newsfirstkannada.com

ಧೋನಿ ಕಣ್ಣೀರು ಹಾಕಲು ಮತ್ಯಾರು ಕಾರಣರಲ್ಲ, ಇವರೇ!! ಅದೊಂದು ಸಂಗತಿಗೆ ಮಾಹಿ ಭಾವುಕರಾದ್ರಾ?

Share :

31-05-2023

    ಫೈನಲ್​ ಗೆಲುವಿನ ಬಳಿಕ ಕೂಲ್ ಕ್ಯಾಪ್ಟನ್​ ಕಣ್ಣೀರು..!

    ಜಡ್ಡುನಾ ತಬ್ಬಿ ಭಾವುಕರಾದ ಕ್ಯಾಪ್ಟನ್​​ ಮಾಹಿ

    ಬೆಲೆ ಕಟ್ಟಲಾಗದ ಪ್ರೀತಿಗೆ ಗಿಫ್ಟ್​​ ನೀಡಲು ಧೋನಿ ರೆಡಿ

ವಿಶ್ವಕಪ್​ ಗೆದ್ದಾಗಲೂ ಕುಣಿದು ಕುಪ್ಪಳಿಸಿರಲಿಲ್ಲ. ಈ ಹಿಂದೆ ಚೆನ್ನೈ ಚಾಂಪಿಯನ್ ಪಟ್ಟಕ್ಕೇರಿದಾಗಲೂ ಮೀಸೆ ತಿರುವಿದವರಲ್ಲ. 5 ಬಾರಿ ಫೈನಲ್​​ನಲ್ಲಿ ಸೋತ್ರೂ ಕಣ್ಣೀರು ಹಾಕಿದವರಲ್ಲ. ಸಾಲು ಸಾಲು ಸೋಲುಗಳನ್ನ ಕಂಡಾಗಲೂ ಎದೆಗುಂದದ ಕೂಲ್​ ಕ್ಯಾಪ್ಟನ್, ಮೊದಲ ಬಾರಿಗೆ ಕಣ್ಣೀರು ಹಾಕಿದ್ದಾರೆ. ಹಾಗಾದ್ರೆ, ಧೋನಿಯ ಈ ಕಣ್ಣೀರಿನ ಕಥೆ ಏನು ಅಂತೀರಾ..? ಪೂರ್ತಿ ಓದಿ ಮಹೇಂದ್ರ ಸಿಂಗ್ ಧೋನಿ.. ಕ್ರಿಕೆಟ್ ಲೋಕಕ್ಕೆ ಸಿಕ್ಕ ಅದ್ಬುತ ಮಾಂತ್ರಿಕ. ನಾಯಕನಾಗಿ ಈ ಮಾಂತ್ರಿಕ ಸೃಷ್ಟಿಸಿದ ಅದ್ಬುತಗಳು ಹಲವು.. ವಿಕೆಟ್ ಹಿಂದೆ ಮಾಡಿದ ಮೋಡಿಗಳಿಗೆ ಲೆಕ್ಕವೇ ಇಲ್ಲ. ಧೋನಿಯನ್ನ ಹಲ ವರ್ಷದಿಂದ ನೋಡಿದವರಿಗೆ, ಆರಾಧಿಸಿದವರಿಗೆ ಇದೇನು ಹೊಸದಲ್ಲ.. ಆದ್ರೆ, ಸೀಸನ್​-16 ಐಪಿಎಲ್​ನಲ್ಲಿ ನಿಜಕ್ಕೂ ಧೋನಿ ಕಂಡಿದ್ದು ವಿಭಿನ್ನ.

ಕ್ರಿಕೆಟ್ ವೃತ್ತಿ ಜೀವನದಲ್ಲಿ ಅವಿಸ್ಮರಣೀಯ ಗೆಲುವುಗಳನ್ನ ತಂದುಕೊಟ್ಟಿರೋ ಧೋನಿ, ಬ್ಯಾಟಿಂಗ್​ನಲ್ಲಿ ಶೂನ್ಯ ಸುತ್ತಲಿ, ಪಂದ್ಯ ಸೋಲೇ ಅನುಭವಿಸಲಿ.. ಗೆಲುವೇ ಕಾಣಲಿ.. ಪ್ರತಿಷ್ಠಿತ ಟ್ರೋಫಿಯೇ ಗೆಲ್ಲಲಿ.. ಧೋನಿಯ ಹಾವಭಾವ ಒಂಚೂರು ವ್ಯತ್ಯಾಸ ಇರಲ್ಲ. ಒಂದು ಸಣ್ಣ ನಗು ಬಿಟ್ರೆ, ಮುಖದಲ್ಲಿ ಕಾಣುವುದು ಗಾಂಭೀರ್ಯತೆ ಮಾತ್ರ. ಆದ್ರೆ, 16ನೇ ಆವೃತ್ತಿಯ ಐಪಿಎಲ್​ ಗೆದ್ದ

ಭಾವುಕರಾಗಿದ್ದೇಕೆ ನಿರ್ಭಾವುಕ ಕೂಲ್ ಮಾಸ್ಟರ್..?

