ಕಾಫಿ ಡೇನಲ್ಲಿ ಮೊದಲ ನೋಟ, ಮಾತಾಡಿಸಲು 3 ವರ್ಷ
ಹೊರನಾಡು ಅನ್ನಪೂರ್ಣೇಶ್ವರಿಯಲ್ಲಿ ವಿಜಯ್ ಕೇಳಿದ್ದೇನು?
ಆ ದೇವಿಯ ಕೃಪೆಯಿಂದ ನಟನಿಗೆ ಸಿಕ್ಕಿದ್ದರು ಸ್ಪಂದನಾ!
ಕೆಲವೊಮ್ಮೆ ನಡೆಯೋ ಘಟನೆಗಳನ್ನ ನೋಡುದ್ರೆ ವಿಧಿಗೆ ಕರುಣೆ ಅನ್ನೋದೇ ಇಲ್ವೇನೋ ಅನ್ಸುತ್ತೆ. ಬಾಳಲ್ಲಿ ಎಲ್ಲವೂ ಚೆನ್ನಾಗಿದೆ ಅಂತಾ ಇರೋವಾಗ್ಲೇ, ಬರಸಿಡಿಲು ಬಡಿಯುವಂತೆ ಮಾಡಿಬಿಡ್ತಾನೆ. ಕ್ರೌರ್ಯವನ್ನ ಪ್ರದರ್ಶಿಸಿಬಿಡ್ತಾನೆ. ಕನ್ನಡದ ಚಿನ್ನಾರಿಮುತ್ತ ಅಂತಲೇ ಖ್ಯಾತಿ ಪಡೆದಿದ್ದ ನಟ ವಿಜಯ್ ರಾಘವೇಂದ್ರರ ಪ್ರೀತಿಯ ಪತ್ನಿ ವಿಧಿವಶರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ವಿಜಯ ರಾಘವೇಂದ್ರ ಹಾಗೂ ಸ್ಪಂದನಾರ ಲವ್ ಸ್ಟೋರಿ ನಿಜಕ್ಕೂ ಯಾವ ಸಿನಿಮಾಗೂ ಕಮ್ಮಿ ಇಲ್ಲ.
ವಿಜಯ ರಾಘವೇಂದ್ರರಿಂದ ದೂರಾದ ಪ್ರೀತಿಯ ಪತ್ನಿ!
ಇತ್ತೀಚಿನ ವರ್ಷಗಳಲ್ಲಿ ಸ್ಯಾಂಡಲ್‌ವುಡ್ ಒಂದಾದ ಮೇಲೊಂದರಂತೆ ಆಘಾತಗಳು ಬರಸಿಡಿಲಿನಂತ ಬಂದು ಅಪ್ಪಳಿಸುತ್ತಿವೆ. ಅದೇ ರೀತಿ ಈಗ ಮತ್ತೊಂದು ಶಾಕಿಂಗ್ ಘಟನೆ ನಡೆದಿದ್ದು, ಹಿರಿತೆರೆ, ಕಿರುತೆರೆ ಎರಡರಲ್ಲೂ ಹೆಸರು ಮಾಡಿದ್ದ ವಿಜಯ ರಾಘವೇಂದ್ರರವರ ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಿಜಯ್ ರಾಘವೇಂದ್ರ ಮಡದಿ ಸ್ಪಂದನಾ ಕುಟುಂಬಸ್ಥರ ಜೊತೆ ಬ್ಯಾಂಕಾಕ್‌ಗೆ ಹೋಗಿದ್ರು. ಭಾನುವಾರ ಸಂಜೆ ಅಲ್ಲೇ ಶಾಪಿಂಗ್ ಮುಗಿಸ್ಕೊಂಡು ತಾವು ಉಳಿದ್ಕೊಂಡಿರೋ ಹೋಡೆಲ್ ಕಡೆ ಸಾಗ್ತಿದ್ರಂತೆ. ದುರಾದೃಷ್ಟವಶಾತ್ ಆಗಲೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಜೊತೆಗಿದ್ದವ್ರು ಸಮೀಪದ ಆಸ್ಪತ್ರೆಗೆ ಸೇರಿಸುವ ಕೆಲ್ಸ ಮಾಡಿದ್ದಾರೆ. ಆದ್ರೆ, ಅಷ್ಟರೊಳಗೆ ಸ್ಪಂದನಾರನ್ನ ವಿಧಿ ತನ್ನ ಬಲೆಗೆ ಎಳೆದುಕೊಂಡುಬಿಟ್ಟಿತ್ತು. ವಿಷ್ಯ ತಿಳೀತ್ತಿದ್ದಂತೆ ಕುಟುಂಬಸ್ಥರು ಬ್ಯಾಂಕಾಕ್‌ಗೆ ಪ್ರಯಾಣ ಬೆಳೆಸಿದ್ದಾರೆ.
