/newsfirstlive-kannada/media/post_attachments/wp-content/uploads/2024/11/Kadalekayi-Parishe-3.jpg)
ಸದಾ ವದಂತಿಗಳಲ್ಲಿ ಇರುವ ಜೋಡಿ ಅಂದ್ರೆ ಅದು ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ. ಮೊದಲ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದಂದಿನಿಂದಲೂ ಈ ಜೋಡಿ ಒಂದಿಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದೆ. ಈಗ ರೆಸ್ಟೊರೆಂಟ್ ಒಂದರಲ್ಲಿ ರಶ್ಮಿಕಾ ಹಾಗೂ ವಿಜಯತ್ ಒಟ್ಟಾಗಿ ಕಾಣಿಸಿಕೊಂಡು ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ.
ಮುಂಬೈನ ರೆಸ್ಟೊರೆಂಟ್ ಒಂದರಲ್ಲಿ ಎದುರು ಎದುರು ಕೂತು ಊಟವನ್ನು ಮಾಡಿರುವ ಈ ಜೋಡಿ ಒಂದೇ ಬಣ್ಣದ ಬಟ್ಟೆಯನ್ನು ಇಬ್ಬರು ತೊಟ್ಟಿದ್ದು ಮತ್ತೊಂದು ವಿಶೇಷವಾಗಿತ್ತು. ಇದು ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲವನ್ನು ಸೃಷ್ಟಿಸುವಂತೆ ಮಾಡಿದೆ. ಮತ್ತೆ ಈ ಇಬ್ಬರ ಜೋಡಿಯ ಬಗ್ಗೆ ಟಾಕ್​ಗಳು ಶುರುವಾಗಿವೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಆಗಿಂದಾಗೆ ಹರಿದಾಡುತ್ತಲೇ ಇದೆ. ಇಬ್ಬರೂ ಕೂಡ ನೇರವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಆಗಿಂದಾಗೆ ಒಟ್ಟಿಗೆ ಕಾಣಿಸಿಕೊಳ್ಳೊ ಮೂಲಕ ಇಬ್ಬರ ಮಧ್ಯೆ ಪ್ರೀತಿ ಇರೋದು ಸತ್ಯ ಅಂತಾ ದೃಢಪಡಿಸ್ತಿದ್ದಾರೆ. ಈಗ ರಶ್ಮಿಕಾ - ವಿಜಯ್ ಔಟಿಂಗ್ ಹೋಗಿದ್ದು, ಮುಂಬೈನ ರೆಸ್ಟೊರೆಂಟ್ ಒಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು. ಮತ್ತೆ ಈ ಜೋಡಿ ನಡುವೆ ಕುಚ್​ ಕುಚ್​ ಇದೆ ಎಂಬ ಗುಸುಗುಸು ಶುರುವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us