newsfirstkannada.com

Share :

05-06-2023

  ಬಾಲಿವುಡ್​ನ ಹಿರಿಯ ನಟಿ ಸುಲೋಚನಾ ಇನ್ನಿಲ್ಲ

  300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿ ಅಭಿನಯ

  ತೀವ್ರ ಅನಾರೋಗ್ಯದಿಂದ ನಟಿ ನಿಧನ

ಬಾಲಿವುಡ್​ನ ಹಿರಿಯ ನಟಿ ಸುಲೋಚನಾ ಲಾಟ್ಕರ್ (94) ವಿಧಿವಶರಾಗಿದ್ದಾರೆ. ಉಸಿರಾಟ ತೊಂದರೆ ಹಾಗೂ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ ಎಂದು ಅವರ ಪುತ್ರಿ ಕಾಂಚನಾ ಮಾಹಿತಿ ನೀಡಿದ್ದಾರೆ.

ಇಂದು ಅಂತ್ಯಕ್ರಿಯೆ

ಕಳೆದ ಮಾರ್ಚ್​​ನಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಕಳೆದ ಮೂರು ವಾರಗಳ ಹಿಂದಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.  ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಜೂನ್ 3 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ಸಹಾಯದಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ದುರಾದೃಷ್ಟವಶಾತ್ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಅಂತ್ಯಕ್ರಿಯೆಯು ಇವತ್ತು ನಡೆಯಲಿದ್ದು, ದಾದರ್ ಶವಗಾರದಲ್ಲಿ ಮಾಡ್ತೀವಿ ಎಂದು ಕಾಂಚನ ತಿಳಿಸಿದ್ದಾರೆ. ಸುಲೋಚನಾ ಅವರ ಅಗಲಿಕೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಸಿಂಗ್ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.

ಯಾರು ಸುಲೋಚನಾ..?

ಸುಲೋಚನಾ ಲಾಟ್ಕರ್​ ಹಿಂದಿ ಹಾಗೂ ಮರಾಠಿ ಭಾಷೆಯ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಿಂದಿ ಚಿತ್ರಗಳಲ್ಲಿ ಹೆಚ್ಚಾಗಿ ಅವರು ಅಮ್ಮನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಶ್ರೀ 420, ನಾಗಿನ್, ಅಬ್ ದಿಲ್ಲಿ ದೌರ್ ನಹೀನ್, Mr and Mrs, ಆಯೆ ದಿನ್ ಬಹರ್ ಕೇ, ದಿಲ್ ದೇಕೆ ದೇಖೋ, ಆಶಾ ಅಂಡ್ ಮಜ್​​ಬೂರ್, ನಯಿ ರೋಶ್ನಿ, ಆಯಿ ಮಿಲನ್ ಕಿ ಬೆಲಾ, ಗೋರಾ ಔರ್ ಕಲಾ, ದೇವರ್, ಬಂದಿನಿ ಸೇರಿದಂತೆ ಬಾಲಿವುಡ್​ನ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸುಲೋಚನಾ ದೇಶದ ಪ್ರತಿಷ್ಠಿತ ಪದ್ಮಶ್ರೀ, ಹಾಗೂ 2009ರಲ್ಲಿ ಮಹಾರಾಷ್ಟ್ರ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

Load More