newsfirstkannada.com

ವಿಜಯ್ ರಾಘವೇಂದ್ರ ನಟನೆಯ ‘ಕದ್ದ ಚಿತ್ರ’ದ ಟ್ರೈಲರ್​ ಲಾಂಚ್​.. ಸ್ಟೇಜ್​ ಮೇಲೆ ನಿಂತು ಭಾವುಕರಾದ ಚಿನ್ನಾರಿ ಮುತ್ತ

Share :

26-08-2023

  'ಕದ್ದ ಚಿತ್ರ' ಸಿನಿಮಾದ ಟ್ರೈಲರ್ ಲಾಂಚ್

  ಪತ್ನಿ ಸ್ಪಂದನಾ ನೆನೆದು ರಾಘು ಭಾವುಕರಾಗಿದ್ದಾರೆ

  ಇದು ತಂಡವಲ್ಲ, ಆಪ್ತರ ಬಳಗ ಎಂದ ಚಿನ್ನಾರಿ ಮುತ್ತ

ವಿಜಯ್ ರಾಘವೇಂದ್ರ ನಟನೆಯ ‘ಕದ್ದ ಚಿತ್ರ’ ಸಿನಿಮಾದ ಟ್ರೈಲರ್ ಲಾಂಚ್ ಆಗಿದೆ. ಲುಲು ಮಾಲ್ ಆವರಣದಲ್ಲಿ ಕದ್ದ ಚಿತ್ರ ಟ್ರೈಲರ್ ಲಾಂಚ್ ಫಂಕ್ಷನ್ ಏರ್ಪಡಿಸಲಾಗಿದ್ದು, ಚಿನ್ನಾರಿ ಮುತ್ತಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಆಗಸ್ಟ್ 25ರಂದು ಕದ್ದ ಚಿತ್ರ ಸಿನಿಮಾದ ಟ್ರೈಲರ್​ ರಿಲೀಸ್ ಆಗಬೇಕಿತ್ತು. ಆದರೆ ವಿಜಯ್​ ರಾಘವೇಂದ್ರ ಅವರ ಪತ್ನಿ ಅಗಲಿಕೆಯ ಕಾರಣದಿಂದ ಈ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಇಂದು ಸ್ಪಂದನಾ- ವಿಜಯ್ ರಾಘವೇಂದ್ರ 16ನೇ ವಿವಾಹ ವಾರ್ಷಿಕೋತ್ಸವಾಗಿದ್ದು, ಚಿತ್ರತಂಡ ಚಿನ್ನಾರಿ ಮುತ್ತನ ಸಮ್ಮುಖದಲ್ಲೇ ಟ್ರೈಲರ್​ ಲಾಂಚ್​ ಮಾಡಿದೆ.

ಸ್ಪಂದನಾ ಅಗಲಿಕೆಯ ಬಳಿಕ ಮೊದಲ ಬಾರಿಗೆ ಚಿನ್ನಾರಿ ಮುತ್ತ ತಾನು ನಟನೆಯ ಸಿನಿಮಾ ಕಾರ್ಯಕ್ರಮ ಭಾಗವಹಿಸಿದ್ದಾರೆ. ಈ ಹಿಂದೆ ಸುಹಾಸ್ ನಿರ್ದೇಶನದ ಕದ್ದಚಿತ್ರ ಚಿತ್ರದ ಪ್ರಚಾರದಲ್ಲಿ ಸ್ಪಂದನಾ ಭಾಗಿಯಾಗಿದ್ದರು.

ಟ್ರೈಲರ್​ ಲಾಂಚ್​ ಬಳಿಕ ವಿಜಯ್​ ರಾಘವೇಂದ್ರ ಮಾತನಾಡಿದ್ದಾರೆ. ಇದು ತಂಡವಲ್ಲ, ಆಪ್ತರ ಬಳಗ. ಈ ಸಿನಿಮಾ‌‌ ಮಾಡೋಕೆ ಮೊದಲು ಹಿಂಜರಿದೆ. ಆದ್ರೆ ಒಳ್ಳೆ ತಂಡ ಅಂತ ಧೈರ್ಯ ಬಂತು ಎಂದು ಹೇಳಿದ್ದಾರೆ.
ನಂತರ ಇತ್ತೀಚಿನ ದಿನಗಳಲ್ಲಿ ಆದ ಘಟನೆ ನೆನೆದು ರಾಘು ಭಾವುಕರಾಗಿದ್ದಾರೆ. ನನ್ನ ಕಷ್ಟದ ಸಂದರ್ಭದಲ್ಲಿ ನೀವೆಲ್ಲ ನಿಂತಿದ್ರಿ. ತಾಯಿ ಸ್ಥಾನದಲ್ಲಿ ಇದ್ರಿ. ಯಾರೂ ಕೂಡ ಹೊರಗಿನವರು ಥರ ಇರಲಿಲ್ಲ. ನಮ್ಮ ಕುಟುಂಬದಲ್ಲಿ ನೀವು ಆಗಿಲ್ಲ, ಆದರೆ ನಿಮ್ಮ ಕುಟುಂಬದಲ್ಲಿ ನನ್ನ ಸೇರಿಸಿಕೊಂಡ್ರಿ. ಕಣ್ಣೀರು ಹಾಕಬಾರದು ಅಂತ ಇದ್ದೆ ಆದ್ರೆ ಆಗ್ತಿಲ್ಲ. ಈ ಚಿತ್ರವನ್ನ ಸ್ಪಂದನಾ ತುಂಬಾ ಇಷ್ಟ ಪಟ್ಟಿದ್ರು. ಈ ಸಂಧರ್ಭದಲ್ಲಿ ನಿರ್ಮಾಪಕನ‌ ಜೊತೆ ನಿಲ್ಲಬೇಕು. ನಿಮ್ಮೆಲ್ಲರ ಶಕ್ತಿ ಸಿಕ್ಕಿದೆ. ನಿಮ್ಮೆಲ್ಲರ ಹಾರೈಕೆ ಇದೆ. ನನ್ನ ಮಗನ ಜೊತೆ ಸಾಗೋಕೆ ನಿಮ್ಮ ಆಶೀರ್ವಾದ ಇದೆ ಅಂತ ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಇಂದು ಸ್ಪಂದನಾ- ವಿಜಯ್ ರಾಘವೇಂದ್ರ 16ನೇ ವಿವಾಹ ವಾರ್ಷಿಕೋತ್ಸವಾಗಿದ್ದು, ಬೆಳಗ್ಗೆ ವಿಜಯ್​ ಸೋಶಿಯಲ್ ಮೀಡಿಯಾದಲ್ಲಿ ಸ್ಪಂದನಾ ನೆನೆದು ಭಾವುಕವಾಗಿ ಪೋಸ್ಟ್ ಹಾಕಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಜಯ್ ರಾಘವೇಂದ್ರ ನಟನೆಯ ‘ಕದ್ದ ಚಿತ್ರ’ದ ಟ್ರೈಲರ್​ ಲಾಂಚ್​.. ಸ್ಟೇಜ್​ ಮೇಲೆ ನಿಂತು ಭಾವುಕರಾದ ಚಿನ್ನಾರಿ ಮುತ್ತ

https://newsfirstlive.com/wp-content/uploads/2023/08/Vijay-Raghavendra-2.jpg

Load More