ವಿರಾಟ್ ಕೊಹ್ಲಿ ಭೇಟಿಗೆ ಕಾದು ಕುಳಿತ್ತಿದ್ದ ಆ ಮಹಾತಾಯಿ
ಕೊಹ್ಲಿ ಭೇಟಿ ಬಳಿಕ ಕಣ್ಣೀರು, ಆಟಗಾರರೆಲ್ಲ ಫುಲ್ ಶಾಕ್.!
ಹೃದಯಸ್ಪರ್ಶಿ ಮಾತನ್ನಾಡಿದ ವಿಂಡೀಸ್ ಆಟಗಾರನ ತಾಯಿ
ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿಗೆ ಇರೋ ಫ್ಯಾನ್ ಫಾಲೋಯಿಂಗ್ ಯಾರಿಗೂ ಇಲ್ಲ. ಯಾಕಂದರೆ, ಕೊಹ್ಲಿಗೆ ಇರೋದು ಗ್ಲೋಬಲ್ ವೈಸ್ ಫ್ಯಾನ್ಸ್. ಇವರನ್ನ ಫ್ಯಾನ್ಸ್ ಅನ್ನೋದಕ್ಕಿಂತ ಆರಾಧಕರು ಎಂದರೆ ಸರಿ ಅನ್ಸುತ್ತೆ.
ವಿರಾಟ್ ಕೊಹ್ಲಿ ಆನ್ಫೀಲ್ಡ್ನ ರಿಯಲ್ ಫೈಟರ್. ಬ್ಯಾಟಿಂಗ್ ಮೂಲಕವೇ ಎದುರಾಳಿ ಬೌಲರ್ಗಳ ನಿದ್ದೆಗೆಡಿಸುವ ಕೊಹ್ಲಿಗೆ, ಮೂರಂಕಿ ರನ್ ಬಾರಿಸೋದು ಸಾಲೀಸು. ಗೆಲುವಿಗಾಗಿ ಆನ್ಫೀಲ್ಡ್ನಲ್ಲಿ ಹೋರಾಡುವ ಛಲ ನಿಜಕ್ಕೂ ಅಚ್ಚುಮೆಚ್ಚು. ಕ್ಲಾಸ್ ಆ್ಯಂಡ್ ಮಾಸ್ ಬ್ಯಾಟಿಂಗ್ ಮೂಲಕ ಫ್ಯಾನ್ಸ್ ಮನ ಗೆದ್ದಿರುವ ಕೊಹ್ಲಿಗೆ ವಿಶ್ವ ಕ್ರಿಕೆಟ್ ಅಭಿಮಾನಿಗಳಲ್ಲಿ ವಿಶೇಷ ಸ್ಥಾನವಿದೆ.
ವಿಶ್ವಾದಂತ್ಯ ಅಸಂಖ್ಯಾತ ಅಭಿಮಾನಿಗಳನ್ನ ಹೊಂದಿರುವ ಕೊಹ್ಲಿ, ಎಲ್ಲಿಗೆ ಹೋಗ್ಲಿ.. ಎಲ್ಲಿಗೆ ಬರ್ಲಿ.. ಫ್ಯಾನ್ಸ್ ಕಾಟ ತಪ್ಪಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ಸದ್ಯದ ವೆಸ್ಟ್ ಇಂಡೀಸ್ ಟೂರ್.ಆಟೋಗ್ರಾಫ್, ಫೋಟೋಗಾಗಿ ಫ್ಯಾನ್ಸ್ ಹಪ ಹಪಿಸಿದ ದೃಶ್ಯ. ಒಮ್ಮೆ ಕಣ್ತುಂಬಿಕೊಂಡ್ರೆ ಸಾಕೆಂದು ಹಂಬಲಿಸಿದವರು ನಿಜಕ್ಕೂ ಲೆಕ್ಕಕ್ಕಿಲ್ಲ. ದಿಗ್ಗಜ ಗ್ಯಾರಿಫೀಲ್ಡ್ ಸೋಬರ್ಸ್ರಿಂದ ಹಿಡಿದು ಯುವ ಕ್ರಿಕೆಟಿಗರು ಕೊಹ್ಲಿ ಭೇಟಿಗೆ ಹಾತೊರೆಯ್ದು ಘಟನೆಗಳು ನಮ್ಮ ಕಣ್ಮುಂದೆ ಕಾಣ್ತಿವೆ. ಇವೆಲ್ಲಕ್ಕಿಂತ ಮಿಗಿಲಾದ ಭಾವನಾತ್ಮಕ ಕ್ಷಣಕ್ಕೆ ವಿಂಡೀಸ್ ಟೂರ್ ಸಾಕ್ಷಿಯಾಯ್ತು.
