newsfirstkannada.com

16ನೇ ವಿವಾಹ ವಾರ್ಷಿಕೋತ್ಸವಕ್ಕೆ 19 ದಿನ ಬಾಕಿ ಇತ್ತು.. ಸ್ನೇಹದಿಂದ ಪ್ರೀತಿ, ಪ್ರೀತಿಯಿಂದ ಮದುವೆಯವರೆಗೆ..

Share :

09-08-2023

  ವಿಜಯ್ ರಾಘವೇಂದ್ರ-ಸ್ಪಂದನಾ ಮದ್ವೆ ಮಾತುಕತೆ ಹೇಗಿತ್ತು?

  ಸ್ಪಂದನಾ ಕೈಮೇಲೆ ಇತ್ತು ವಿಜಯರಾಘವೇಂದ್ರ ಟ್ಯಾಟೂ

  ಚಿನ್ನಾರಿ ಮುತ್ತನ ಖುಷಿ, ಧೈರ್ಯ ಎಲ್ಲವೂ ಆಗಿದ್ದ ಸ್ಪಂದನಾ

ಕಾಫಿಡೇನಲ್ಲಿ ಭಯ ತುಂಬಿದ ಹೃದಯದಿಂದಲೇ ಸ್ಪಂದನಾರನ್ನ ವಿಜಯ್ ಪರಿಚಯ ಮಾಡಿಕೊಳ್ತಾರೆ. ಆ ಬಳಿಕ ಇವ್ರು ಸ್ಯಾಂಡಲ್‌ವುಡ್‌ನಲ್ಲೇ ಅತೀ ಮುದ್ದಾದ ಜೋಡಿ ಅಂತ ಕರೆಸಿಕೊಳ್ತಾರೆ. ವಿಶೇಷ ಅಂದ್ರೆ, ಮದುವೆಗೂ ಮುನ್ನ ಇವ್ರಿಬ್ಬರ ನಡುವೆ ಅದೆಷ್ಟು ಪ್ರೀತಿ ಇತ್ತೊ ಮದುವೆ ಆದ್ಮೇಲೆ ಅದು ದುಪ್ಪಟ್ಟಾಗಿತ್ತು. ಹಾಗಾದ್ರೆ ಇಬ್ಬರು ತಮ್ಮ ತಮ್ಮ ಕುಟುಂಬಗಳನ್ನ ತಮ್ಮ ಪ್ರೀತಿಗೆ ಒಪ್ಪಿಸಿದ್ದು ಹೇಗೆ? ವಿಜಯ್‌ಗೆ ಸ್ಪಂದನಾ ಯಾವ್‌ ರೀತಿ ಶಕ್ತಿಯಾಗಿದ್ದರು ಅನ್ನೋದ್ರ ವಿವರ ಇಲ್ಲಿದೆ.

ಇದನ್ನೂ ಓದಿ: 19 ವರ್ಷಗಳ ಹಿಂದೆ ನೋಡಿದ ತಕ್ಷಣವೇ ಲವ್ ಆಗೋಗಿತ್ತು.. ಚಿನ್ನಾರಿ ಮುತ್ತನಿಗೆ ಸ್ಪಂದನಾ ಮೇಲೆ Love ಆಗಿದ್ದು ಹೇಗೆ..