ಸ್ಪಂದನಾ ನಿವೃತ್ತ ಎಸಿಪಿ, ಖಡಕ್ ಪೊಲೀಸ್ ಆಫೀಸರ್ ಎನಿಸಿಕೊಂಡಿದ್ದ ಬಿ.ಕೆ.ಶಿವರಾಂ ಅವ್ರ ಪುತ್ರಿಯಾಗಿದ್ರು. ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವ್ರಿಗೆ ಅಣ್ಣನ ಮಗಳಾಗಿದ್ದಾರೆ. ಇನ್ನು ಸ್ಪಂದನಾ ಮತ್ತು ನಟ ವಿಜಯ್ ರಾಘವೇಂದ್ರ 2007ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದು, ಇಬ್ಬರ ಬಾಳಿಗೆ ಬೆಳಕಾಗಿ ಶೌರ್ಯ ಎಂಬ ಒಬ್ಬ ಪುತ್ರ ಕೂಡ ಇದ್ದ. ಗಂಡ ದೊಡ್ಡ ನಟನಾಗಿದ್ರೂ ಸ್ಪಂದನಾಗೆ ಸಿನಿಮಾ ಬಗ್ಗೆ ಅಷ್ಟೊಂದು ಕ್ರೇಜ್ ಏನೂ ಇರ್ಲಿಲ್ಲ. ಆದ್ರೂ, ಆಫರ್ ಬಂದ ಕಾರಣ 2016ರಲ್ಲಿ ತೆರೆಕಂಡಿದ್ದ ರವಿಚಂದ್ರನ್ ಅವರ ಅಪೂರ್ವ ಸಿನಿಮಾದಲ್ಲಿ ಗೆಸ್ಟ್ ಅಪಿಯರೆನ್ಸ್ ಕೊಟ್ಟಿದ್ರು. ಜೊತೆ ಜೊತೆಗೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ರು. ಸ್ಯಾಂಡಲ್‌ವುಡ್‌ನಲ್ಲಿ ವಿಜಯ್ ಮತ್ತು ಸ್ಪಂದನಾ ಜೋಡಿ ಆದರ್ಶ ದಂಪತಿಗಳು. ಸಖತ್ ಸಿಂಪಲ್ ಌಂಡ್ ಹಂಬಲ್ ಜೋಡಿ ಅಂತಲೇ ಕುರ್ತಿಸಿಕೊಂಡಿದ್ರು. ಇಂಥವರ ಬಾಳಲ್ಲಿ ವಿಧಿ ಅಕ್ಷರಶಃ ಕ್ರೌರ್ಯಮೆರೆದಿದೆ ಅಂದ್ರೆ ತಪ್ಪಾಗೋದಿಲ್ಲ.
ಅಂದು ಅನ್ನಪೂರ್ಣೇಶ್ವರಿ ಬಳಿ ವಿಜಯ್ ಬೇಡಿದ್ದೇನು?
ಮದುವೆಗೂ ಮುನ್ನ ಯಾರಿಗೆ ಆದ್ರೂ ಕನಸುಗಳು ಇರುತ್ತವೆ. ತಮ್ಮನ್ನು ಕೈ ಹಿಡಿದು ಬರೋ ಹುಡುಗ ಅಥವಾ ಹುಡುಗಿ, ಹೃದಯದ ಒಡೆಯರಾಗೋ ಸಂಗಾತಿ ಹೀಗೆ ಇರ್ಬೇಕು, ಹಾಗೇ ಇರ್ಬೇಕು ಅನ್ನೋ ಒಂದಷ್ಟು ಕನಸಿನ ಮೂಟೆಯನ್ನು ಹೊತ್ತಿರ್ತಾವೆ. ಹಾಗೇ ವಿಜಯ್ ರಾಘವೇಂದ್ರ ಅವ್ರಲ್ಲೂ ಅದೇ ರೀತಿಯ ಕನಸುಗಳು ಇದ್ವು. ಹೊರನಾಡು ಅನ್ನಪೂರ್ಣೇಶ್ವರಿಯ ಅಪ್ಪಟ ಭಕ್ತರಾಗಿರೋ ವಿಜಯ್ ಒಮ್ಮೆ ಆ ತಾಯಿ ಬಳಿ ಬೇಡಿಕೊಂಡಿದ್ದರಂತೆ. ವಿಶೇಷ ಅಂದ್ರೆ ತಾಯಿಯ ಆಶೀರ್ವಾದದಿಂದ ಆ ವಿಜಯ್‌ಗೆ ತಮ್ಮ ಮನಸ್ಸಿನಲ್ಲಿರೋ ಹುಡುಗಿಯೇ ಮನೆಯೊಡತಿಯಾಗಿ ಬಂದಿದ್ದಳು. ಅದನ್ನು ವಿಜಯ್ ಕನ್ನಡದಲ್ಲಿ ನಡೆದಿದ್ದ ವೀಕ್ ಅಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದಿದ್ದಾಗ ತೆರೆದಿಟ್ಟಿದ್ರು.