ಆನ್​ಫೀಲ್ಡ್​ನಲ್ಲಿ ಧೋನಿ ಎಂದಿಗೂ ಕೂಲ್ ಆ್ಯಂಡ್ ಕಾಮ್.. ಕೆಲವೊಮ್ಮೆ ಸಿಟ್ಟಾಗಿರೋದು ಬಿಟ್ರೆ, ಮ್ಯಾಚ್ ಎಷ್ಟೇ ಟೆನ್ಶನ್​​ನಲ್ಲಿದ್ದರೂ ಕಾಮ್​​ ಆಗಿಯೇ ಕೆಲ್ಸ ಮುಗಿಸ್ತಾರೆ. ಸೋತಾಗ ಸಿಟ್ಟು ಮಾಡಿಕೊಳ್ಳುವುದು, ಗೆದ್ದಾಗ ಸಂಭ್ರಮಿಸೋದು ಧೋನಿಯ ಜಾಯಮಾನವೇ ಅಲ್ಲ. ಸೋಲು, ಗೆಲುವನ್ನ ಸಮಾನವಾಗಿ ಸ್ವೀಕರಿಸೋ ಧೋನಿಯ, ಈ ಮನೋಭಾವ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿ ಆದ್ರೆ, ಇದೇ ಧೋನಿ, ಐಪಿಎಲ್​ ಫೈನಲ್​ ಪಂದ್ಯದ ಗೆಲುವಿನ ಬಳಿಕ ಭಾವುಕರಾಗಿದ್ದರು. ಆಟಗಾರರು ಪಂದ್ಯದ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಮಾಹಿ ಡಗೌಟ್​​ನಲ್ಲಿ ಮೌನಾಚರಣೆಯಲ್ಲಿದ್ದರು. ಎಂದೂ ಕಣ್ಣೀರು ಹಾಕದ ಮಾಹೀ, ಜಡ್ಡುನಾ ತಬ್ಬಿ ಮುದ್ದಾಡಿ ಕಣ್ಣೀರಾಕಿದ್ದರು.

ಫ್ಯಾನ್ಸ್​ ಅಭಿಮಾನಕ್ಕೆ ತಲೆದೂಗಿದ ಮಹೇಂದ್ರ..!

ಹೌದು! ಐಪಿಎಲ್ ಸೀಸನ್​-16 ನಿಜಕ್ಕೂ ಮಾಹೀ ಪ್ರೀಮಿಯರ್ ಲೀಗ್ ಆಗಿತ್ತು. ಯಾಕಂದ್ರೆ, ಧೋನಿಯ ಕೊನೆ ಐಪಿಎಲ್ ಎಂದೇ ಊಹಿಸಿದ್ದ ಫ್ಯಾನ್ಸ್​, ಸ್ಟೇಡಿಯಂಗಳಿಗೆ ಸಾಗರೋಪಾದಿಯಲ್ಲಿ ನುಗ್ಗಿದ್ದರು. ಧೋನಿಯನ್ನ ಬೆಂಬಿಲಿಸಿದ್ದರು. ಧೋನಿ ಮೇಲಿನ ಪ್ರೀತಿ, ಅಕ್ಕರೆ ತೋರಿಸಿದ್ದರು. ಈ ಬೆಲೆಕಟ್ಟಲಾಗದ ಪ್ರೀತಿಗೆ ಮಿಸ್ಟರ್ ಕೂಲ್ ಅಕ್ಷರಶಃ ಭಾವುಕರಾಗಿದ್ದರು. ಇನ್​ಫ್ಯಾಕ್ಟ್​ ಈ ಬೆಲೆಕಟ್ಟಲಾಗದ ಪ್ರೀತಿಗೆ ಮಾರಿಹೋದ ಧೋನಿ, ಮತ್ತೊಂದು ಸೀಸನ್​ ಆಡಬೇಕೆಂಬ ಆಶಯ ವ್ಯಕ್ತಪಡಿಸಿದರು.

