newsfirstkannada.com

ದರ್ಶನ್ ಗ್ಯಾಂಗ್ ಕೊಲೆ ಕೇಸ್.. ಮೌನ ಮುರಿದ ವಿಜಯ್ ರಾಘವೇಂದ್ರ ಬೇಸರ; ಏನಂದ್ರು?

Share :

Published July 11, 2024 at 8:58pm

Update July 11, 2024 at 9:01pm

    ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಅಂಡ್​ ಗ್ಯಾಂಗ್​ ಜೈಲಿಗೆ

    ದರ್ಶನ್ ಬಂಧನದ ಬಳಿಕ ನಟ ವಿಜಯ್ ರಾಘವೇಂದ್ರ ಮೊದಲ ಪ್ರತಿಕ್ರಿಯೆ

    ಡೆವಿಲ್ ಚಿತ್ರ ನಿಂತಿರೋದು ಮಿಲನಾ ಪ್ರಕಾಶ್​​ ಅವರಿಗೂ ನೋವು ತಂದಿದೆ

ರೇಣುಕಾಸ್ವಾಮಿ ಕ್ರೂರ ಕೊಲೆ ಕೇಸ್​ನಲ್ಲಿ ದರ್ಶನ್​ ಸೇರಿ ಒಟ್ಟು 17 ಆರೋಪಿಗಳು ಜೈಲಿನಲ್ಲಿದ್ದಾರೆ. ನಟ ದರ್ಶನ್​ ಜೈಲಿಗೆ ಸೇರುತ್ತಿದ್ದಂತೆ ಸ್ಯಾಂಡಲ್​ವುಡ್​ ನಟ ನಟಿಯರು, ಕುಟುಂಬಸ್ಥರು, ಆತ್ಮೀಯರು ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಡುತ್ತಿದ್ದಾರೆ. ಈ ಬಗ್ಗೆ ಹಲವಾರು ಮಂದಿ ಭಿನ್ನ, ವಿಭಿನ್ನವಾದ ಪ್ರತಿಕ್ರಿಯೆಗಳನ್ನು ಕೊಡುತ್ತಿದ್ದಾರೆ.

ಇದನ್ನೂ ಓದಿ: ಡಿವೋರ್ಸ್ ವದಂತಿ ಬೆನ್ನಲ್ಲೇ ಪಾಂಡ್ಯ ಹೆಸರಿನ ಜೊತೆ ತಳುಕು ಹಾಕಿಕೊಂಡ ಸುಂದರಿ..!

ನಟ ದರ್ಶನ್​ ಜೈಲು ಸೇರಿದ ಬಳಿಕ ಇದೇ ಮೊದಲ ಬಾರಿಗೆ ಸ್ಯಾಂಡಲ್​ವುಡ್ ನಟ ವಿಜಯ್ ರಾಘವೇಂದ್ರ ಅವರು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ಮಾತಾಡಿರುವ ವಿಜಯ್ ರಾಘವೇಂದ್ರ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿ ಆಗಿರೋದು ನೋವು ತರಿಸಿದೆ. ದರ್ಶನ್ ನಮ್ಮ‌ ಕುಟುಂಬದವ್ರು.‌ ನಮ್ಮ ಸೀನಿಯರ್. ದಯವಿಟ್ಟು ಈ ವಿಚಾರದಿಂದ ಎಲ್ಲರೂ ಹೊರಗೆ ಬರಬೇಕು. ಇದನ್ನು ನಾನು ಬೆಳವಣಿಗೆ ಅಂತಾ ಕರಿಯೋಕೆ ಇಷ್ಟ ಪಡಲ್ಲ. ಎಲ್ಲಿ ನೋಡಿದ್ರೂ ಬರೀ ರೇಣುಕಾಸ್ವಾಮಿ ಪ್ರಕರಣ ಸುದ್ದಿಯೇ ಓಡಾಡ್ತಿದೆ. ಡೆವಿಲ್ ಸಿನಿಮಾದ ನಿಂತಿರೋದು ಮಿಲನಾ ಪ್ರಕಾಶ್​​ ಅವರಿಗೂ ನೋವು ತಂದಿದೆ ಎಂದಿದ್ದಾರೆ.

ಏನಿದು ಪ್ರಕರಣ..?

ದರ್ಶನ್​ ಆಪ್ತೆ ಪವಿತ್ರಾಗೆ ಇನ್‌ಸ್ಟಾಗ್ರಾಂ ಮೂಲಕ ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಪದೇ ಪದೇ ಅಶ್ಲೀಲ ಸಂದೇಶಗಳನ್ನ ಕಳಿಸುತ್ತಾ ಇದ್ದ. ಈ ವಿಚಾರ ನಟ ದರ್ಶನ್​ ಅಂಡ್​ ಗ್ಯಾಂಗ್​ಗೆ ಗೊತ್ತಾಗುತ್ತಿದ್ದಂತೆ ಪ್ಲಾನ್​ ಮಾಡಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆ ತಂದು ಆತನನ್ನು ಕ್ರೂರವಾಗಿ ಕೊಲೆ ಮಾಡಿದ್ದರು. ರೇಣುಕಾಸ್ವಾಮಿಯ ಮೃತದೇಹ ಪತ್ತೆಯಾಗುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ತೀವ್ರ ತನಿಖೆ ನಡೆಸಿದ್ದರು. ಈ ಕೊಲೆ ಹಿಂದೆ ಯಾರೆಲ್ಲಾ ಭಾಗಿಯಾಗಿದ್ದರು ಎಂಬುವುದರ ಬಗ್ಗೆ ಪತ್ತೆ ಹಚ್ಚಿ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಗ್ಯಾಂಗ್ ಕೊಲೆ ಕೇಸ್.. ಮೌನ ಮುರಿದ ವಿಜಯ್ ರಾಘವೇಂದ್ರ ಬೇಸರ; ಏನಂದ್ರು?

https://newsfirstlive.com/wp-content/uploads/2024/07/DARSHAN-2.jpg

Load More