ನಾನು ಹೊರನಾಡು ಅನ್ನಪೂರ್ಣೇಶ್ವರಿ ದೇವಿಗೆ ಬೇಡಿಕೊಂಡಿದ್ದೆ. ನಾನು ಮದುವೆ ಅಂತಾ ಆದರೆ ನಿನ್ನ ಥರದ ಹುಡುಗಿಯೇ. ಇಲ್ಲದಿದ್ರೆ ನಾನು ಮದುಯೇ ಆಗಲ್ಲ ಎಂದು. ನಾನು ಈ ಹುಡುಗಿಯನ್ನು ನೋಡಿದಾಗ ಹೊರನಾಡು ಅನ್ನಪುರ್ಣೇಶ್ವರಿ ದೇವಿ ನೆನಪಾದಳು- ವಿಜಯ್ ರಾಘವೇಂದ್ರ
ಇಂದಿನ ಸಂದರ್ಭಕ್ಕೆ ಆವತ್ತು ವಿಜಯ್ ಹೇಳಿದ್ದ ಮಾತನ್ನ ನೆನಪು ಮಾಡ್ಕೊಂಡ್ರೆ ಛೇ ವಿಧಿ ಇಷ್ಟೊಂದು ಕಟುವಾಗಬಾರದಿತ್ತು ಅಂತಾ ಯಾರಿಗೆ ಅದ್ರೂ ಅನಿಸುತ್ತೆ. ಸೌಮ್ಯ ಸ್ವಭಾವದ ವಿಜಯ್ ಬಾಳಲ್ಲಿ ಅಷ್ಟೇ ಸುಂದರವಾಗಿ, ಸೌಮ್ಯವಾಗಿರೋ ಸ್ಪಂದನಾ ಎಂಟ್ರಿಯಾಗಿದ್ರು. ಇನ್ನೊಂದ್ ವಿಶೇಷ ಅಂದ್ರೆ ನಿನಗಾಗಿ ಸಿನಿಮಾ ಮಾಡಿದ ಮೇಲೆ ವಿಜಯ್‌ಗೆ ಮಂಗಳೂರು ಮೂಲದ ಹುಡ್ಗಿ ಬೇಕು ಅನ್ನೋ ಅಭಿಲಾಶೆಯೂ ಇತ್ತಂತೆ.
19 ವರ್ಷಗಳ ಹಿಂದೆ ನೋಡಿದ ತಕ್ಷಣವೇ ಲವ್ ಆಗೋಗಿತ್ತು!