ಒಮ್ಮೆ ಕಾಫಿ ಡೇನಲ್ಲಿ ಕಾಣಿಸಿಕೊಂಡಿದ್ದ ಸ್ಪಂದನಾ ವಿಜಯ್‌ಗೆ ಸಖತ್ ಇಷ್ಟವಾಗಿಬಿಡ್ತಾರೆ. ಮನೆ ಹಾಗೂ ಮನಸಿಗೆ ಒಡತಿಯಾದ್ರೆ ಇವಳೇ ಆಗ್ಬೇಕು ಅನ್ನೋದನ್ನು ಅವರು ಮನಸ್ಸು ಪದೇ ಪದೆ ಹೇಳುತ್ತೆ. ಹಾಗೆಯೇ ಮೂರು ವರ್ಷಗಳ ನಂತ್ರ ಸಿಕ್ಕಾಗ ಈಗ ಬಿಟ್ರೆ ಮುಗೀತು ಕಥೆ ಅಂದ್ಕೊಂಡೇ ಪರಿಚಯ ಮಾಡಿಕೊಳ್ತಾರೆ. ಆದ್ರೆ, ಆವಾಗ್ಲೂ ಹೆಸರು ಹೇಳೋದಿಲ್ಲ, ಫೋನ್‌ ನಂಬರ್‌ ಕೂಡ ಕೇಳೋದಿಲ್ಲ ವಿಜಯ್‌. ಯಾಕಂದ್ರೆ ಏನೋ ಒಂದು ರೀತಿಯ ಭಯ ವಿಜಯ್‌ಗೆ ಕಾಡ್ತಾನೇ ಇತ್ತು. ಹೇಳಿ ಕೇಳಿ ಪೊಲೀಸ್‌ ಅಫೀಸರ್‌ ಮಗಳು ಅನ್ನೋ ಸಣ್ಣ ಅಳುಕು ಕೂಡ ವಿಜಯ್​ಗೆ ಇತ್ತು. ಅಂತಿಮವಾಗಿ ಇಬ್ಬರಿಗೂ ಪರಿಚಯ ಮಾಡಿಕೊಳ್ಳುವ ಟೈಮ್‌ ಬಂದೇ ಬರುತ್ತೆ. ಹಾಗೇ ಫೋನ್‌ ನಂಬರ್‌ ಎಕ್ಸೆಂಜ್‌ ಆಗೋ ಕಾಲವೂ ಕೂಡಿ ಬರುತ್ತೆ.

ಅಪ್ಪ ಚಿನ್ನೇಗೌಡರನ್ನ ಮದುವೆಗೆ ಒಪ್ಪಿಸಿದ್ದು ಹೇಗೆ?

ವಿಜಯ್‌ ಮದುವೆ ವಯಸ್ಸಿಗೆ ಬಂದಾಗ ನೇಮು ಫೇಮು ಇಲ್ಲವೂ ಇತ್ತು. ಕಾರಣ ಸ್ಯಾಂಡಲ್‌ವುಡ್‌ನಲ್ಲಿ ವಿಜಯ್‌ ಸಖತ್ತಾಗೇ ಸದ್ದು ಮಾಡ್ತಿದ್ರು. ನೋಡಲು ಸ್ಪುರದ್ರೂಪಿಯೂ ಆಗಿದ್ದ ನಟನಿಗೆ, ಹೆಣ್ಣು ಕೊಡ್ಬೇಕು ಅಂತಾ ಚಿನ್ನೇಗೌಡರ ಬಳಿ ತುಂಬಾ ಸಂಬಂಧಗಳು ಬರ್ತಿದ್ದವಂತೆ. ಆದ್ರೆ ಯಾವ್‌ ಹುಡ್ಗಿಯನ್ನು ತೋರಿಸಿದ್ರು ಇದು ಬೇಡ, ಅದು ಬೇಡ ಅಂತಾ ವಿಜಯ್‌ ನೆಪ ಹೇಳ್ತಾ ಇದ್ದರಂತೆ. ಯಾಕಂದ್ರೆ ಅದಾಗಲೇ ವಿಜಯ್‌ ಹೃದಯದಲ್ಲಿ ಸ್ಪಂದನಾ ಗಟ್ಟಿಯಾಗಿ ನೆಲೆ ನಿಂತಿದ್ರು. ಮದುವೆ ಅಂತಾ ಆದ್ರೆ ಸ್ಪಂದನಾ ಮಾತ್ರ ಅನ್ನೋದನ್ನು ದೃಢವಾಗಿ ನಿರ್ಧಾರ ಮಾಡಿಯಾಗಿತ್ತು ವಿಜಯ್‌.

