ಬಡ್ಡಿ ಬಂಗಾರಮ್ಮ, ‘ಹೆಂಡ್ತಿಗೆ ಹೇಳ್ಬೇಡಿ’ ಸಿನಿಮಾ ಖ್ಯಾತಿಯ ನಟಿ
ಡಾ. ರಾಜ್ ಕುಮಾರ್ ಜೊತೆಗೆ ಬಣ್ಣ ಹಚ್ಚಿದ್ರು ನಟಿ ಮಹಾಲಕ್ಷ್ಮಿ
80 ಮತ್ತು 90 ದಶಕದ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು
ಖ್ಯಾತ ಹಿರಿಯ ನಟಿ ಮಹಾಲಕ್ಷ್ಮಿ ಕನ್ನಡಕ್ಕೆ ಮತ್ತೆ ಬಂದಿದ್ದಾರೆ. ಆದರೆ ಈ ಬಾರಿ ಸಿನಿಮಾದತ್ತ ಅಲ್ಲವೇ ಅಲ್ಲ, ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ ಅಂದ್ರೆ ನಂಬ್ತೀರಾ? ನಂಬಲೇ ಬೇಕು. ಯಾಕಂದ್ರೆ ಈ ಸ್ಟೋರಿ ಓದಿ.
1980 ಮತ್ತು 1990ರ ದಶಕದಲ್ಲಿ ಎಲ್ಲಾ ಸಿನಿಮಾ ರಂಗಗಳಿಗೆ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದ ಮಹಾಲಕ್ಷ್ಮಿ ಮತ್ತೆ ಕನ್ನಡಕ್ಕೆ ವಾಪಸ್ ಆಗಿದ್ದಾರೆ. ತಮಿಳು, ತೆಲುಗು, ಮಲಯಾಳಂ ಹೀಗೆ ಈ ರಂಗದಲ್ಲಿ ನಟಿ ಮಹಾಲಕ್ಷ್ಮಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅದರಲ್ಲೂ ಹತ್ತು ವರ್ಷ ಸಿನಿಮಾ ರಂಗಕ್ಕಾಗಿ ಮುಡಿಪಾಗಿಟ್ಟಿದ್ದರು. ಆ ಹತ್ತು ವರ್ಷಗಳು ಬಹುತೇಕ ಸಿನಿ ರಸಿಕರ ಮನದಲ್ಲಿ ಅಚ್ಚಳಿಯಾಗಿ ಉಳಿದರು. ಇದೀಗ ಇವರ ಆಗಮನ ಕನ್ನಡಕ್ಕಂತೂ ಅದೃಷ್ಟ ‘ಲಕ್ಷ್ಮಿ’ಯ ಆಗಮನದಂತಾಗಿದೆ.
‘ಬಡ್ಡಿ ಬಂಗಾರಮ್ಮ’, ‘ಹೆಂಡ್ತಿಗೆ ಹೇಳ್ಬೇಡಿ’, ‘ಬಾರೆ ನನ್ನ ಮುದ್ದಿನ ರಾಣಿ’, ‘ಕುಂಕುಮ ತಂದ ಸೌಭಾಗ್ಯ’ ಹೀಗೆ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಮೇರು ನಟರಾದ ಡಾ. ರಾಜ್ ಕುಮಾರ್, ಅನಂತ್ ನಾಗ್ ಅವರೊಂದಿಗೆ ಜೋಡಿಯಾಗಿ ಕಾಣಿಸಿದ್ದರು. ಆ ಬಳಿಕ ಸಿನಿಮಾ ರಂಗದಿಂದ ದೂರ ಉಳಿದರು.
ಇದೀಗ ಹಿರಿಯ ನಟಿ ಮಹಾಲಕ್ಷ್ಮಿ ಕಿರುತೆರೆಗೆ ಕಾಲಿಟ್ಟಿದ್ದಾರೆ. ‘ಕಾವೇರಿ ಕನ್ನಡ ಮೀಡಿಯಂ’ ಧಾರವಾಹಿಯಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಮುಖ್ಯ ಪಾತ್ರದಲ್ಲಿ ನಟಿ ಬಣ್ಣ ಹಚ್ಚುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಧಾರವಾಹಿ ಪ್ರಿಯರಂತೂ ಮಹಾಲಕ್ಷ್ಮಿ ಅವರನ್ನು ಕಾಣುವ ತವಕದಲ್ಲಿದೆ ಎಂದರೆ ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