ಕೊಹ್ಲಿ ಭೇಟಿಗೆ ಕಾದು ಕುಳಿತಿದ್ದ ಡಿ ಸಿಲ್ವಾ ತಾಯಿ
ವೆಸ್ಟ್ ಇಂಡೀಸ್ಗೆ ಕಾಲಿಟ್ಟ ದಿನದಿಂದಲೂ ಕರಿಬಿಯನ್ ನಾಡದಲ್ಲಿ ವಿರಾಟ್ ಕೊಹ್ಲಿಯದ್ದೇ ಹವಾ. ಇದಕ್ಕೆ ನ್ಯೂ ಎಕ್ಸಾಂಪಲ್ ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಆ್ಯಂಡ್ ಬ್ಯಾಟ್ಸ್ಮನ್ ಜೋಶ್ವಾ ಡಿ ಸಿಲ್ವಾ ತಾಯಿ ಕ್ಯಾರೋಲಿನ್ ಡಾ ಸಿಲ್ವಾ.
ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಆಗಿರೋ ಜೋಶ್ವಾ ಡಿಸಿಲ್ವಾ ತಾಯಿ ಕ್ಯಾರೋಲಿನ್ ಡಾ ಸಿಲ್ವಾ, ವಿರಾಟ್ ಕೊಹ್ಲಿ ಕಟ್ಟಾಭಿಮಾನಿ. ವಿರಾಟ್ ಕೊಹ್ಲಿಯನ್ನ ಕಣ್ತುಂಬಿಕೊಂಡು ಒಮ್ಮೆ ಭೇಟಿಯಾಗಬೇಕು ಅನ್ನೋದು ಬಹುದಿನಗಳ ಕನಸು. ಇದೀಗ ಆ ಬಹುದಿನಗಳ ಕನಸು ನನಸಾಗಿದೆ.
ಕೊಹ್ಲಿಯನ್ನ ಅಪ್ಪಿ, ಮುತ್ತಿಟ್ಟ ಆಟಗಾರನ ತಾಯಿ
ವಿರಾಟ್ ಕೊಹ್ಲಿಯನ್ನ ಭೇಟಿಯಾಗುವ ಕನಸು ನನಸಾಗಿಕೊಂಡ ವಿಂಡೀಸ್ ವಿಕೆಟ್ ಕೀಪರ್ ಡಿ ಸಿಲ್ವಾ ತಾಯಿ, ಕೆಲ ಕ್ಷಣಗಳ ಕಾಲ ಕೊಹ್ಲಿ ಜೊತೆ ಮಾತುಕತೆ ನಡೆಸಿದ್ರು. ಈ ವೇಳೆ ಪ್ರೀತಿಯ ಅಭಿಮಾನದ ಅಪ್ಪುಗೆ ನೀಡಿದ್ರು. ಕೊಹ್ಲಿಯನ್ನ ತಬ್ಬಿ ಮುದ್ದಾಡಿದ ತಾಯಿ, ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಈ ಖುಷಿಯ ಕ್ಷಣ ಕಣ್ಣಂಚಲ್ಲೇ ಹನಿ ಜಿನುಗಿತ್ತು.
ಒಂದು ಕಡೆ ಕಣ್ಣೊರಸಿಕೊಳ್ಳುತ್ತಲೇ ಮಾತನಾಡಿದ ಡಿಸಿಲ್ವಾ ತಾಯಿ, ಕೊಹ್ಲಿ ಕುರಿತು ಹೃದಯ ಸ್ಪರ್ಶಿ ಮಾತುಗಳನ್ನಾಡಿದರು.
