newsfirstkannada.com

ತಮಿಳು ಸ್ಟಾರ್​​ ನಟ ವಿಜಯ್​​ ಮಗಳ ಸಾವಿಗೆ ಕಾರಣವೇನು..? ಮೀರಾಗೆ ಈ ಸಮಸ್ಯೆ ಇತ್ತಾ..?

Share :

20-09-2023

  ನಟ ವಿಜಯ್ ಆಂಟೋನಿ ತಮಿಳು ಇಂಡಸ್ಟ್ರಿಯ ಸ್ಟಾರ್​ ನಟರಲ್ಲಿ ಒಬ್ಬರು

  16 ವರ್ಷದ ಮಗಳು ಮೀರಾ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು?

  ಸೋತು ಗೆದ್ದಿರುವ ನಟ ವಿಜಯ್ ಆಂಟೋನಿ ಕುಟುಂಬಕ್ಕೆ ಆಘಾತದ ಮೇಲೆ ಆಘಾತ

ವಿಜಯ್ ಆಂಟೋನಿ ತಮಿಳು ಇಂಡಸ್ಟ್ರಿಯ ಸ್ಟಾರ್​ ನಟ. ತಮಿಳು ಮಾತ್ರವಲ್ಲ ತೆಲುಗು, ಮಲಯಾಳಂ ಭಾಷೆಯಲ್ಲೂ ವಿಜಯ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಸೂಪರ್​ಸ್ಟಾರ್​ ಎನ್ನುವ ಸ್ಟಾರ್​ ಡಂ, ಮುದ್ದಾದ ಫ್ಯಾಮಿಲಿ, ಇಬ್ಬರು ಮಕ್ಕಳು ಎಲ್ಲವೂ ಚೆನ್ನಾಗಿತ್ತು. ಆದ್ರೀಗ ವಿಜಯ್ ಅವರ 16 ವರ್ಷದ ಮಗಳು ಮೀರಾ ಇದ್ದಕ್ಕಿದ್ದ ಹಾಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾರಣ ನಿಗೂಢ ಅನಿಸಿದರೂ ಹಲವು ಅನುಮಾನಗಳು ಕಾಡೋಕೆ ಶುರುವಾಗಿದೆ.

ತಮಿಳು ನಟ ವಿಜಯ್ ಆಂಟೋನಿ ಆತ್ಮಹತ್ಯೆಯನ್ನ ಬಹಳ ಗಟ್ಟಿಯಾಗಿ ವಿರೋಧಿಸಿದವರು. ಜೀವನದಲ್ಲಿ ಏನೇ ಕಷ್ಟ ಬಂದರೂ, ಎಷ್ಟೇ ದೊಡ್ಡ ಸಮಸ್ಯೆ ಎದುರಾದರೂ ಆತ್ಮಹತ್ಯೆ​ ಅದಕ್ಕೆ ಪರಿಹಾರ ಅಲ್ಲ ಅನ್ನೋದನ್ನ ಎಚ್ಚರಿಸ್ತಾ ಬಂದವರು. ಆದರೆ ಇವತ್ತು ಅವರ ಮಗಳೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅನ್ನೋ ಸುದ್ದಿ ನಿಜಕ್ಕೂ ದೊಡ್ಡ ಆಘಾತ ತಂದಿದೆ. ವಿಜಯ್ ಆಂಟೋನಿ ಅವರ 16 ವರ್ಷದ ಮಗಳು ಮೀರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಸೆಪ್ಟೆಂಬರ್ 19ರ ಮುಂಜಾನೆ 3 ಗಂಟೆಗೆ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಇಡೀ ಇಂಡಸ್ಟ್ರಿಗೆ ಶಾಕ್ ಕೊಟ್ಟಿದೆ.

