ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾದ ಖುಷಿ ಸಿನಿಮಾ
ನಾಲ್ಕೇ ದಿನಕ್ಕೆ 75 ಕೋಟಿ ಬಾಚಿಕೊಂಡ ವಿಜಯ್ ಚಿತ್ರ!
ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟನಿಂದ ಮಹತ್ವದ ನಿರ್ಧಾರ
ರೌಡಿ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ಖ್ಯಾತ ಸೌತ್ ನಟಿ ಸಮಂತಾ ನಟನೆಯ ‘ಖುಷಿ’ ಸಿನಿಮಾ ಸೆಪ್ಟೆಂಬರ್ 1ರಂದು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕೊನೆಗೂ ಚಿತ್ರ ಕೇವಲ 4ನೇ ದಿನಕ್ಕೆ 75 ಕೋಟಿ ರೂಪಾಯಿ ಬಾಚಿಕೊಂಡಿದೆ. ಹೀಗಾಗಿ ಚಿತ್ರತಂಡವು ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ.
ಸತತ ಸೋಲಿನಿಂದ ಕಂಗೆಟ್ಟಿದ್ದ ವಿಜಯ್ ದೇವರಕೊಂಡ ಈ ಸಿನಿಮಾದ ಮೂಲಕ ಮತ್ತೆ ಗೆಲುವಿನ ಹಾದಿಯತ್ತ ಮರಳಿದ್ದಾರೆ. ಖುಷಿ ಚಿತ್ರವನ್ನು ಶಿವ ನಿರ್ದೇಶನ ಮಾಡಿದ್ದಾರೆ. ತೆಲುಗು, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಖುಷಿ ಸಿನಿಮಾ ಬಿಡುಗಡೆಯಾಗಿದೆ. ಇದೇ ಖುಷಿಯಲ್ಲಿರೋ ನಟ ವಿಜಯ್ ದೇವರಕೊಂಡ ಸಂತಸದ ವಿಚಾರ ಹಂಚಿಕೊಂಡಿದ್ದಾರೆ.
ವಿಶಾಖಪಟ್ಟಣಂನಲ್ಲಿ ನಡೆದ ಸಿನಿಮಾದ ಸಕ್ಸಸ್ ಮೀಟ್ನಲ್ಲಿ ಮಾತಾಡಿದ ಅವರು, ಖುಷಿ ಸಿನಿಮಾ ಯಶಸ್ಸಿನಿಂದ ನಾನು ತುಂಬಾ ಸಂತೋಷವಾಗಿದ್ದೇನೆ. ನಾನು ಏನನ್ನಾದರೂ ಯೋಚಿಸಿದರೆ ಅದನ್ನು ಮಾಡಿ ಮುಗಿಸುವವರೆಗೂ ನನಗೆ ನಿದ್ದೆ ಬರುವುದಿಲ್ಲ. ಆದರೆ ಇದು ಸರಿಯೋ ತಪ್ಪೋ ಎಂದು ತಿಳಿದಿಲ್ಲ. ಈ ಖುಷಿಯನ್ನು ಹೆಚ್ಚಿಸಲು ನಾನು ನನ್ನ ಸಂಭಾವನೆಯಲ್ಲಿ ಒಂದು ಕೋಟಿ ರೂ. ಅಗತ್ಯವಿರುವ ಕುಟುಂಬಗಳಿಗೆ ನೀಡುತ್ತೇನೆ. ಮುಂದಿನ ಹತ್ತು ದಿನಗಳಲ್ಲಿ ಈ ಕೆಲಸ ಪೂರ್ಣಗೊಳಿಸುತ್ತೇನೆ. ನನ್ನ ಯಶಸ್ಸು, ನನ್ನ ಸಂತೋಷ, ನನ್ನ ಸಂಬಳವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.
ಆ ಕುಟುಂಬಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬುದರ ಕುರಿತು ವಿಜಯ್ ಮಾತನಾಡಿದ್ದಾರೆ. ಸ್ಪ್ರೆಡ್ಡಿಂಗ್ ಖುಷಿ ಅಥವಾ ದೇವರ ಫ್ಯಾಮಿಲಿ ಎಂಬ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ಮೂಲಕ ಫಾರ್ಮ್ ಹಂಚಿಕೊಳ್ಳುತ್ತೇನೆ. ಇದರ ಮೂಲಕ ಅಗತ್ಯವಿರುವವರು ನಿಮ್ಮ ಹೆಸರನ್ನು ನಮೂದಿಸಬಹುದು. ಮನೆ ಬಾಡಿಗೆ, ಮಕ್ಕಳ ಶಾಲಾ ಫೀಸ್ ಹೀಗೆ ಯಾವುದೇ ವಿಷಯಕ್ಕೆ ಹಣ ಬಳಕೆಯಾದರೂ ನನಗೆ ಸಂತೋಷವಾಗುತ್ತದೆ. ಮುಂದಿನ 10 ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎನ್ನುವ ಉದ್ದೇಶ ಇದೆ. ಆಗ ಈ ಚಿತ್ರದ ಯಶಸ್ಸನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸುತ್ತೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