ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ನಾಯಕ ಸೀತಾರಾಮ್ ಯೆಚೂರಿ ಇನ್ನಿಲ್ಲ!
ತೀವ್ರ ಶ್ವಾಸಕೋಶದ ಸೋಂಕಿನಿಂದಾಗಿ ಬಳಲುತ್ತಿದ್ದ CPI(M) ಪಕ್ಷದ ಹಿರಿಯ ನಾಯಕ
ಚಿಕಿತ್ಸೆ ಫಲಿಸದೆ ಏಮ್ಸ್ನಲ್ಲೇ 72 ವರ್ಷದ ಸಿಪಿಐಎಂ ಹಿರಿಯ ನೇತಾರ ಕೊನೆಯುಸಿರು
ದೆಹಲಿ: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ. ತೀವ್ರ ಶ್ವಾಸಕೋಶದ ಸೋಂಕಿನಿಂದಾಗಿ ಬಳಲುತ್ತಿದ್ದ CPI(M) ಹಿರಿಯ ನಾಯಕ ಸೀತಾರಾಮ್ ಯೆಚೂರಿ ಅವರನ್ನು ಚಿಕಿತ್ಸೆಗಾಗಿ ದೆಹಲಿಯ ಏಮ್ಸ್‌ಗೆ ದಾಖಲು ಮಾಡಲಾಗಿತ್ತು. ಈಗ ಚಿಕಿತ್ಸೆ ಫಲಿಸದ ಕಾರಣ ಇವರು ನಿಧನರಾಗಿದ್ದಾರೆ.
ಇತ್ತೀಚೆಗೆ 72 ವರ್ಷದ ಸಿಪಿಐಎಂ ಹಿರಿಯ ನೇತಾರ, ಕಾಮ್ರೇಡ್ ಸೀತಾರಾಮ್ ಯೆಚೂರಿ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಹಾಗಾಗಿ ಇವರಿಗೆ ಎದೆ ಸೋಂಕು ಕಾಣಿಸಿಕೊಂಡಿತ್ತು. ಆದ್ದರಿಂದ ಚಿಕಿತ್ಸೆಗಾಗಿ ಹಿರಿಯ ನಾಯಕನನ್ನು ಚಿಕಿತ್ಸೆಗಾಗಿ ಏಮ್ಸ್‌ಗೆ ದಾಖಲಿಸಲಾಗಿತ್ತು. ಇವರು ವೆಂಟಿಲೇಟರ್ನಲ್ಲಿದ್ದರು. ವೈದ್ಯರ ತಂಡ ನಿಗಾ ಕೂಡ ವಹಿಸಿತ್ತು ಎಂದು ವರದಿಯಾಗಿದೆ.
ಯಾರು ಕಾಮ್ರೇಡ್ ಸೀತಾರಾಮ್ ಯೆಚೂರಿ?
ವಿದ್ಯಾರ್ಥಿ ಚಳುವಳಿಯಿಂದಲೇ ರಾಜಕೀಯಕ್ಕೆ ಬಂದ ಯೆಚೂರಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಸದಸ್ಯರಾಗಿದ್ದರು. ಒಂದು ವರ್ಷಗಳ ಕಾಲ ಎಸ್ಎಫ್ಐನಲ್ಲಿದ್ದ ಇವರು 1975ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾಗೆ ಸೇರಿದರು.
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ (ಜೆಎನ್‌ಯು) ವಿದ್ಯಾರ್ಥಿಯಾಗಿದ್ದಾಗ ಇವರನ್ನು ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಂಧಿಸಲಾಗಿತ್ತು. 3 ಬಾರಿ ಜೆಎನ್‌ಯು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