ನಾನು, ನನ್ನ ಮಗ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ವಿರಾಟ್ ಕೊಹ್ಲಿ, ವಿಶ್ವ ಶ್ರೇಷ್ಟ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ನನ್ನ ಮಗ ಕೊಹ್ಲಿ ಜೊತೆ ಒಂದೇ ಮೈದಾನದಲ್ಲಿ ಆಡಿದ್ದು ದೊಡ್ಡ ಗೌರವ. ಕೊಹ್ಲಿ ಭೇಟಿ ನಿಜಕ್ಕೂ ಅದ್ಭುತ ಕ್ಷಣ. ಕೊಹ್ಲಿ ಅದ್ಭುತ ವ್ಯಕ್ತಿ, ಪ್ರತಿಭಾವಂತರು.
ಕ್ಯಾರೋಲಿನ್ ಡಾ ಸಿಲ್ವಾ, ಡಿ ಸಿಲ್ವಾ ತಾಯಿ
ಮೊದಲ ದಿನವೇ ಅಮ್ಮನ ಭೇಟಿ ಬಗ್ಗೆ ಹೇಳಿದ್ದ ಡಿ ಸಿಲ್ವಾ.!
2ನೇ ಟೆಸ್ಟ್ ಮೊದಲ ದಿನದಾಟದ ಬೆಳಗ್ಗೆ ಡಿ ಸಿಲ್ವಾಗೆ ಕರೆ ಮಾಡಿದ್ದ ತಾಯಿ, ಮೈದಾನಕ್ಕೆ ಬರುವುದಾಗಿ ಹೇಳಿದ್ರು. ಆದ್ರೆ, ನಿನ್ನ ಆಟ ನೋಡಲು ಅಲ್ಲ. ವಿರಾಟ್ ಕೊಹ್ಲಿಗಾಗಿ ಎಂಬ ವಿಚಾರ ಮಗನ ಬಳಿ ತಿಳಿಸಿದ್ರು. ಈ ವಿಚಾರವನ್ನ ಮೊದಲ ದಿನದಾಟವೇ ಡಿ ಸಿಲ್ವಾ ಹಂಚಿಕೊಂಡಿದ್ರು.
ಇದರಂತೆ 2ನೇ ದಿನದಾಟ ಸ್ಟೇಡಿಯಂಗೆ ಎಂಟ್ರಿಕೊಟ್ಟಿದ್ದ ಡಿ ಸಿಲ್ವಾ ತಾಯಿ ಕೊಹ್ಲಿ ಆಟವನ್ನ ಕಣ್ತುಂಬಿಕೊಂಡರು. ಅಷ್ಟೇ ಅಲ್ಲ, ವಿರಾಟ್ ಕೊಹ್ಲಿಯನ್ನ ಭೇಟಿಯಾಗುವ ಕನಸನ್ನೂ ನನಸಾಗಿಸಿಕೊಂಡ್ರು. ಅದೇನೇ ಆಗಲಿ. ಆನ್ಫೀಲ್ಡ್ನಲ್ಲಿ ವಿರಾಟ್ ಕೊಹ್ಲಿ ಆಕ್ರಮಣಕಾರಿಯಾಗೇ ಕಂಡರೂ, ಹೊರಗೆ ಎಲ್ಲರೊಂದಿಗೆ ಬೆರೆಯುವ ಗುಣ ನಿಜಕ್ಕೂ ಮೆಚ್ಚುವಂಥದ್ದು ಅನ್ನೋದರಲ್ಲಿ ಎರಡು ಮಾತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
This our KING 👑 #ViratKohli𓃵
Joshua Da Silva’s mother’s emotional moment 🥰YT – VIMAL KUMARhttps://t.co/Ahu841v4P0 pic.twitter.com/NkmM634Ghb
— 𝕾𝖆𝖛𝖆𝖌𝖊 ⟿ ☠️ 👑 (@xpher_nxvxii) July 22, 2023