16 ವರ್ಷದ ಮೀರಾ ಚೆನ್ನೈನ ಪ್ರತಿಷ್ಠಿತ ಶಾಲೆಯಲ್ಲಿ ಪ್ಲಸ್​ ಟು ಅಂದ್ರೆ ಸೆಕೆಂಡ್​ ಪಿಯುಸಿ ಓದುತ್ತಿದ್ದರು. ಎಜುಕೇಷನ್​ ಚೆನ್ನಾಗಿಯೇ ಇತ್ತು. ಜೊತೆಗೆ ಸ್ಕೌಟ್ಸ್​ ಅಂಡ್​ ಗೈಡ್ಸ್​ನಲ್ಲಿ ಭಾಗಿಯಾಗಿದ್ದ ಫೋಟೋವನ್ನ ಖುದ್ದು ಮೀರಾ ಅವರ ತಾಯಿ ಫಾತಿಮಾ ಬಹಳ ಹೆಮ್ಮೆಯಿಂದ ಪೋಸ್ಟ್​ ಮಾಡಿದ್ದರು. ಹೇಳಿ ಕೇಳಿ ಸೂಪರ್​ ಸ್ಟಾರ್​ ಮಗಳು, ಅನುಕೂಲಗಳ ವಿಷ್ಯದಲ್ಲಿ ಯಾವುದೇ ಕೊರತೆಗಳು ಇರಲಿಲ್ಲ. ಆದರೂ ವಿಜಯ್ ಪುತ್ತಿ ದಿಢೀರ್ ಅಂತ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸಿನಿಮಾ ಕೆಲಸದಲ್ಲಿ ಬ್ಯುಸಿಯಿದ್ದ ವಿಜಯ್ ಆಂಟೋನಿ ಕಳೆದ ರಾತ್ರಿ ಮನೆಯಲ್ಲಿ ಇರಲಿಲ್ಲ. ಪ್ರತಿ ದಿನದಂತೆ ರಾತ್ರಿಯೂ ಊಟ ಮಾಡಿದ ಮೀರಾ ಮಲುಗುವುದಕ್ಕೆ ರೂಮ್​ಗೆ ಹೋಗಿದ್ದಾಳೆ. ಆದರೆ ಬೆಳಗ್ಗೆ ಎದ್ದು ನೋಡಿದಾಗ ಮೀರಾ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದಳಂತೆ. ಪ್ರಾಥಮಿಕ ವರದಿ ಪ್ರಕಾರ ಮುಂಜಾನೆ 3 ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಈ ವಿಷಯ ತಿಳಿದ ಕೂಡಲೇ ಕುಟುಂಬದವರು ಮೀರಾಳನ್ನ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟೊತ್ತಿಗೆ ಮೀರಾ ಮೃತಪಟ್ಟಿದ್ದರು. ಮೀರಾಗೆ ಏನು ಸಮಸ್ಯೆ ಆಗಿತ್ತು? ಆ ಆತ್ಮಹತ್ಯೆ ಹಿಂದಿನ ಕಾರಣ ಏನು ಅನ್ನೋದ್ರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕೆಲವು ವರದಿಗಳ ಪ್ರಕಾರ ಮೀರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ. ಈ ಹಿನ್ನೆಲೆ ಚಿಕಿತ್ಸೆನೂ ಪಡೆದುಕೊಳ್ಳುತ್ತಿದ್ದರು. ಮಗಳು ಸಹ ಫ್ಯಾಮಿಲಿ ಜೊತೆ ತುಂಬಾ ಚೆನ್ನಾಗಿಯೇ ಇದ್ದ ಕಾರಣ ಫ್ಯಾಮಿಲಿ ಅವ್ರು ಮೀರಾ ಬಗ್ಗೆ ಅಷ್ಟಾಗಿ ಸಿರೀಯಸ್ ಆಗಿ​ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಬಟ್, 16 ವರ್ಷದ ಮೀರಾಗೆ ಯಾವ ವಿಷ್ಯದಲ್ಲಿ ಖಿನ್ನತೆ ಇತ್ತು ಅನ್ನೋದಕ್ಕೆ ಉತ್ತರ ಇಲ್ಲ.

ತಂದೆಯೂ ಸುಸೈಡ್​.. ಈಗ ಮಗಳು ಕೂಡ ಸುಸೈಡ್!