ಇನ್ನೊಂದು ವಿಚಾರ ಅಂದ್ರೆ ಸ್ಪಂದನಾ ತಂದೆ ಶಿವರಾಮ್ ಹಾಗೂ ವಿಜಯ್‌ ತಂದೆ ಚಿನ್ನೇಗೌಡರಿಗೂ ಮೊದಲೇ ಪರಿಚಯ ಇತ್ತು. ಎರಡೂ ಕುಟುಂಬಕ್ಕೆ ಪರಿಚಯ ಇದ್ದಿದ್ದರಿಂದ ಮದುವೆ ಮಾತುಕತೆ ಮತ್ತಷ್ಟು ಸುಲಭವಾಯಿತು. ಚಿನ್ನೇಗೌಡರು ಇಟ್ಟ ಪ್ರಪೋಸಲ್​ ಅನ್ನು ಶಿವರಾಮ್ ಒಪ್ಪಿದರು. ಎರಡೂ ಕುಟುಂಬದವರು ಒಪ್ಪಿದ ಬಳಿಕ ಮದುವೆ ನಡೆಯಿತು. ಮಗನ ಮಾತನ್ನ ಒಪ್ಪಿದ ಚಿನ್ನೇಗೌಡರು ಬಿ.ಕೆ.ಶಿವರಾಂ ಅವ್ರ ಮನೆಗೆ ಹೋಗಿ ಹೆಣ್ಣು ಕೇಳಲು ಸಿದ್ಧರಾಗ್ತಾರೆ. ಹೆಣ್ಣಿನ ಮನೆಯವ್ರಿಗೆ ಎಲ್ಲೋ ಒಂದು ರೀತಿಯ ಭಯ, ಆತಂಕ ಅನ್ನೋದು ಇದ್ದೇ ಇತ್ತು. ಹೀಗಾಗಿ ಮೊದಲು ಸ್ಪಂದನಾಗೆ ಇಷ್ಟ ಇದೆಯೋ? ಇಲ್ವೋ ಅನ್ನೋದನ್ನು ಕೇಳಿಕೊಳ್ತಾರೆ. ಅನಂತರವೇ ಮುಂದಿನ ಹೆಜ್ಜೆಯನ್ನು ಇಡ್ತಾರೆ.

ಜೀವನಲ್ಲಿ ಎಲ್ಲವೂ ವಿಜಯ್‌ ಅಂದುಕೊಂಡಂತೆ ಸಾಗ್ತಿತ್ತು. ಮದುವೆಗೂ ಮುನ್ನ ತಾಯಿ ಅನ್ನಪೂರ್ಣೇಶ್ವರಿ ದೇವರಲ್ಲಿ ಏನ್‌ ಬೇಡಿರೋ ಹಾಗೇ ಆಗಿತ್ತು. ಅಂತಿಮವಾಗಿ ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆಯುತ್ತೆ, ಎಲ್ಲರೂ ಒಪ್ಪಿಕೊಂಡು 2007 ರಲ್ಲಿ ವಿವಾಹ ನೆರವೇರಿಸುತ್ತಾರೆ. ಅಲ್ಲಿಯವರೆಗೆ ಇಬ್ಬರ ನಡುವೆ ಮೊಳಕೆ ಒಡೆದಿದ್ದ ಪ್ರಿತಿಗೆ ವಿವಾಹ ಬಂಧನವಾಗುತ್ತೆ. ಮುಂದೆ ಪತಿ ಪತ್ನಿಯಾಗಿ ಇಬ್ಬರು ಅನ್ಯೂನ್ಯವಾಗಿ ಜೀವನ ಮಾಡ್ತಾರೆ. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಒಂದು ಕ್ಷಣವೂ ಇರಲಾಗದಷ್ಟು ಪ್ರೀತಿಯಲ್ಲಿ ಜೀವನ ಸಾಗಿಸುತ್ತಿರುತ್ತಾರೆ.

ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರ್ತಾಳೆ ಅನ್ನೋ ಮಾತಿದೆ. ಇಲ್ಲಿ ವಿಜಯ್‌ ಯಶಸ್ಸಿನ ಜೀವನದ ಹಿಂದೆ ಖಂಡಿತ ಸ್ಪಂದನಾ ಇದ್ರು. ಹೌದು ಇವರಲ್ಲಿ ಮದುವೆಗೂ ಮುನ್ನ ಅದು ಹೇಗೆ ಪ್ರೀತಿ ಇತ್ತೋ ? ಹಾಗೇ ಮದುವೆ ಆದ್ಮೇಲೆ ಅದ್ರ ಹತ್ತು ಪಟ್ಟು ಪ್ರೀತಿ ಕಾಣಿಸ್ತಿತ್ತು. ಪ್ರತಿಯೊಂದು ಸಂದರ್ಭದಲ್ಲಿಯೂ, ಪ್ರತಿಯೊಂದು ಹಂತದಲ್ಲಿಯೂ ವಿಜಯ್‌ ಬೆನ್ನಿಗೆ ಸ್ಪಂದನಾ ನಿಂತುಕೊಳ್ಳುತ್ತಾರೆ. ಕಷ್ಟ ಸುಖದಲ್ಲಿ ಭಾಗಿಯಾಗ್ತಾರೆ. ಇನ್ನು ತನಗೆ ಯಾವ್‌ ರೀತಿಯಲ್ಲಿ ಸ್ಪಂದನಾ ಖುಷಿಯಾಗಿ, ಧೈರ್ಯವಾಗಿ ನಿಂತುಕೊಂಡಿದ್ರು ಅನ್ನೋದನ್ನು ವಿಜಯ್‌ ಹೇಳಿಕೊಂಡಿದ್ರು.

ಅವಳು ನನಗೆ ಮಾಸ್ಟರ್ ಆಗಿದ್ದಳು. ಖುಷಿಯ ವಿಚಾರದಲ್ಲಿ, ಧೈರ್ಯವನ್ನು ಹೇಳಿಕೊಡೋ ವಿಚಾರದಲ್ಲಿ ಆಕೆ ನನಗೆ ಮಾಸ್ಟರ್ ಆಗಿದ್ದಳುವಿಜಯ್‌ ರಾಘವೇಂದ್ರ, ನಟ

ಸ್ಪಂದನಾ ಮಾತಾಡುವುದು ಕಡಿಮೆಯಾಗಿತ್ತು. ಆದ್ರೆ, ವಿಜಯ್‌ ಇಷ್ಟ ಕಷ್ಟವನ್ನು ಅರ್ಥ ಮಾಡಿಕೊಂಡಿದ್ರು. ಯಾವುದನ್ನು ಇಷ್ಟಪಡ್ತಾರೆ? ಯಾವುದನ್ನು ಇಷ್ಟಪಡಲ್ಲ ಅನ್ನೋದನ್ನು ಚೆನ್ನಾಗಿ ಅರಿತುಕೊಂಡಿದ್ರು. ಒಮ್ಮೆ ಸ್ಪಂದನಾ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಅವರಿಗೆ ಚಿಕನ್ ಅಂದರೆ ತುಂಬಾನೇ ಇಷ್ಟ. ನಾನ್​ವೆಜ್ ಪದಾರ್ಥಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಎಂದಿದ್ದರು.

ವಿಜಯ್‌ಗೆ ತಾನು ಮದುವೆ ಆಗ್ಬೇಕಾದ ಹುಡುಗಿ ಹೇಗೆ ಇರ್ಬೇಕು ಅನ್ನೋ ಕನಸು ಇತ್ತೋ ಹಾಗೇ ಪತ್ನಿಯಾಗಿ ಬಾಳಿಗೆ ಬರೋಳನ್ನು ಚೆನ್ನಾಗಿಯೇ ನೋಡಿಕೊಳ್ಳಬೇಕು ಅನ್ನೋ ಪ್ಲಾನ್‌ ಕೂಡ ಮುಂಚಿತವಾಗಿ ಕಟ್ಟಿಕೊಂಡಿದ್ರು. ಅನಾವಶ್ಯಕವಾಗಿ ವಾತಾವರಣ ಕೆಡಿಸಲು ಅವ್ರಗೆ ಇಷ್ಟ ಇಲ್ಲ. ಹೀಗಾಗಿ, ತಾನು ಜಗಳ ಮಾಡೋಕೆ ಹೋಗಲ್ಲ ಎಂದಿದ್ದರು ವಿಜಯ್. ಇದನ್ನು ನೋಡಿದ್ರೆ ವಿಜಯ್‌ ಪತ್ನಿಯನ್ನು ಅದೆಷ್ಟು ಪ್ರೀತಿ ಮಾಡ್ತಿದ್ರು ಅನ್ನೋದು ಗೊತ್ತಾಗ್ತಿದೆ.

