newsfirstkannada.com

Video: ಕಾಫಿ ಡೇನಲ್ಲಿ ಸಿಕ್ಕ ಸ್ಪಂದನಾ ವಿಜಯ್​ ಮನದೊಡತಿ ಆಗಿದ್ದು ಹೇಗೆ? ಇವರಿಬ್ಬರದ್ದು ಲವ್​ ಮ್ಯಾರೇಜ್​ ಅಲ್ವೇ ಅಲ್ಲ!  

Share :

07-08-2023

    ಮೊದಲ ನೋಟದಲ್ಲೇ ಸ್ಪಂದನಾಗೆ ಮನಸೋತಿದ್ರು ವಿಜಯ್​ ರಾಘವೇಂದ್ರ

    ಮದುವೆ ಆಗಲು ಏನೇಲ್ಲಾ ಸರ್ಕಸ್​ ಮಾಡಿದ್ರು ಗೊತ್ತಾ ವಿಜಯ್​

    ಸ್ಪಂದನಾಗೆ ಮದುವೆ ಬಳಿಕ ಪ್ರಾಮಿಸ್​ ಮಾಡಿದ್ದರು ಚಿನ್ನಾರಿ ಮುತ್ತಾ

ವಿಜಯ​ ರಾಘವೇಂದ್ರ ಪತ್ನಿ ಸ್ಪಂದನಾ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಜೋಡಿ 2007ರಲ್ಲಿ ವಿವಾಹವಾದರು. ಆದರೆ ಇವರಿಬ್ಬರದ್ದು ಲವ್​ ಮ್ಯಾರೇಜ್​ ಅಲ್ವೇ ಅಲ್ಲ. 15 ವರ್ಷದ ದಾಂಪತ್ಯ ಜೀವನ ಮುಗಿಸಿ 16ನೇ ವರ್ಷದತ್ತ ಸಾಗುತ್ತಿದ್ದ ಈ ಜೋಡಿಯದ್ದು ಲವ್​ ಮ್ಯಾರೇಜ್​ ಎಂದು ಬಹುತೇಕರು ತಿಳಿದುಕೊಂಡಿದ್ದಾರೆ. ಆದರೆ ಮೊದಲ ನೋಟದಲ್ಲೇ ಸ್ಪಂದನಾಗೆ ಮನಸೋತ ವಿಜಯ್​ ರಾಘವೇಂದ್ರ, ಅವರನ್ನು ಮದುವೆಯಾಗಲು ಏನೇಲ್ಲಾ ಸರ್ಕಸ್​ ಮಾಡಿದ್ದಾರೆ ಗೊತ್ತಾ? ಸ್ಪಂದನಾ ಅವರನ್ನು ಭೇಟಿ ಮಾಡಿದ್ದೇ ಒಂದು ವಿಚಿತ್ರ, ಅದರಲ್ಲಿ ಇವರಿಬ್ಬರ ಮ್ಯಾರೇಜ್​​ ಸ್ಟೋರಿ ಇನ್ನೂ ಚೆನ್ನಾಗಿದೆ.

ವಿಜಯ​ ರಾಘವೇಂದ್ರ 2003ರಲ್ಲಿ ಮಲ್ಲೇಶ್ವರಂನ ಕಾಫಿ ಡೇನಲ್ಲಿ ಸ್ಪಂದನಾ ಅವರನ್ನು ಮೊದಲ ಬಾರಿಗೆ ನೋಡಿದ್ದರು. ಫ್ರೆಂಡ್ಸ್​ ಜೊತೆ ಹೋಗುವಾಗ ಅವರನ್ನು ಕಂಡರು. ಆದರೆ ಮಾತನಾಡಿಸಬೇಕು ಎಂದುಕೊಂಡರು ಮನಸಲ್ಲಿ ಸಂಕೋಚವಿತ್ತು. ಅಂದು ಮಾತ್ರ ಮಾತನಾಡಿಸಲು ಆಗದೆ ಸುಮ್ಮನಾದರು.

2006ರಲ್ಲಿ ಶೇಷಾದ್ರಿಪುರಂ ಕಾಫೀ ಡೇನಲ್ಲಿ ಮತ್ತೆ ಸ್ಪಂದನಾ ಅವರನ್ನು ವಿಜಯ​ ರಾಘವೇಂದ್ರ ಕಂಡರು. ಆದರೆ ಮನದಲ್ಲಿ ಸಂಕೋಚ, ಭಯ ಕೂಡ ಇತ್ತು. ಕೊನೆಗೆ ಏನಾದರಾಗಲಿ ಮಾತನಾಡಿಸಲೇ ಬೇಕು ಎಂದು ಸ್ಪಂದನಾ ಅವರನ್ನು ಮೊದಲ ಬಾರಿಗೆ ಮಾತನಾಡಿಸಿದರು. ಪ್ರಾರಂಭದಲ್ಲಿ ಇಂಗ್ಲೀಷ್​ನಲ್ಲಿ ಮಾತನಾಡಿಸಿದರು. ಅದಕ್ಕೆ ತಕ್ಕಂತೆ ಸ್ಪಂದನಾ ಕೂಡ ಪ್ರತಿಕ್ರಿಯಿಸಿದ್ದರಂತೆ. ಆದರೆ ಮಾತನಾಡಿಸುವ ಭರದಲ್ಲಿ ವಿಜಯ್​ ಅವರು ಸ್ಪಂದನಾ ಹೆಸರು, ನಂಬರ್​ ಇದಾವುದನ್ನು ಕೇಳದೆ ಮರೆತು ಬಂದಿದ್ದರು.

