newsfirstkannada.com

Shocking News: ಮಣಿಪುರದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯದ ವಿಡಿಯೋ; ವ್ಯಕ್ತಿಯ ತಲೆ ಕತ್ತರಿಸಿ ಕೋಲಿಗೆ ನೇತು ಹಾಕಿ ವಿಕೃತಿ

Share :

21-07-2023

    ಮಹಿಳೆಯರ ಬೆತ್ತಲೆ ಮೆರವಣಿಗೆ ಬೆನ್ನಲ್ಲೇ ಮತ್ತೊಂದು ವಿಡಿಯೋ

    ಕುಕಿ ಜನಾಂಗದ ಡೆವಿಡ್ ಎಂಬ ವ್ಯಕ್ತಿಯ ತಲೆ ಕತ್ತರಿಸಿದ ಕಿರಾತಕರು

    ಜುಲೈ 2 ರಂದು ದುಷ್ಕೃತ್ಯ, ಇವತ್ತು ವಿಡಿಯೋ ವೈರಲ್

ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದ ವಿಡಿಯೋ ಒಂದು ಎಲ್ಲರ ಬೆಚ್ಚಿಬೀಳಿಸಿತ್ತು. ಇದೀಗ ಅದೇ ಮಣಿಪುರದಲ್ಲಿ ನಡೆದಿದೆ ಎನ್ನಲಾಗಿರುವ ಮತ್ತೊಂದು ವಿಡಿಯೋ ಹೊರಬಿದ್ದಿದ್ದು, ಭಯಾನಕವಾಗಿದೆ. ವ್ಯಕ್ತಿಯೊಬ್ಬರ ಕುತ್ತಿಗೆಯನ್ನು ಕಡಿದು ಬಿದಿರಿನ ಕೋಲಿಗೆ ಸಿಕ್ಕಿಸಿರುವ ವಿಡಿಯೋ ಅದಾಗಿದೆ.

ಬಿಷ್ಣುಪುರ ಜಿಲ್ಲೆಯ ವಸತಿ ಪ್ರದೇಶ (residential area)ದಲ್ಲಿ ಈ ಕೃತ್ಯ ನಡೆದಿದೆ. ಕುಕಿ ಸಮುದಾಯದ ಡೆವಿಡ್ ಥೀಕ್, ಎಂಬಾತನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ನಂತರ ಆತನ ತಲೆಯನ್ನು ಬೊಂಬೋ (ಬಿದುರು) ಕೋಲಿಗೆ ಸಿಕ್ಕಿಸಿ ವಿಕೃತಿ ಮೆರೆದಿದ್ದಾರೆ. ಜುಲೈ 2 ರಂದು ಬೆಳಗ್ಗೆ 12 ಗಂಟೆಗೆ ನಡೆದ ಘರ್ಷಣೆಯಲ್ಲಿ ಡೆವಿಡ್​​ರನ್ನು ಕೊಲೆ ಮಾಡಲಾಗಿದೆ. ಈ ಸಂಘರ್ಷದಲ್ಲಿ ಒಟ್ಟು ಮೂವರು ಪ್ರಾಣಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ದೇಶದಾದ್ಯಂತ ಸಂಚಲನ ಮೂಡಿಸಿದೆ.

ಇನ್ನು, ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಣಿಪುರ ಪೊಲೀಸರು ಒಟ್ಟು ಐವರನ್ನು ಬಂಧಿಸಿದ್ದಾರೆ. ಅದರಲ್ಲೂ ಮುಖ್ಯ ಆರೋಪಿಯ ಮನೆಗೆ ಬೆಂಕಿಯಿಟ್ಟು ಭಸ್ಮಮಾಡಲಾಗಿದೆ. ಮಣಿಪುರದಲ್ಲಿ ಮೀಸಲಾತಿ ವಿಚಾರ ಸಂಬಂಧ ಕುಕಿ ಮತ್ತು ಮೇಟಿ ಸಮುದಾಯದ ಮಧ್ಯೆ ಸಂಘರ್ಷ ನಡೆಯುತ್ತಿದೆ. ಇದುವರೆಗೆ 160ಕ್ಕೂ ಹೆಚ್ಚು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shocking News: ಮಣಿಪುರದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯದ ವಿಡಿಯೋ; ವ್ಯಕ್ತಿಯ ತಲೆ ಕತ್ತರಿಸಿ ಕೋಲಿಗೆ ನೇತು ಹಾಕಿ ವಿಕೃತಿ

https://newsfirstlive.com/wp-content/uploads/2023/07/manipur-1-1.jpg

Load More