ಈ ವಿಡಿಯೋವನ್ನು ನೋಡ್ತಿದ್ರೆ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಅವ್ರವರನ್ನು ಅದೆಷ್ಟು ಪ್ರೀತಿ ಮಾಡ್ತಾ ಇದ್ರೋ ಹಾಗೇ ಸ್ಪಂದನಾ ಕೂಡ ವಿಜಯ್‌ ರಾಘವೇಂದ್ರ ಅವ್ರನ್ನು ತುಂಬಾನೇ ಪ್ರೀತಿ ಮಾಡ್ತಿದ್ರು ಅನ್ನೋದು ಗೊತ್ತಾಗ್ತಿದೆ. ಇಬ್ಬರು ಒಂದೇ ನಾಣ್ಯದ ಎರಡು ಮುಖಗಳ ರೀತಿಯಲ್ಲಿದ್ರು. ಕಾರಣ ಸ್ಪಂದನಾ ಕೈ ಮೇಲೆ ವಿಜಯ್‌ ರಾಘವೇಂದ್ರ ಟ್ಯಾಟೂ ಹಾಕಿಸಿಕೊಂಡಿದ್ರು. ವಿಜಯ್‌ ರಾಘವೇಂದ್ರ ಮತ್ತು ಸ್ಪಂದನಾ ವಿವಾಹವಾದಿದ್ದು 2007 ಆಗಸ್ಟ್‌ 26 ರಂದು ಆಗಿತ್ತು. ಅಂದ್ರೆ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನ ಮಾತ್ರ ಬಾಕಿ ಇತ್ತು. ಇಂಥಾ ಟೈಮ್‌ನಲ್ಲಿಯೇ ಚಿನ್ನಾರಿ ಮುತ್ತನ ಜೀವನದಲ್ಲಿ ಬರ ಸಿಡಿಲು ಬಡಿದಿದೆ. ದೇವರು ಅವ್ರ ಕುಟುಂಬಕ್ಕೆ ದುಃಖ ಬರಿಸುವ ಸಾಮರ್ಥ್ಯ ನೀಡಲಿ ಅನ್ನೋದೆ ನಮ್ಮ ಆಶಯ.

ಚಿಕ್ಕವಯಸ್ಸಿನಲ್ಲಿಯೇ ಸ್ಪಂದನಾ ಹೃದಯಾಘಾತಕ್ಕೆ ಸಾವನ್ನಪ್ಪಿದ್ದು ಆಘಾತಕಾರಿ ವಿಚಾರ. ಸ್ಯಾಂಡಲ್‌ವುಟ್‌ಗೆ ಒಂದು ರೀತಿಯ ಶಾಕ್‌. ಮುದ್ದಾದ ಜೋಡಿಯ ಫೋಟೋ, ವಿಡಿಯೋಗಳನ್ನು ನೋಡಿದ್ರೆ ಎಂಥವರಿಗಾದ್ರೂ ಕಣ್ಣೀರು ಬರುತ್ತೆ. ಸ್ಪಂದನಾ ಕುಟುಂಬದವರಿಗೆ ಭಗವಂತೆ ದುಃಖ ಬರಿಸುವ ಶಕ್ತಿ ನೀಡುವಂತಾಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

16ನೇ ವಿವಾಹ ವಾರ್ಷಿಕೋತ್ಸವಕ್ಕೆ 19 ದಿನ ಬಾಕಿ ಇತ್ತು.. ಸ್ನೇಹದಿಂದ ಪ್ರೀತಿ, ಪ್ರೀತಿಯಿಂದ ಮದುವೆಯವರೆಗೆ..

https://newsfirstlive.com/wp-content/uploads/2023/08/SPANDANA-4-1.jpg

Load More