ಪ್ರೀತಿ ಅನ್ನೋದೇ ಹಾಗೇ, ಅದು ಯಾವಾಗ ಹುಟ್ಟುತ್ತೆ? ಹೇಗೆ ಹುಟ್ಟುತ್ತೆ ಅಂತಾ ಹೇಳಲು ಸಾಧ್ಯವಿಲ್ಲ. ವಿಜಯ್ ಮತ್ತು ಸ್ಪಂದನಾ ಜೀವನದಲ್ಲೂ ಪ್ರೀತಿ ಅನ್ನೋದು ಜನ್ಮ ತಾಳಿದ್ದು ಅದೇ ರೀತಿ. ಹೌದು, ಅದು 19 ವರ್ಷದ ಹಿಂದೆ ಅಂದ್ರೆ 2004ರಲ್ಲಿ, ಮೊದಲ ಬಾರಿ ಸ್ಪಂದನಾನ ವಿಜಯ್ ರಾಘವೇಂದ್ರ ನೋಡಿದ್ರು. ಆವತ್ತು ವಿಜಯ್ ಕಣ್ಣಿಗೆ ಸ್ಪಂದನಾ ಬಿದ್ದಿದ್ದು, ಮಲ್ಲೇಶ್ವಂನ ಒಂದು ಕಾಫಿ ಡೇನಲ್ಲಿ. ಆ ಕ್ಷಣವೇ ವಿಜಯ್ ಮನಸ್ಸಿನಲ್ಲಿ ತಳಮಳ ಶುರುವಾಗಿತ್ತು. ಹೊಟ್ಟೆಯಲ್ಲಿ ಭವಿಷ್ಯದ ಚಿಟ್ಟೆಗಳು ಸುಂದರಾವಾಗಿ ಹಾರಾಡ್ತಿದ್ವು. ಇಷ್ಟೊಂದು ಸುಂದರವಾಗಿರೋ ಹುಡ್ಗಿ ಯಾರು ಇರ್ಬಹುದು ಅನ್ನೋ ಹುತೂಹಲ ಹೆಚ್ಚಾಗಿದ್ದು. ಸೌಮ್ಯ ಸ್ವಭಾವದ ವಿಜಯ್‌ಗೆ ಹೋಗಿ ಮಾತಾಡಿಸುವಷ್ಟು ಧೈರ್ಯ ಇರೋದಿಲ್ಲ. ಅಂದು ಕಾಫೀ ಕುಡಿದು ಸ್ನೇಹಿತರ ಜೊತೆ ವಾಪಸ್ ಮನೆಗೆ ಬರ್ತಾರೆ. ಸ್ಪಂದನಾ ಮಾತ್ರ ಮನಸ್ಸಲ್ಲಿಯೇ ಇರ್ತಾರೆ. ವಿಜಯ್ ಮನಸ್ಸು ಸ್ಪಂದನಾ ಹುಡುಕುತ್ತಾನೇ ಇತ್ತು. ಅದೃಷ್ಟ ಎನ್ನುವಂತೆ ಬರೋಬ್ಬರಿ ಮೂರು ವರ್ಷದ ನಂತ್ರ ಶೇಷಾದ್ರಿಪುರಂ ಕಾಫಿ ಡೇ ವೊಂದರಲ್ಲಿ ಮತ್ತೆ ಸ್ಪಂದನಾ ಕಾಣಿಸ್ತಿದ್ದಾರೆ.
ನನಗೆ ತುಂಬಾನೇ ಸಂಕೋಚ. ಮಾತನಾಡಿಸಲೇ 3 ವರ್ಷ ತೆಗೆದುಕೊಂಡಿದ್ದೆ. 2004ರಲ್ಲಿ ಒಂದು ಹುಡುಗಿ ನೋಡ್ತೀನಿ, ಮಲ್ಲೇಶ್ವರಂ ಕಾಫಿ ಡೇನಲ್ಲಿ. 2006ರಲ್ಲಿ ಅದೇ ಹುಡುಗಿಯನ್ನು ಶೇಷಾದ್ರಿಪುರಂ ಕಾಫಿ ಡೇನಲ್ಲಿ ನೋಡಿದ್ದೆ. ಅವಳೇ ನನ್ನ ಸ್ಪಂದನಾ –ವಿಜಯ್ ರಾಘವೇಂದ್ರ, ನಟ
ಸ್ಪಂದನಾ ನೋಡಿದ ಮೊದಲ ನೋಟದಲ್ಲಿಯೇ ವಿಜಯ್ ಹೃದಯ ಜಾರುತ್ತೆ. ಹೇಗೋ ಧೈರ್ಯ ಮಾಡಿ ಮಾತಾಡಿಸಿ ಪರಿಚಯ ಮಾಡಿಸಿಕೊಳ್ತಾರೆ. ಆ ಪರಿಯಚವೇ ಮುಂದೆ ಪತಿ ಪತ್ನಿಯಾಗಿ ಹಸೆಮಣೆ ಏರುವಂತೆ ಮಾಡುತ್ತೆ. ವಿಜಯ್ ಮತ್ತು ಸ್ಪಂದನಾ ಮೊದಲ ಬಾರಿಗೆ ಕಾಫಿ ಡೇನಲ್ಲಿ ನೋಡ್ತಾರೆ, ಬರೋಬ್ಬರಿ ಮೂರು ವರ್ಷಗಳ ನಂತ್ರ ಪರಿಚಯ ಮಾಡಿಕೊಳ್ತಾರೆ.
PART-1: 16ನೇ ವಿವಾಹ ವಾರ್ಷಿಕೋತ್ಸವಕ್ಕೆ 19 ದಿನ ಬಾಕಿ ಇತ್ತು.. ಸ್ನೇಹದಿಂದ ಪ್ರೀತಿ, ಪ್ರೀತಿಯಿಂದ ಮದುವೆಯವರೆಗೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