/newsfirstlive-kannada/media/post_attachments/wp-content/uploads/2024/11/TIGER-JOHNY-1.jpg)
ಉತ್ತರ ಪ್ರದೇಶದ ವಾರಾಣಸಿಯಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮಂಗವೊಂದು ಬಿಲ್ಡಿಂಗ್​ನಿಂದ ಐಷಾರಾಮಿ ಕಾರ್​ನ ಸನ್​ರೂಫ್ ಮೇಲೆ ಜಿಗಿದು ಅದನ್ನು ಪುಡಿ ಪುಡಿ ಮಾಡಿದೆ. ಮಂಗ ಹೀಗೆ ಜಿಗಿದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದು ಜಿಗಿದ ರಭಸ ನೋಡಿದರೆ ಮಂಗನಿಗೆ ಏನೋ ದೊಡ್ಡ ಗಾಯವೇ ಆಗಿದೆ ಎಂದು ಭಾವಿಸಲಾಗಿತ್ತು. ಸನ್​ರೂಫ್​​ ಮುರಿದ ಹೊಡೆತಕ್ಕೆ ಕಾರಿನೊಳಕ್ಕೆ ಹೋಗಿ ಬಿದ್ದ ಮಂಗ ಆಮೇಲೆ ನಿರಾಯಸವಾಗಿ ಆಚೆ ಬಂದು ಓಡಿ ಹೋಗಿದೆ.
ಇದನ್ನೂ ಓದಿ:88 ವರ್ಷಗಳ ಹಿಂದಿನ ನಂಬಿಕೆ ಸುಳ್ಳಾಯ್ತು.. ಕಾಳಿಂಗ ಸರ್ಪದ ಮಹಾ ರಹಸ್ಯ ಬಯಲು; ಏನದು ಗೊತ್ತಾ?
ಕಟ್ಟಡದ ಪಕ್ಕದಲ್ಲಿ ಪಾರ್ಕ್ ಮಾಡಿದ್ದ ಕಾರಿನ ಮೇಲೆ ಮಂಗ ಜಿಗಿದಿದೆ. ಏನಾಯ್ತು ಅಂತ ನೋಡುವಷ್ಟರಲ್ಲಿ ಏನೂ ಆಗೇ ಇಲ್ಲವೇನೋ ಅನ್ನೋ ಲೆಕ್ಕದಲ್ಲಿ ಕೋತಿ ಆಚೆ ಬಂದು ಓಡೋಡಿ ಹೋಗಿದೆ. ಈ ಒಂದು ವಿಡಿಯೋದ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಲ್​ಚಲ್ ಎಬ್ಬಿಸಿದೆ. ಮಂಗವೆಂದರೇ ಚೇಷ್ಟೆಗೆ ಕುಚೇಷ್ಟೆಗೆ ಇನ್ನೊಂದು ಹೆಸರು. ಈ ವಾನರ ಮಾಡಿದ ಅವಾಂತರವನ್ನು ಕಂಡ ಸೋಷಿಯಲ್ ಮೀಡಿಯಾ ಜನರು ಕಾರ್ ಮಾಲೀಕನ ಬಗ್ಗೆ ಮರುಕ ವ್ಯಕ್ತ ಪಡಿಸಿದ್ದಾರೆ.
ले बे ये गया तेरा सन रूफ 😭😭 pic.twitter.com/n82LOoJKO4
— Raja Babu (@GaurangBhardwa1)
ले बे ये गया तेरा सन रूफ 😭😭 pic.twitter.com/n82LOoJKO4
— Raja Babu (@GaurangBhardwa1) November 19, 2024
">November 19, 2024
ಈ ಒಂದು ಘಟನೆ ವಾರಾಣಸಿಯ ವಿಶ್ವೇಶ್ವರ ಗಂಜ್​ನಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವಿಡಿಯೋವನ್ನು ನೋಡಿದ ಅನೇಕ ನೆಟ್ಟಿಗರು ಅನೇಕ ಹಾಸ್ಯಭರಿತ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಒಂದು ಹಾನಿ ಇನ್ಶೂರೆನ್ಸ್ ವ್ಯಾಪ್ತಿಯಲ್ಲಿ ಬರುತ್ತದೆಯಾ ಎಂದು ಒಬ್ಬರು ಪ್ರಶ್ನಿಸಿದ್ದರೆ. ಮತ್ತೊಬ್ಬರು ಈ ಘಟನೆಯನ್ನು ಕಾರ್ ಮಾಲೀಕ ಇನ್ಶೂರೆನ್ಸ್ ಕಂಪನಿಗೆ ಹೇಗೆ ವಿವರಿಸುತ್ತಾರೆ ಎಂದು ಪ್ರಶ್ನಿಸಿದ್ದರೆ. ಮತ್ತೊಬ್ಬರು ಇದೇ ಕಾರಣಕ್ಕೆ ನಮ್ಮ ತಂದೆಗೆ ನಾನು ಕಾರ್​ ತೆಗೆದುಕೊಳ್ಳುವುದು ಬೇಡ ಎಂದು ಹೇಳಿದ್ದೇನೆ. ನೋ ಕಾರ್, ನೋ ಡ್ಯಾಮೇಜ್ ಎಂದು ಪ್ರತಿಕ್ರಿಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us