ನಾನು ನಿವೃತ್ತಿ ಘೋಷಿಸಲು ಇದು ಸೂಕ್ತ ಸಮಯ. ಆದರೆ, ನನಗೆ ಸಿಕ್ಕ ಪ್ರೀತಿ ಮತ್ತು ವಾತ್ಸಲ್ಯವನ್ನು ನೋಡಿದರೆ ಎಲ್ಲರಿಗೂ “ಧನ್ಯವಾದ” ಹೇಳುವುದು ನನ್ನ ಪಾಲಿಗೆ ತುಂಬಾ ಸುಲಭದ ಕೆಲಸ. ಆದರೆ, ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು  ಕನಿಷ್ಠ 1 ಐಪಿಎಲ್ ಸೀಸನ್ ಆಡುವುದು. ಇದು ನನ್ನ ದೇಹದ ಮೇಲೆ ಅವಲಂಬಿಸಿರುತ್ತದೆ. ಈ ಬಗ್ಗೆ ನಿರ್ಧಾರಕ್ಕೆ ಬರಲು ನನಗಿನ್ನೂ 6-7 ತಿಂಗಳುಗಳಿವೆ. ಇದು ನನ್ನ ಕಡೆಯಿಂದ ನಿಮಗೆ ಉಡುಗೊರೆ. ಇದು ನನಗೆ ಅಷ್ಟೊಂದು ಸುಲಭವಲ್ಲ. ಆದರೆ ಇದು ಅಭಿಮಾನಿಗಳಿಗೆ ನಾನು ಕೊಡುವ ಉಡುಗೊರೆ. ನನ್ನ ಮೇಲೆ ತೋರಿದ ಪ್ರೀತಿ ಮತ್ತು ವಾತ್ಸಲ್ಯಕ್ಕೆ, ನಾನು ಅವರಿಗಾಗಿ ಮಾಡಲೇಬೇಕು ಎಂದು ಭಾವಿಸುತ್ತೇನೆ.

ಧೋನಿ, ಸಿಎಸ್​ಕೆ ನಾಯಕ

ಇದೇ ವೇಳೆ ಮಾತು ಮುಂದುವರಿಸಿದ ಧೋನಿ, ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಅಭಿಮಾನಿಗಳು ತೋರಿದ ಪ್ರೀತಿಗೆ, ತಾವು ಎಮೋಷನಲ್ ಆಗಿ ಕಣ್ಣೀರಾಕಿದ್ದ ವಿಚಾರವನ್ನ ಬಹಿರಂಗ ಪಡಿಸಿದ್ರು.

ಇದು ನನ್ನ ವೃತ್ತಿಜೀವನದ ಕೊನೆ ಹಂತವಾಗಿದ್ದರಿಂದ ಸಹಜವಾಗೇ  ಭಾವುಕನಾಗಿದ್ದೆ. . ನಮ್ಮ ಮೊದಲ ಪಂದ್ಯ ಇದೇ ಮೈದಾನದಲ್ಲಿ ಆರಂಭವಾಯಿತು. ನಾನು ಕೆಳಗೆ ನಡೆದಾಡಿಕೊಂಡು ಬರುವಾಗ ಅಭಿಮಾನಿಗಳು ನನ್ನ ಹೆಸರು ಕೂಗುತ್ತಿದ್ದರು. ಆಗ ನನ್ನ ಕಣ್ಣಾಲಿ ನೀರು ತುಂಬಿದ್ದವು. ಆಗ ನಾನು ಆನಂದಿಸಬೇಕೆಂದು ಅರಿತುಕೊಂಡೆ. ಆ ಬಳಿಕ ಚೆನ್ನೈನಲ್ಲಿಯೂ ಹಾಗೆಯೇ ಆಯ್ತು.

ಧೋನಿ, ಸಿಎಸ್​ಕೆ ನಾಯಕ

ಕೇಳಿದ್ರಲ್ಲಿ ಧೋನಿ ಮಾತನ್ನ.. ಅಭಿಮಾನಿಗಳು ಒಂದ್ಕಡೆ ಧೋನಿ ಧೋನಿ ಎಂದೂ ಚೀರಾಡುತ್ತಿದ್ರೆ. ಇತ್ತ ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟೋದು ಹೇಗೆಂಬ ಹಾರಾಟ ಧೋನಿಯಲ್ಲಿತ್ತು. ಅಭಿಮಾನಿಗಳ ಪ್ರೀತಿ, ವಾತ್ಸಲ್ಯಕ್ಕೆ ಕರಗಿ ಹೋಗಿದ್ದ ಧೋನಿ, ಮನದೊಳಗೆ ತಮ್ಮ ಭಾವನೆಗಳನ್ನ ತುಂಬಿಟ್ಟಿದ್ದರು. ಅದೇ ಭಾವನೆ ಗುಜರಾತ್ ಎದುರಿನ ಫೈನಲ್​ ಗೆಲುವಿನ ಬಳಿಕ ಹೊರಗಾಕಿದ್ರು.

