿ ಹುಂಡಿಗೆ ಹಾಕುತ್ತಿರುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ! 25kg ಚಿನ್ನಾಭರಣ ಧರಿಸಿ ತಿಮ್ಮಪ್ಪನ ದರ್ಶನ.. ಈ ರಾಯಲ್ ಫ್ಯಾಮಿಲಿ ಯಾವುದು?

https://newsfirstlive.com/wp-content/uploads/2024/08/TIRUPATI_25KG_GOLD.jpg

Load More