ಆಗಸ್ಟ್ 6 ರಂದು ಸ್ಪಂದನಾ ನಿಧನರಾದರು
ಬ್ಯಾಂಕಾಕ್ನಲ್ಲಿ ಸ್ಪಂದನಾಗೆ ಹೃದಯಾಘಾತ
ಆಗಸ್ಟ್ 9ರಂದು ಸ್ಪಂದನಾ ಅಂತ್ಯಕ್ರಿಯೆ ನೆರವೇರಿತು
ಇದೇ ತಿಂಗಳು 6ನೇ ತಾರೀಖಿನಂದು ಸ್ಯಾಂಡಲ್ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ನಿಧನರಾದರು. ಬ್ಯಾಂಕಾಕ್ನಲ್ಲಿ ಹೃದಯಾಘಾತಕ್ಕೆ ಬಲಿಯಾದರು. ಆಗಸ್ಟ್ 9ರಂದು ಸ್ಪಂದನಾ ಅವರ ಅಂತ್ಯಕ್ರಿಯೆಯನ್ನು ಹರಿಶ್ಚಂದ್ರ ಘಾಟ್ನಲ್ಲಿ ನೆರೆವೇರಿಸಲಾಯಿತು. ಅದರಂತೆಯೇ ಇಂದು 5ನೇ ದಿನದ ಕಾರ್ಯದ ಸಲುವಾಗಿ ವಿಜಯ್ ರಾಘವೇಂದ್ರ ಕುಟುಂಬ ಸಮೇತರಾಗಿ ಶ್ರೀರಂಗ ಪಟ್ಟಣದಲ್ಲಿ ಅಸ್ತಿ ವಿಸರ್ಜನೆ ಮಾಡಲು ಮುಂದಾಗಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿ. ಕೆ ಶಿವರಾಮ್ ಮನೆಯಿಂದ ತೆರಳಲು ಚಿನ್ನೇ ಗೌಡರ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ. ಹರಿಶ್ಚಂದ್ರ ಘಾಟ್ ನಲ್ಲಿ ಅಸ್ತಿ ಪಡೆದು ಶ್ರೀರಂಗ ಪಟ್ಟಣದಲ್ಲಿ ಕಾರ್ಯ ಮಾಡಲು ಮುಂದಾಗಿದ್ದಾರೆ.
ಸ್ಪಂದನಾ ಕುಟುಂಬ 11 ಗಂಟೆ ಸುಮಾರಿಗೆ ಶ್ರೀರಂಗಪಟ್ಟಣ ತಲುಪಲಿದ್ದು, ಬಳಿಕ ಅಸ್ತಿ ವಿಸರ್ಜನೆ ಮಾಡಲಿದ್ದಾರೆ.
ಇನ್ನು ಸ್ಪಂದನಾ ಸಾವು ಸ್ಯಾಂಡಲ್ವುಡ್ಗೆ ದೊಡ್ಡ ಆಘಾತವನ್ನು ನೀಡಿತ್ತು. ವಿದೇಶ ಪ್ರವಾಸದಲ್ಲಿದ್ದವರು ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದರು. ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ವಿಜಯ್ ರಾಘವೇಂದ್ರ ಅವರಿಗೆ ಈ ವಿಚಾರವು ಶಾಕ್ ನೀಡಿದಂತಾಗಿತ್ತು. ಅತ್ತ ಮಗನೂ ಕೂಡ ತಾಯಿ ಸಾವನ್ನಪ್ಪಿದ್ದನ್ನು ಕಂಡು ಕಣ್ಣೀರ ಬೀಳ್ಕೊಡುಗೆ ಕೊಟ್ಟಿದ್ದನು. ಅದರಂತೆಯೇ ಇಂದು ಸ್ಪಂದನಾ ಸಾವನನ್ನಪ್ಪಿ 5 ದಿನಗಳು ಉರುಳಿದ್ದು, ಅಸ್ತಿ ವಿಸರ್ಜನೆ ಕಾರ್ಯಕ್ಕೆ ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