ವಿಜಯ್ ಆಂಟೋನಿ ಏಳು ವರ್ಷವಿದ್ದಾಗಲೇ ಅವರ ತಂದೆ ಸುಸೈಡ್​ ಮಾಡ್ಕೊಂಡು ಸಾವನ್ನಪ್ಪಿದ್ದರಂತೆ. ಸಣ್ಣ ವಯಸ್ಸಿನಲ್ಲೇ ತಂದೆಯನ್ನ ಕಳೆದುಕೊಂಡ ವಿಜಯ್​ ಅಮ್ಮನ ಆರೈಕೆಯಲ್ಲಿ ಬೆಳೆದರು. ಸಾಕಷ್ಟು ಕಷ್ಟ-ನಷ್ಟ ಎದುರಿಸಿದ ವಿಜಯ್ ಫಾತಿಮಾ ಜೊತೆ ವಿವಾಹವಾಗಿದ್ದಾರೆ. ವಿಜಯ್ ಮತ್ತು ಫಾತಿಮಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಮೀರಾ ದೊಡ್ಡೋಳ. ಲಾರಾ ಸಣ್ಣ ಮಗಳು. ಆದ್ರೀಗ ಹಿರಿ ಮಗಳು ಮೀರಾ ಸುಸೈಡ್​ ಮಾಡಿಕೊಂಡಿದ್ದಾಳೆ. ತಂದೆಯ ಆತ್ಮಹತ್ಯೆಯಿಂದಲೇ ಸಾಕಷ್ಟು ನೊಂದಿದ್ದ ವಿಜಯ್​ ಆಗಿಂದಲೂ ಆತ್ಮಹತ್ಯೆಯನ್ನ ಖಂಡಿಸ್ತಾ ಬಂದಿದ್ದರು. ಅವಕಾಶ ಸಿಕ್ಕಾಗೆಲ್ಲಾ ಸುಸೈಡ್​ ಬಗ್ಗೆ ಎಚ್ಚರಿಸ್ತಿದ್ದರು. ಎಲ್ಲ ಕಷ್ಟ-ನಷ್ಟಗಳಿಗೆ ಸಾವೊಂದು ಪರಿಹಾರವಲ್ಲ, ಅದರಲ್ಲೂ ಬಲವಂತದ ಸಾವು ಒಪ್ಪೋಕೆ ಆಗಲ್ಲ. ಯಾವುದೇ ಕಾರಣ ಇಂಥ ಪ್ರಯತ್ನ ಬೇಡ ಅಂತ ಹೇಳ್ತಾನೇ ಇದ್ದರು. ಆದರೆ ತನ್ನದೇ ಮನೆಯಲ್ಲಿ, ತನ್ನದೇ ಮಗಳು ಹೀಗೆ ತನ್ನ ಬದುಕನ್ನ ಅಂತ್ಯ ಮಾಡಿಕೊಳ್ಳುತ್ತಾರೆ.

ಅಂದ್ರೆ ಇದು ವಿಜಯ್​ ಪಾಲಿಗೆ ಎಷ್ಟು ಘೋರ ಅಲ್ಲವೇ?
ಸೋತು ಗೆದ್ದಿರುವ ವಿಜಯ್.. ಆಘಾತದ ಮೇಲೆ ಆಘಾತ!

ತಮಿಳು ಇಂಡಸ್ಟ್ರಿಯಲ್ಲಿ ವಿಜಯ್ ಆಂಟೋನಿ ಸೋತು ಗೆದ್ದಿರುವ ನಟ. 2005ರಲ್ಲಿ ಮ್ಯೂಸಿಕ್ ಡೈರೆಕ್ಟರ್​ ಆಗಿ ಜರ್ನಿ ಆರಂಭಿಸಿದ ವಿಜಯ್ ಜೊತೆ ಜೊತೆಗೆ ಕೆಲವು ಹಾಡುಗಳನ್ನ ತಾವೇ ಹಾಡಿದ್ದರು. 2012ರಲ್ಲಿ ‘ನಾನ್’ ಸಿನಿಮಾದೊಂದಿಗೆ ಆ್ಯಕ್ಟಿಂಗ್​ ಆರಂಭಿಸಿದ ವಿಜಯ್​ಗೆ 2015ರಲ್ಲಿ ತೆರೆಕಂಡ ‘ಪಿಚ್ಚಕಾರನ್’ ಸಿನಿಮಾದಿಂದ ದೊಡ್ಡ ಬ್ರೇಕ್ ಸಿಕ್ತು. ತೆಲುಗಿನಲ್ಲಿ ಈ ಸಿನಿಮಾ ‘ಬಿಚ್ಚುಗಾಡು’ ಅನ್ನೋ ಹೆಸರಿನಲ್ಲಿ ಡಬ್ ಆಗಿ ಅಲ್ಲಿಯೂ ಹಿಟ್ ಆಯ್ತು. ಇದೇ ಚಿತ್ರವನ್ನ ಕನ್ನಡದಲ್ಲಿ ಚಿರಂಜೀವಿ ಸರ್ಜಾ ‘ಅಮ್ಮ ಐ ಲವ್ ಯೂ’ ಅಂತ ರಿಮೇಕ್ ಮಾಡಿ ಸಕ್ಸಸ್ ಕಂಡಿದ್ದರು. ಪಿಚ್ಚಕಾರನ್ ನಂತರ ವಿಜಯ್​ ಆಂಟೋನಿ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳನ್ನ ಮಾಡಿದ್ರು. ಸೈತಾನ್, ಯಮನ್, ಅಣ್ಣಾದೊರೈ, ಕಾಳಿ, ತಿಮಿರು ಪುಡಿಚವನ್, ಕುಡಿಯಲ್ ಒರುವನ್, ಪಿಚ್ಚಕಾರನ್ 2 ಚಿತ್ರಗಳಲ್ಲಿ ನಟಿಸಿ ತನ್ನದೇ ಬ್ರ್ಯಾಂಡ್​ ಸೃಷ್ಟಿಸಿಕೊಂಡರು. ವಿಜಯ್​ ಆಂಟೋನಿಗೆ ಈಗ ಸಪರೇಟ್​ ಫ್ಯಾನ್​ಬೇಸ್​ ಇದೆ.

