ಚೈತ್ರಾ ಕುಂದಾಪುರ ಅವರ ಆರೋಗ್ಯ ಸ್ಥಿರವಾಗಿದೆ ಎಂದ ವೈದ್ಯರು
ಸೆಪ್ಟೆಂಬರ್ 23ರವರೆಗೂ ಸಿಸಿಬಿ ಕಸ್ಟಡಿಗೆ ನೀಡಿರುವ ನ್ಯಾಯಾಲಯ
ಸಿಸಿಬಿ ತನಿಖೆಯಿಂದ ತಪ್ಪಿಸಿಕೊಳ್ಳೋದಕ್ಕೆ ಡ್ರಾಮಾ ಮಾಡ್ತಿದ್ದಾರಾ?
ಬೆಂಗಳೂರು: 5 ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ವಶದಲ್ಲಿರುವಾಗಲೇ ಚೈತ್ರಾ ಕುಂದಾಪುರ ಅವರು ಅಸ್ವಸ್ಥರಾಗಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೈತ್ರಾ ಕುಂದಾಪುರ ಅವರ ಆರೋಗ್ಯ ಸ್ಥಿರವಾಗಿದೆ. ಅವರ ಆರೋಗ್ಯದ ಬಗ್ಗೆ ಇಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಕೇಸ್‌ನಲ್ಲಿ ಆ ವಾಗ್ಮಿ ಕೈವಾಡ ಇದ್ಯಾ?; ತನಿಖೆಯಲ್ಲಿ ಸ್ಫೋಟಕ ವಿಷ್ಯಗಳು ಬಯಲು
ಸಿಸಿಬಿ ವಶದಲ್ಲಿರುವ ಚೈತ್ರಾ ಕುಂದಾಪುರ ಅವರ ಆರೋಗ್ಯ ಸ್ಥಿರವಾಗಿದೆ. ಸಿಟಿ ಸ್ಕ್ಯಾನ್ ಕೂಡ ನಾರ್ಮಲ್ ಇದೆ. ಚೈತ್ರಾ ಕುಂದಾಪುರ ಅವರು ಆಸ್ಪತ್ರೆಗೆ ದಾಖಲಾದಾಗ ಅವರಿಗೆ ಮೂರ್ಛೆ ರೋಗ ಇರಲಿಲ್ಲ. ಅವರನ್ನ ಈಗ ಮಾತನಾಡಿಸಬಹುದು ಎಂದು ಪರೀಕ್ಷೆ ನಡೆಸಿರುವ ವೈದ್ಯರು ಹೇಳಿದ್ದಾರೆ. ಆದ್ರೆ ಚೈತ್ರಾ ಕುಂದಾಪುರ ಅವರು ಮಾತ್ರ ಯಾರನ್ನೂ ಮಾತನಾಡಿಸುತ್ತಿಲ್ಲ ಎನ್ನಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಚೈತ್ರಾ ಕುಂದಾಪುರ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ಸಿಸಿಬಿ ತನಿಖೆಯಿಂದ ತಪ್ಪಿಸಿಕೊಳ್ಳೋದಕ್ಕೆ ಚೈತ್ರಾ ಕುಂದಾಪುರ ಅವರು ಆಸ್ಪತ್ರೆಯಲ್ಲಿದ್ದು ಡ್ರಾಮಾ ಮಾಡ್ತಿದ್ದಾರಾ ಅನ್ನೋ ಅನುಮಾನವೂ ವ್ಯಕ್ತವಾಗಿದೆ. ಸೆಪ್ಟೆಂಬರ್ 23ರವರೆಗೂ ಕೋರ್ಟ್ ಚೈತ್ರಾ ಕುಂದಾಪುರ ಅವರನ್ನ ಸಿಸಿಬಿ ಕಸ್ಟಡಿಗೆ ನೀಡಿದೆ. ಸೆಪ್ಟೆಂಬರ್ 15ರಂದು ಆಸ್ಪತ್ರೆಗೆ ದಾಖಲಾಗಿರುವ ಚೈತ್ರಾ ಕುಂದಾಪುರ ಅವರ ಚಿಕಿತ್ಸೆ ಇಂದೂ ಕೂಡ ಮುಂದುವರಿದಿದೆ.
ಚೈತ್ರಾ ಕುಂದಾಪುರ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯ ತಜ್ಞ ವೈದ್ಯರು ಸೂಚಿಸಿದ ಹಿನ್ನೆಲೆ MRI ಸ್ಕ್ಯಾನಿಂಗ್ ಮಾಡಲಾಗಿದೆ. ಆಸ್ಪತ್ರೆ ಸಿಬ್ಬಂದಿ ಸ್ಟ್ರೆಚರ್‌ನಲ್ಲಿ ಚೈತ್ರಾ ಅವರನ್ನು ಕರೆದುಕೊಂಡು ಹೋಗಿ ಸ್ಕ್ಯಾನಿಂಗ್ ಮುಗಿಸಿ ವಾಪಸ್ ಕರೆತಂದಿದ್ದಾರೆ. ಒಂದು ವೇಳೆ MRI ಸ್ಕ್ಯಾನಿಂಗ್‌ನಲ್ಲಿ ನಾರ್ಮಲ್ ಇದ್ದರೆ ಚೈತ್ರಾ ಕುಂದಾಪುರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