newsfirstkannada.com

ಅಂದ್ರಳ್ಳಿಗೆ ಅಣ್ಣನೇ ಬಾಸ್.. ಇನ್ನೂ ಮೀಸೆ ಚಿಗುರದ ಅಪ್ರಾಪ್ತನಿಂದ ಗೂಂಡಾಗಿರಿ; ಹಲ್ಲೆ ಮಾಡಿದ ವಿಡಿಯೋ ಹಾಕಿ ಶೋಕಿ

Share :

19-08-2023

    ಸಿಲಿಕಾನ್‌ ಸಿಟಿಯಲ್ಲಿ ಪುಂಡಾಟ ಮೆರೆದ ಮತ್ತೊಬ್ಬ ಪುಡಿ ರೌಡಿ

    ನನ್ನ ಅಣ್ಣನ ಬಾಸ್ ಅಂತಾ ಕರೀಬೇಕು ಎಂದು ಕೂಡಿ ಹಾಕಿ ಹಲ್ಲೆ

    ಕೋಣೆಯಲ್ಲಿ ಕೂಡಿ ಹಾಕಿ ಮಾರಕಾಸ್ತ್ರಗಳಿಂದ ಬೆದರಿಕೆ ಆರೋಪ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಡಿರೌಡಿಗಳ ಪುಂಡಾಟ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಸಣ್ಣ, ಸಣ್ಣ ವಿಷಯಕ್ಕೂ ಕಿರಿಕ್ ಮಾಡೋ ಕಿಡಿಗೇಡಿಗಳು ಗೂಂಡಾಗಿರಿಯಲ್ಲಿ ತೊಡಗಿದ್ದಾರೆ. ಇನ್ನೂ ಮೀಸೆ ಚಿಗುರದ ಪುಡಿರೌಡಿಯೊಬ್ಬ ಒಬ್ಬ ಹುಡುಗನನ್ನು ಕೋಣೆಯಲ್ಲಿ ಕೂಡಿ ಹಾಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

ವಿಡಿಯೋದಲ್ಲಿ ಅಪ್ರಾಪ್ತ ಬಾಲಕನೊಬ್ಬ ನನ್ನ ಅಣ್ಣನ್ನ ಬಾಸ್ ಅಂತಾ ಕರೀಬೇಕು ಅಂತಾ ಹೇಳಿ ಹಲ್ಲೆ ಮಾಡಿದ್ದಾನೆ. ಕೋಣೆಯಲ್ಲಿ ಒದೆ ತಿಂದ ಹುಡುಗ ನರಳಾಡುತ್ತಿರುವ ದೃಶ್ಯ ಸೆರೆಯಾಗಿದೆ. ಆಶ್ಚರ್ಯ ಏನಂದ್ರೆ ಹಲ್ಲೆ ಮಾಡಿದ ವಿಡಿಯೋವನ್ನು ಈ ಪುಂಡರೇ ತಮ್ಮ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಜ್ವರಕ್ಕಾಗಿ ಇಂಜೆಕ್ಷನ್ ಕೊಟ್ರಂತೆ ವೈದ್ಯರು.. ಯುವ ಉದ್ಯಮಿ ಸಾವು.. ಈ ಸಾವು ನ್ಯಾಯವೇ..?

ಅಂದ ಹಾಗೆ ಪುಡಿ ರೌಡಿಗಳ ಪುಂಡಾಟದ ಈ ಘಟನೆ ನಡೆದಿರೋದು ಬೆಂಗಳೂರಿನ ಅಂದ್ರಳ್ಳಿ ಏರಿಯಾದಲ್ಲಿ. ಜಗ್ಗಿ ಸಹೋದರ ಅಭಿ ಅಪ್ರಾಪ್ತನನ್ನು ಕೋಣೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇನ್‌ಸ್ಟಾದಲ್ಲಿ ಹಲ್ಲೆ ಮಾಡಿದ ವಿಡಿಯೋ ಹಾಕಿ ಶೋಕಿ ಮೆರೆದಿರೋದು ಪುಂಡರ ಪುಂಡಾಟಕ್ಕೆ ಸಾಕ್ಷಿಯಾಗಿದೆ. ಮಾರಣಾಂತಿಕ ಹಲ್ಲೆ ಮಾಡಿರೋ ವಿಡಿಯೋ ಇನ್‌ಸ್ಟಾದಲ್ಲಿ ಅಪ್ಲೋಡ್ ಆಗಿದ್ರೂ ಪೊಲೀಸರು ಸೈಲೆಂಟ್‌ ಆಗಿರೋದು ಆಶ್ಚರ್ಯ ತಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದ್ರಳ್ಳಿಗೆ ಅಣ್ಣನೇ ಬಾಸ್.. ಇನ್ನೂ ಮೀಸೆ ಚಿಗುರದ ಅಪ್ರಾಪ್ತನಿಂದ ಗೂಂಡಾಗಿರಿ; ಹಲ್ಲೆ ಮಾಡಿದ ವಿಡಿಯೋ ಹಾಕಿ ಶೋಕಿ

https://newsfirstlive.com/wp-content/uploads/2023/08/Bangalore-Rowdy-Video.jpg

Load More