ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಸಂದೀಪ್
ಸಂದೀಪ್ ಕೊನೆಯ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ
ಕೊನೆಗೂ ಸಿಕ್ತು ಬೆಂಗಳೂರು ಮೂಲದ ಪ್ರವಾಸಿಗನ ಮೃತದೇಹ
ಕೊಡಗು: ನಿನ್ನೆ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದ ಬಳಿ ಬೆಂಗಳೂರು ಮೂಲದ ಪ್ರವಾಸಿಗ ಸಂದೀಪ್ ಎಂಬಾತ ಸ್ನೇಹಿತರೊಂದಿಗೆ ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿತ್ತು. ಇಂದು ನೀರು ಪಾಲಾಗಿ ಸಾವನ್ನಪ್ಪಿದ ಸಂದೀಪ್ ಮೃತದೇಹ ಸಿಕ್ಕಿದೆ. ಆದರೆ ನೀರಿನಲ್ಲಿ ಕೊಚ್ಚಿ ಹೋದ ಸಂದೀಪ್ ಸಾವಿಗೂ ಮುನ್ನ ಬದುಕಲು ನೀರಿನಲ್ಲಿ ಹೋರಾಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಏನಿದು ಘಟನೆ?
ಸಂದೀಪ್ ಮೂವರು ಸ್ನೇಹಿತರೊಂದಿಗೆ ಹಾರಂಗಿ ಜಲಾಶಯಕ್ಕೆ ಬಂದಿದ್ದ. ಈ ವೇಳೆ ಹಾರಂಗಿ ಜಲಾಶಯದ ಮುಂಭಾಗದ ಸೇತುವೆ ಮೇಲೆ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಆಯ ತಪ್ಪಿ ನೀರಿನಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ.
ನಿನ್ನೆಯಿಂದ ಅಗ್ನಿಶಾಮಕ ದಳ ಮತ್ತು ನುರಿತ ಈಜುಗಾರರು ಸಂದೀಪ್ಗಾಗಿ ಹುಡುಕಾಟ ನಡೆಸಿದ್ದರು. ಆದರೆ ನೀರಿನ ರಭಸ ಹೆಚ್ಚಿದ್ದ ಕಾರಣ ಸಂದೀಪ್ ಸಿಕ್ಕಿರಲಿಲ್ಲ. ಮಾತ್ರವಲ್ಲದೆ ಜಲಾಶಯದ ಹೊರಹರಿವನ್ನು ತಡೆಹಿಡಿದು ಹುಡುಕಲಾಗಿತ್ತು. ಆದರೂ ಮೃತದೇಹ ಸಿಕ್ಕಿರಲಿಲ್ಲ. ಇಂದು ಸಂದೀಪ್ ಮೃತದೇಹ ಸಿಕ್ಕಿದೆ.
ಹಾರಂಗಿ ಜಲಾಶಯದ ನೀರಿನಲ್ಲಿ ಕೊಚ್ಚಿ ಹೋದ ಸಂದೀಪ್ ಸಾವಿಗೂ ಮುನ್ನ ಬದುಕಲು ಹೋರಾಡುತ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.#harangi #Kodagu #Harangidam #selfie pic.twitter.com/3LogC1pCFj
— NewsFirst Kannada (@NewsFirstKan) August 4, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