ದುಃಖ ತಾಳಲಾರದೇ ಅಶ್ವಿನ್ ಪುನೀತ್ ರಾಜ್‌ಕುಮಾರ್ ಕಣ್ಣೀರು
ಒಬ್ಬರೊಬ್ಬರನ್ನು ಸಮಾಧಾನ ಮಾಡುತ್ತಾ ಅತ್ತ ಅಪ್ಪು ಪುತ್ರಿಯರು
ಸ್ಪಂದನಾ ಅಂತಿಮ ದರ್ಶನ ಪಡೆದ ಸ್ಯಾಂಡಲ್‌ವುಡ್ ತಾರೆಯರು
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಸಾವು ಅವರ ಆತ್ಮೀಯರು, ಅವರನ್ನು ಬಹಳಷ್ಟು ಹತ್ತಿರದಿಂದ ನೋಡಿದವರಿಗೆ ಅಪಾರ ನೋವು ತಂದಿದೆ. ಅಂತಿಮ ದರ್ಶನಕ್ಕೆ ಆಗಮಿಸಿದ ಹಲವರು ದುಃಖ ತಾಳಲಾರದೇ ಕಣ್ಣೀರು ಹಾಕಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ಬಿ.ಕೆ ಶಿವರಾಂ ನಿವಾಸದಲ್ಲಿ ನಟ ವಿಜಯ್ ರಾಘವೇಂದ್ರರವರ ಪತ್ನಿ ಸ್ಪಂದನಾ ಅವರ ಮೃತದೇಹದ ಅಂತಿಮ ದರ್ಶನವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಕುಟುಂಬ ಪಡೆದರು. ಈ ವೇಳೆ ಇಡೀ ಕುಟುಂಬ ಕಂಬನಿಯಲ್ಲೇ ಮುಳುಗಿತು. ತಮ್ಮ ತಮ್ಮಲ್ಲಿಯೇ ಒಬ್ಬರೊಬ್ಬರನ್ನು ಸಮಾಧಾನ ಮಾಡುತ್ತಾ ಕಣ್ಣೀರು ಹಾಕುತ್ತಿರುವ ದೃಶ್ಯ ನಿಜಕ್ಕೂ ನೋಡಿದವರ ಮನ ಕಲಕುವಂತೆ ಮಾಡಿದೆ.
ಸ್ಪಂದನಾ ಅವರ ಮೃತದೇಹದ ದರ್ಶನ ಪಡೆಯುತ್ತಿದ್ದಂತೆ ದುಃಖ ತಾಳಲಾರದೇ ಅಶ್ವಿನ್ ಪುನೀತ್ ರಾಜ್‌ಕುಮಾರ್ ಅವರು ನಟ ಶ್ರೀಮುರಳಿರನ್ನು ನೋಡುತ್ತಾ ಬಿಕ್ಕಿ ಬಿಕ್ಕಿ ಅತ್ತರು. ಮಕ್ಕಳಾದ ಧೃತಿ ಮತ್ತು ವಂದಿತಾ ಪುನೀತ್ ರಾಜ್‌ಕುಮಾರ್ ಅವರು ತಬ್ಬಿಕೊಂಡು ಅಳುತ್ತಲೇ ಇದ್ದರು. ವಿನಯ್ ರಾಜ್‌ಕುಮಾರ್ ಕೂಡ ಕಂಬನಿ ಮಿಡಿದರು.
ಬ್ಯಾಂಕಾಕ್‌ನಲ್ಲಿ ಸಾವನ್ನಪ್ಪಿದ ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ. ಇಂದು ಮಧ್ಯಾಹ್ನ ಸ್ಪಂದನಾ ಅವರ ಅಂತ್ಯಕ್ರಿಯೆ ನೆರವೇರಲಿದ್ದು, ಕುಟುಂಬಸ್ಥರು, ಗಣ್ಯರು, ಸ್ಯಾಂಡಲ್‌ವುಡ್ ತಾರೆಯರು, ಸಾರ್ವಜನಿಕರು, ಸ್ಪಂದನಾ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಬಿ.ಕೆ ಶಿವರಾಮ್ ಅವರ ನಿವಾಸದ ಮುಂದೆ ಸ್ಪಂದನಾ ಅವರ ಅಂತಿಮ ದರ್ಶನಕ್ಕೆ ಗಣ್ಯರ ದಂಡೇ ಹರಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಸ್ಪಂದನಾ ಪಾರ್ಥಿವ ಶರೀರವನ್ನು ನೋಡಿದ ಅಶ್ವಿನಿ ಬಾವುಕರಾದ್ರೆ, ಅಪ್ಪು ಪುತ್ರಿಯರು ಕಣ್ಣೀರು ಹಾಕಿದ್ದಾರೆ. #newsfirstlive #NewsFirstKan #Ashwinipuneethrajkumar #spandanavijay #spandanaraghavendra… pic.twitter.com/8qfgr4hFZK
— NewsFirst Kannada (@NewsFirstKan) August 9, 2023