ಇವಿಷ್ಟು ಘಟನೆಗಳ ಬಳಿಕ  ಜಿಮ್​ನಲ್ಲಿ ಸ್ಪಂದನಾ ಮುಖ ಕಾಣಸಿಗುತ್ತದೆ. ಮತ್ತೆ ಇವರಿಬ್ಬರ ನಡುವೆ ಮಾತು ಬೆಳೆಯುತ್ತದೆ. ಆ ಸಮಯದಲ್ಲಿ ವಿಜಯ್​ ರಾಘವೇಂದ್ರ ಅವರಿಗೆ ಮನೆಯಲ್ಲಿ ಮದುವೆ ಮಾಡಿಸುವ ಮಾತುಕತೆ ನಡೆಯುತ್ತಿತ್ತು. ಹಾಗಾಗಿ ಮನೆಯವರು ಹುಡುಗಿಯನ್ನು ಹುಡುಕುತ್ತಿದ್ದರು. ಆದರೆ ಸ್ಪಂದನಾ ಅವರನ್ನು ನೋಡಿದ ಬಳಿಕ ಮನೆಯಲ್ಲಿ ಈ ವಿಚಾರವನ್ನು ವಿಜಯ್​ ತಂದೆ ಬಳಿ ಹೇಳುತ್ತಾರೆ.

ವಿಜಯ ರಾಘವೇಂದ್ರ ಸ್ಪಂದನಾ ಅವರನ್ನು ನೋಡಿದ ಕೂಡಲೇ ಮನೆಯಲ್ಲಿ ವಿಚಾರ ತಿಳಿಸುತ್ತಾರೆ. ತಂದೆಯ ಚಿನ್ನೇಗೌಡರ ಬಳಿ ವಿಚಾರ ತಿಳಿಸಿದಂತೆ ಅವರು ಸ್ಪಂದನಾ ಅವರ ತಂದೆ ಬಿ.ಕೆ ಶಿವರಾಂ ಬಳಿ ಈ ವಿಚಾರ ತಿಳಿಸುತ್ತಾರೆ. ಬಳಿಕ 2 ತಿಂಗಳ ಒಳಗೆ ವಿಜಯ್​ ಮತ್ತು ಸ್ಪಂದನಾಗೆ ಮದುವೆ ಮಾಡಿಸುತ್ತಾರೆ.

ಮದುವೆಯಾದ ಕೂಡಲೇ ಸ್ಪಂದನಾಗೆ ಪ್ರಾಮಿಸ್​​ ಮಾಡಿದ್ದ ವಿಜಯ್​

ವಿಜಯ್​ ರಾಘವೇಂದ್ರ ಅವರು ಸ್ಪಂದನಾರನ್ನು ವಿವಾಹವಾದ ಕೂಡಲೇ ಪ್ರಾಮಿಸ್​ ಮಾಡಿದ್ದರು. ನಮ್ಮಿಬ್ಬರ ನಡುವೆ ಜಗಳಗಳು ಆಗಬಾರದು, ಬೇಜಾರ ಆಗಬಾರದು, ಸಂತೋಷದಲ್ಲಿ ಇರಬೇಕು, ಸಮಾಧಾನದಲ್ಲಿ ಇರಬೇಕು ಎಂದು ಹೇಳಿದ್ದರಂತೆ. ಮದುವೆ ಅಗೋ ಮುಂಚೆಯೇ ವಿಜಯ್​ಗೆ ಈ ಆಸೆಗಳ ಇದ್ದವು. ಹಾಗಾಗಿ ಮದುವೆ ಆದ ಬಳಿ ವಿಜಯ್​ ಈ ವಿಚಾರವನ್ನು ಸ್ಪಂದನಾಗೆ ಹೇಳಿದ್ದರು. ಅದರಂತೆಯೇ ಪತ್ನಿಯನ್ನು ಚೆನ್ನಾಗಿ ನೋಡಿಕೊಂಡು ಬಂದಿದ್ದರು. ಆದರೆ ವಿಧಿಯ ಕ್ರೂರ ಲೀಲೆಗೆ ಸ್ಪಂದನಾ ನಿನ್ನೆ ನಿಧನರಾಗಿದ್ದಾರೆ.

ಸ್ನೇಹಿತರೊಂದಿಗೆ ಬ್ಯಾಂಕಾಕ್​ ತೆರಳಿದ್ದ ಸ್ಪಂದನಾ ಅವರು ಲೋ ಬಿಸಿ ಕಾರಣ ಕುಸಿದು ಬಿದ್ದಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆ ಸಾಗಿಸಲಾಗಿತ್ತಾದರು ಅಷ್ಟರಲ್ಲೇ ನಿಧನರಾಗಿದ್ದಾರೆ. ನಾಳೆ ಅವರ ಮೃತದೇಹ ಬೆಂಗಳೂರು ತರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಕಾಫಿ ಡೇನಲ್ಲಿ ಸಿಕ್ಕ ಸ್ಪಂದನಾ ವಿಜಯ್​ ಮನದೊಡತಿ ಆಗಿದ್ದು ಹೇಗೆ? ಇವರಿಬ್ಬರದ್ದು ಲವ್​ ಮ್ಯಾರೇಜ್​ ಅಲ್ವೇ ಅಲ್ಲ!  

https://newsfirstlive.com/wp-content/uploads/2023/08/Spandana-3.jpg

Load More