ಧೋನಿ ಗೆಲುವಿಗೆ ಬೇಜಾರಿಲ್ಲ ಎಂದ ಪಾಂಡ್ಯ..!

ಒಂದ್ಕಡೆ ಅಭಿಮಾನಿಗಳು ಧೋನಿ ಮೇಲಿನ ಅಭಿಮಾನಕ್ಕೆ ಚೆನ್ನೈ ಗೆಲ್ಲಲಿ ಎಂದು ಪ್ರಾರ್ಥಿಸಿದ್ರೆ. ಮತ್ತೊಂದೆಡೆ ಸೋಲಿನ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ, ಧೋನಿ ಗೆಲ್ಲೋದರಿಂದ ಬೇಜಾರಿಲ್ಲ ಎನ್ನುವ ಮೂಲಕ ಅಭಿಮಾನಿಗಳ ಮನ ಗೆದ್ದರು.

ನಾನು ತುಂಬಾ ಸಂತೋಷಪಡುತ್ತೇನೆ. ವಿಧಿ ಹೀಗೆ ಆಗಬೇಕು ಎಂದು ಬರೆದಿದೆ. ನಾನು ಸೋಲಲೇಬೇಕೆಂದು ಇದ್ದರೆ, ನಾನು ಮಾಹಿಗಾಗಿ ಸೋಲುತ್ತೇನೆ. ಒಳ್ಳೆಯ ವ್ಯಕ್ತಿಗಳಿಗೆ ಯಾವತ್ತಿಗೂ ಒಳ್ಳೆಯದೇ ಆಗುತ್ತೆ. ನನಗೆ ತಿಳಿದಿರುವ ಅತ್ಯುತ್ತಮ ವ್ಯಕ್ತಿಗಳಲ್ಲಿ ಮಾಹಿ ಕೂಡಾ ಒಬ್ಬರು. ದೇವರು ನನಗೆ ದಯೆ ತೋರಿಸಿದ್ದಾನೆ. ಆದರೆ ಈ ದಿನ ಮಾತ್ರ ಅವರದ್ದಾಗಿದೆ.

ಹಾರ್ದಿಕ್ ಪಾಂಡ್ಯ, ಗುಜರಾತ್ ಕ್ಯಾಪ್ಟನ್

ನೋಡಿದ್ರಲ್ಲಿ ಧೋನಿ ಮೇಲಿನ ಅಭಿಮಾನವನ್ನ, ಈ ಅಭಿಮಾನ ಸಾಗರವೇ ಧೋನಿ ಕಣ್ಣಂಚಲ್ಲಿ ನೀರು ತುಂಬುವಂತೆ ಮಾಡಿದ್ದು.. ಇಂಥಹ ಬೆಲೆಕಟ್ಟಲಾಗದ ಪ್ರೀತಿಯೇ ನಿರ್ಭಾವುಕ ಧೋನಿಯನ್ನ ಭಾವುಕರಾಗುವಂತೆ ಮಾಡಿದ್ದು ಅನ್ನೋದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ಅದೇನೇ ಆಗಲಿ.. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ನಿರ್ಭಾವುಕರಾಗಿ ಕಾಣೋ ಧೋನಿ, ಫೈನಲ್​ ಗೆಲುವಿನ ಬಳಿಕ ಕಣ್ಣೀರಾಕಿದ್ದು ನಿಜಕ್ಕೂ ಅಭಿಮಾನಿಗಳನ್ನ ಭಾವುಕರಾಗಿಸಿದ್ದು ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಧೋನಿ ಕಣ್ಣೀರು ಹಾಕಲು ಮತ್ಯಾರು ಕಾರಣರಲ್ಲ, ಇವರೇ!! ಅದೊಂದು ಸಂಗತಿಗೆ ಮಾಹಿ ಭಾವುಕರಾದ್ರಾ?

https://newsfirstlive.com/wp-content/uploads/2023/05/Dhoni-9.webp

Load More