newsfirstkannada.com

ರಾಜ್ಯದಲ್ಲಿ ನಿಲ್ಲದ ಡೆಂಘೀ ಅಟ್ಟಹಾಸ.. ಶಿವಮೊಗ್ಗದಲ್ಲಿ ಮಹಿಳೆ ಬಲಿ; 24 ಗಂಟೆಯಲ್ಲಿ 185 ಮಂದಿಗೆ ಅಟ್ಯಾಕ್‌

Share :

Published July 9, 2024 at 7:40pm

    ಕಳೆದ 15-20 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಮಹಿಳೆ ಸಾವು

    ಬಿರುಗಾಳಿಯಂತೆ ಅಬ್ಬರ ಶುರು ಮಾಡಿರೋ ಡೆಂಘೀ ಸಾವಿನ ನರ್ತನ

    ರಾಜ್ಯದಲ್ಲಿ ದಿನ ಕಳೆದಂತೆ ಡೆಂಘೀ ಮಹಾಮಾರಿಯ ಅಬ್ಬರ ಜೋರು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಮಹಾಮಾರಿಯ ಅಬ್ಬರ ಜೋರಾಗುತ್ತಿದೆ. ಪ್ರತಿ ದಿನ ನೂರಾರು ಮಂದಿ ಡೆಂಘೀ ಜ್ವರಕ್ಕೆ ತುತ್ತಾಗುತ್ತಿದ್ದರೆ, ಸಾವಿನ ಸಂಖ್ಯೆ ಕೂಡ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 185 ಹೊಸ ಡೆಂಘೀ ಕೇಸ್ ಪತ್ತೆಯಾಗಿದ್ರೆ, ರಾಜ್ಯದಲ್ಲಿ ಒಟ್ಟು ಡೆಂಘೀ ಪ್ರಕರಣಗಳ ಸಂಖ್ಯೆ 7547ಕ್ಕೆ ಏರಿಕೆ ಆಗಿದೆ. ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 346, ಇದುವರೆಗೆ ರಾಜ್ಯದಲ್ಲಿ ಡೇಂಘೀಯಿಂದ 7ಜನರು ಮೃತರಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಸದ್ದಿಲ್ಲದೇ ಡೆಂಘೀ ಸವಾರಿ; ಕಡಿವಾಣ ಹಾಕೋ ಸಾಹಸದಲ್ಲೂ ಪಾಲಿಕೆ ಯಡವಟ್ಟು; ಆಗಿದ್ದೇನು?

ಡೆಂಘೀ ಮಹಾಮಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ನಿವಾಸಿಯಾಗಿರೋ ರಶ್ಮಿ ಆರ್ ನಾಯಕ್ (42) ಮೃತ ಮಹಿಳೆ. ಕಳೆದ ಕಳೆದ 15-20 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನು ವೈದ್ಯರು ಮಹಿಳೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ರಶ್ಮಿ ಕೊನೆಯುಸಿರೆಳೆದಿದ್ದಾರೆ. ಪತಿ ಹಾಗೂ ಇಬ್ಬರು ಪುತ್ರರನ್ನು ಬಿಟ್ಟು ರಶ್ಮಿ ಅವರು ಅಗಲಿದ್ದಾರೆ. ಈಗಾಗಲೇ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸಾಕಷ್ಟು ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ. ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಡೆಂಘೀ ಲಕ್ಷಣಗಳು

  • ಜ್ವರ
  • ತಲೆನೋವು
  • ಮೈ ಕೈ ನೋವು
  • ಕೀಲುನೋವು
  • ಹೊಟ್ಟೆನೋವು
  • ವಾಕರಿಕೆ
  • ವಾಂತಿ
  • ಭೇದಿ

ಡೆಂಘೀ ತಡೆಗೆ ಕ್ರಮಗಳು!

  • ಗಲೀಜು ನೀರಿನಲ್ಲಿ ಡೆಂಘೀ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ
  • ಸೊಳ್ಳೆ ನಿಯಂತ್ರಣಕ್ಕೆ ಸ್ವಚ್ಛತೆ ಕಾಪಾಡೋದು ಅತೀ ಮುಖ್ಯ
  • ಮನೆ ಸುತ್ತ, ಟೆರೇಸ್ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು
  • ನೀರು ಶೇಖರಣೆಯಾಗುವ ಪ್ರದೇಶವಿದ್ರೆ ಅಲ್ಲಿ ಶುಚಿಗೊಳಿಸಬೇಕು
  • ಮನೆಯ ಸುತ್ತಲಿನ ಪರಿಸರವನ್ನ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು
  • ಮಕ್ಕಳ ಸುರಕ್ಷತೆಗೆ ಸೊಳ್ಳೆ ಪರದೆಯಡಿ ಮಲಗಿಸುವುದು ಒಳ್ಳೆಯದು
  • 3 ದಿನ ನಿರಂತರ ಜ್ವರ, ಮೈಕೈ ನೋವಿದ್ರೆ ವೈದ್ಯರಿಗೆ ತೋರಿಸಬೇಕು
  • ತಲೆ ನೋವು ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ
  • ಶುದ್ಧ, ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಒಳ್ಳೆಯದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ನಿಲ್ಲದ ಡೆಂಘೀ ಅಟ್ಟಹಾಸ.. ಶಿವಮೊಗ್ಗದಲ್ಲಿ ಮಹಿಳೆ ಬಲಿ; 24 ಗಂಟೆಯಲ್ಲಿ 185 ಮಂದಿಗೆ ಅಟ್ಯಾಕ್‌

https://newsfirstlive.com/wp-content/uploads/2024/07/dengu.jpg

Load More