newsfirstkannada.com

ಟೀಮ್ ಇಂಡಿಯಾದಲ್ಲಿ ಉಪ ನಾಯಕತ್ವದ ಫೈಟ್​; ವಿಶ್ವಕಪ್​ ಪರ್ಫಾಮೆನ್ಸ್​ ಮೇಲೆ ನಾಯಕತ್ವ ಸ್ಥಾನ

Share :

21-08-2023

    ಏಕದಿನ ವಿಶ್ವಕಪ್​ ಪರ್ಫಾಮೆನ್ಸ್​ ಮೇಲೆ ನಾಯಕತ್ವ ಸ್ಥಾನ..!

    ಬೂಮ್ರಾಗೆ ಉಪ ನಾಯಕತ್ವದ ಪಟ್ಟಾಭಿಷೇಕ..?

    ಪಾಂಡ್ಯ ಕೈಜಾರುತ್ತಿದೆಯಾ ಉಪ ನಾಯಕತ್ವ..?

ಟೀಮ್ ಇಂಡಿಯಾ ಪ್ರಕಟಕ್ಕೆ ಕೌಟ್​​ಡೌನ್ ಶುರುವಾಗಿದ್ದು, ಏಷ್ಯಾಕಪ್​​ ತಂಡದಲ್ಲಿ ಯಾರಿಗೆಲ್ಲಾ ಚಾನ್ಸ್​ ಸಿಗಲಿದೆ ಎಂಬ ಕುತೂಹಲ ಕ್ರಿಕೆಟ್​​ ವಲಯದಲ್ಲಿ ಮನೆ ಮಾಡಿದೆ. ಆದರೆ, ಇದೇ ವೇಳೆ ಟೀಮ್ ಇಂಡಿಯಾ, ಮಹತ್ತರ ಬದಲಾವಣೆಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.

ಹೌದು! ಇಂದು ಏಷ್ಯಾಕಪ್​​ಗೆ ಟೀಮ್ ಇಂಡಿಯಾ ಪ್ರಕಟಿಸುವ ಜೊತೆ ಜೊತೆಗೆ ಉಪ ನಾಯಕತ್ವಕ್ಕೆ ಹೊಸ ಆಟಗಾರನ ನೇಮಿಸುವ ಬಗ್ಗೆ ಭಾರೀ ಚರ್ಚೆಯೇ ನಡೆಯುತ್ತಿದೆ. ಇದರಂತೆ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ಹಾರ್ದಿಕ್​ಗೆ ಶಾಕ್ ನೀಡಿದರು ಅಚ್ಚರಿ ಇಲ್ಲ.

ಹಾರ್ದಿಕ್​ ಉಪ ಪಟ್ಟಕ್ಕೆ ಕಾದಿದ್ಯಾ ಸಂಚಕಾರ..?

ಸದ್ಯ ಟೀಮ್ ಇಂಡಿಯಾ ಏಕದಿನ ತಂಡದ ಉಪ ನಾಯಕನಾಗಿ ಹಾರ್ದಿಕ್, ಅಧಿಕಾರ ಚಲಾಯತಿಸುತ್ತಿದ್ದಾರೆ. ಆದರೆ, ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಉಪ ನಾಯಕತ್ವದ ಬದಲಾವಣೆ ಬಗ್ಗೆ ಮಹತ್ವದ ಚರ್ಚೆಗಳೇ ನಡೆಯುತ್ತಿದೆ. ಹೀಗಾಗಿ ನಾಯಕತ್ವದ ಜವಾಬ್ದಾರಿಯಲ್ಲಿ ಎಡವಿದ್ದ ಹಾರ್ದಿಕ್​​ಗೆ, ಉಪ ನಾಯಕತ್ವದ ಪಟ್ಟ ಕೈಜಾರುವ ಸಾಧ್ಯತೆ ಇದೆ. ಇದಕ್ಕೆಲ್ಲಾ ಕಾರಣ ಹಾರ್ದಿಕ್​​ರ ಸೇಫ್ ಗೇಮ್ ಸ್ಟ್ರಾಟರ್ಜಿ.

ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ಇತ್ತೀಚಿಗಿನ ವೆಸ್ಟ್ ಇಂಡೀಸ್ ಟೂರ್. ಈ ಟೂರ್​​ನ ಟಿ20 ಸರಣಿ ಸೋತಿದ್ದ ಪಾಂಡ್ಯ, ಫ್ಲಾಟ್​ ಟ್ರ್ಯಾಕ್​​ಗಳಲ್ಲಿ ಬ್ಯಾಟಿಂಗ್ ಬಡ್ತಿ ಪಡೆಯುತ್ತಿದ್ದರು. ಬೌಲಿಂಗ್​​​​​​​​​ಗೆ ಅನುಗುಣವಾದ ಪಿಚ್​ಗಳಲ್ಲಿ ಪೇಸ್ ಅಟ್ಯಾಕರ್​ ಆಗಿ ಬೌಲಿಂಗ್ ಮಾಡುತ್ತಿದ್ದರು. ಈ ಸೆಲ್ಪ್​ ಸೇಫ್ಟಿಯೇ ಮುಳುವಾಗ್ತಿದೆ.

ಪಾಂಡ್ಯ ಉಪ ಪಟ್ಟಕ್ಕೆ ಜಸ್​ಪ್ರೀತ್​ ಬೂಮ್ರಾನೇ ಥ್ರೆಟ್​..!

ಸದ್ಯ ಹಾರ್ದಿಕ್ ಪಾಂಡ್ಯಗೆ ಪ್ರಬಲ ಪೈಪೋಟಿ ನೀಡ್ತಿರುವ ಮತ್ತೊಬ್ಬ ಆಟಗಾರ ಅಂದ್ರೆ, ಅದು ಗುಜರಾತ್ ಮೂಲದ ಜಸ್​ಪ್ರೀತ್ ಬೂಮ್ರಾನೇ ಆಗಿದ್ದಾರೆ. ಸದ್ಯ ಐರ್ಲೆಂಡ್​​ ವಿರುದ್ಧ ಟಿ20 ಸರಣಿಯಲ್ಲಿ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿರುವ ಬೂಮ್ರಾ, ಈ ಹಿಂದೆ ಟೆಸ್ಟ್​ ತಂಡವನ್ನು ಮುನ್ನಡೆಸಿದ್ದರು. ಅಷ್ಟೇ ಅಲ್ಲ. ದಕ್ಷಿಣ ಆಫ್ರಿಕಾ ಸಿರೀಸ್​ನಲ್ಲಿ ವೈಸ್ ಕ್ಯಾಪ್ಟನ್ ಆಗಿಯೂ ಕಾರ್ಯ ನಿರ್ವಹಿಸಿದ್ದ ಬೂಮ್ರಾಗೆ, ಈಗ ಏಷ್ಯಾಕಪ್​ನಲ್ಲಿ ಉಪ ನಾಯಕನಾಗಿ ನೇಮಿಸುವ ಉತ್ಸುಕತೆ ಬಿಸಿಸಿಐ ತೋರಿದೆ ಎನ್ನಲಾಗಿದೆ. ಇದಿಷ್ಟೇ ಅಲ್ಲ. ಭವಿಷ್ಯದ ದೃಷ್ಟಿಯಿಂದಲೂ ಬಿಸಿಸಿಐ ಮೆಗಾ ಪ್ಲಾನ್ ಮಾಡ್ತಿದೆ.