ವಿಜಯ್ ಸಿನಿಮಾಗಳು ಅಂದ್ರೆ ಜನ ವೆಯ್ಟ್​ ಮಾಡಿ ನೋಡ್ತಾರೆ. ಹೀಗೆ ಒಳ್ಳೊಳ್ಳೆ ಸಿನಿಮಾಗಳನ್ನ ಕೊಡ್ತಾ ಪ್ರೇಕ್ಷಕರನ್ನ ರಂಜಿಸ್ತಾ ಬರ್ತಿದ್ದ ಆಂಟೋನಿಗೆ ಈ ವರ್ಷದ ಆರಂಭದಲ್ಲಿ ಆಕ್ಸಿಡೆಂಟ್​ ಆಗಿತ್ತು. ಮಲೇಷಿಯಾದಲ್ಲಿ ಶೂಟಿಂಗ್ ಮಾಡುವಾಗ ಸೆಟ್​ನಲ್ಲಿ ಅವಘಡ ಸಂಭವಿಸಿ ಮೂಗು ಮತ್ತು ದವಡೆಗೆ ಭಾರಿ ಪೆಟ್ಟು ಬಿದ್ದಿತ್ತು. ವಿಜಯ್ ಮೊದಲಿನಂತೆ ಆಗೋದೇ ಅನುಮಾನ ಎನ್ನಲಾಗಿತ್ತು. ಶಸ್ತ್ರ ಚಿಕಿತ್ಸೆ ಬಳಿಕ ವಿಜಯ್ ಮತ್ತೆ ಆರೋಗ್ಯವಾಗಿ ಎದ್ದು ಬಂದಿದ್ದು ನಿಜಕ್ಕೂ ಸಾಹಸ ಕಥೆ. ಹೀಗೆ ಸಿನಿಮಾ ಹಾಗೂ ವೈಯಕ್ತಿಕ ಜೀವನದಲ್ಲಿ ಬಿದ್ದು ಎದ್ದು ಬಂದಿರುವ ವಿಜಯ್​ಗೆ ಈಗ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಎದೆಮೇಲೆ ಹೊತ್ತು ಎತ್ತಿ ಆಡಿ ಬೆಳೆಸಿದ ಮಗಳನ್ನ ಕಳೆದುಕೊಂಡ ನೋವು ವಿಜಯ್​ಗೆ ಇನ್ನಷ್ಟು ಕಾಡಲಿದೆ.

ವಿಜಯ್ ಆಂಟೋನಿ ಮಗಳ ಸಾವಿಗೆ ಸಾಕಷ್ಟು ಸಿನಿಮಾ ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಅವರು ವಿಜಯ್​ ಮನೆಗೆ ಭೇಟಿ ಸ್ಥಿತಿಗತಿ ವಿಚಾರಿಸಿದ್ದಾರೆ. ಸದ್ಯ ಮೀರಾ ಸುಸೈಡ್ ಸಂಬಂಧ ತೇನಂಪೇಟೆ ಪೊಲೀಸರು​ ಕೇಸ್​ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮೀರಾ ಇನ್ನಿಲ್ಲ. ಬೆಳೆದ ಮಗಳನ್ನ ಕಳೆದುಕೊಂಡ ವಿಜಯ್ ಆಂಟೋನಿಗೆ ಆ ದೇವರು ಈ ದುಃಖ ಭರಿಸುವ ಧೈರ್ಯ ಕೊಡ್ಲಿ.. ಹಾಗೆ ಮಗಳ ಈ ಸಾವಿಗೆ ಕಾರಣ ಏನೆಂಬುದಕ್ಕೂ ಉತ್ತರ ಕಂಡುಕೊಳ್ಳಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಮಿಳು ಸ್ಟಾರ್​​ ನಟ ವಿಜಯ್​​ ಮಗಳ ಸಾವಿಗೆ ಕಾರಣವೇನು..? ಮೀರಾಗೆ ಈ ಸಮಸ್ಯೆ ಇತ್ತಾ..?

https://newsfirstlive.com/wp-content/uploads/2023/09/death-74.jpg

Load More