ರೋಹಿತ್ ನಿರ್ಗಮನದ ಬಳಿಕ ಪಾಂಡ್ಯ & ಬೂಮ್ರಾಗೆ ಪಟ್ಟ

ಸದ್ಯ ಇಬ್ಬರು ಫೈಟ್​ ಜಸ್ಟ್​ ಉಪ ನಾಯಕತ್ವದ ಪಟ್ಟಕ್ಕೇ ಮಾತ್ರವೇ ಸಿಮೀತವಾಗಿಲ್ಲ. 2023ರ ಏಕದಿನ ವಿಶ್ವಕಪ್​​ ಬಳಿಕ ನಾಯಕತ್ವ ವಹಿಸಿಕೊಳ್ಳುವ ಎಲ್ಲಾ ಸಾಧ್ಯತೆ ಇದೆ. ಯಾಕಂದ್ರೆ, ಏಕದಿನ ವಿಶ್ವಕಪ್​ ಬಳಿಕ ರೋಹಿತ್ ಶರ್ಮಾ ನಾಯಕತ್ವಕ್ಕೆ ಗುಡ್​ ಬೈ ಹೇಳಲಿದ್ದು, ಹೊಸ ನಾಯಕ ನೇಮಕ ಮಾಡಬೇಕಾದ ಚಾಲೆಂಜ್​ ಬಿಸಿಸಿಐ ಮುಂದಿದೆ. ಹೀಗಾಗಿ ಏಕದಿನ ವಿಶ್ವಕಪ್​ನಲ್ಲಿ ನೀಡುವ ಉತ್ತಮ ಪ್ರದರ್ಶನದ ಆಧಾರದ ಮೇಲೆ ನಾಯಕತ್ವದ ಪಟ್ಟ ಕಟ್ಟಲು ಬಿಸಿಸಿಐ ಚಿಂತಿಸುತ್ತಿದೆ. ಈ ಸ್ಥಾನಕ್ಕೆ ಬೂಮ್ರಾ ಅಥವಾ ಪಾಂಡ್ಯ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ನಾಯಕತ್ವದ ರೇಸ್​ನಲ್ಲಿದ್ದಾರೆ ಮುಂಬೈಕರ್ ಶ್ರೇಯಸ್..!

ಹೌದು! ಹಾರ್ದಿಕ್ ಪಾಂಡ್ಯ ಹಾಗೂ ಜಸ್​ಪ್ರೀತ್ ಬೂಮ್ರಾ ಮಾತ್ರವಲ್ಲ. ಮುಂಬೈಕರ್ ಶ್ರೇಯಸ್​ ಅಯ್ಯರ್​ ಕೂಡ ಉಪ ನಾಯಕತ್ವ ಹಾಗೂ ನಾಯಕತ್ವದ ಪಟ್ಟದ ರೇಸ್​ನಲ್ಲಿದ್ಧಾರೆ. ಯಾಕಂದ್ರೆ, ರಾಹುಲ್ ಬಳಿಕ ಸ್ಟ್ರಾಂಗ್ ಕಂಟೇಟರ್​ ಆಗಿದ್ದ ಶ್ರೇಯಸ್​, ಇಂಜುರಿಯಿಂದಾಗಿ ವೈಸ್​ ಕ್ಯಾಪ್ಟನ್ ಪಟ್ಟ ತಪ್ಪಿತ್ತು. ಹೀಗಾಗಿ ಮುಂಬರುವ ದಿನಗಳಲ್ಲಿ ಶ್ರೇಯಸ್ ಅದ್ಬುತ ಪ್ರದರ್ಶನ ನೀಡಿದ್ರೆ, ನಾಯಕನಾದರೂ ಅಚ್ಚರಿ ಇಲ್ಲ.

ಒಟ್ನಲ್ಲಿ..! ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾದಲ್ಲಿ ಉಪ ನಾಯಕನ ರೇಸ್​ ನಡೆಯುತ್ತಿದ್ದು, ಅಂತಿಮವಾಗಿ ಯಾರು ರೋಹಿತ್​ಗೆ ಸಾಥ್​ ನೀಡ್ತಾರೆ ಅನ್ನೋದು ಇನ್ನಷ್ಟೇ ಬಹಿರಂಗವಾಗಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್ ಇಂಡಿಯಾದಲ್ಲಿ ಉಪ ನಾಯಕತ್ವದ ಫೈಟ್​; ವಿಶ್ವಕಪ್​ ಪರ್ಫಾಮೆನ್ಸ್​ ಮೇಲೆ ನಾಯಕತ್ವ ಸ್ಥಾನ

https://newsfirstlive.com/wp-content/uploads/2023/08/Hardik-and-Bumrah.jpg

Load More