newsfirstkannada.com

ಬ್ಯಾಂಕಾಕ್​ನಿಂದ ಅಮ್ಮನ ಗಿಫ್ಟ್​ಗಾಗಿ ಕಾದಿದ್ದ ಪುತ್ರ.. ಶೌರ್ಯನ ಭವಿಷ್ಯಕ್ಕಾಗಿ ಸ್ಪಂದನಾ ತಯಾರಿ ಹೇಗಿತ್ತು?

Share :

09-08-2023

    ತಂದೆ-ತಾಯಿಯಂತೆ ಸೈಲೆಂಟ್ ‘ಚಿನ್ನಾರಿ ಮುತ್ತ’ನ ಮಗ

    ಮಗನ ವಿಚಾರದಲ್ಲಿ ಸ್ಪಂದನಾಗಿತ್ತು ‘ಆ’ ದೊಡ್ಡ ಕನಸು

    ಇಂದು ಮಧ್ಯಾಗ್ನ ಹರಿಶ್ಚಂದ್ರ ಘಾಟ್​​ನಲ್ಲಿ ಅಂತ್ಯಕ್ರಿಯೆ

ಜಗತ್ತಿನಲ್ಲೇ ಸ್ವಾರ್ಥವೇ ಇಲ್ಲದ ಪ್ರೀತಿ ಅಂದ್ರೆ ಅದು ತಾಯಿ ಪ್ರೀತಿ ಮಾತ್ರ. ಅಮ್ಮನ ಪ್ರೀತಿಗೆ ಯಾವತ್ತೂ ಬೆಲೆ ಕಟ್ಟೋಕ್ಕಾಗೋದಿಲ್ಲ. ಬೇರೊಬ್ಬರಲ್ಲಿ ಅಂಥಾ ಪ್ರೀತಿ ನಿರೀಕ್ಷಿಸಲೂ ಆಗೋದಿಲ್ಲ. ಹೀಗಾಗಿಯೇ, ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಅನ್ನೋ ಗಾದೆ ಮಾತು ಹುಟ್ಕೊಂಡಿದೆ. ಅಷ್ಟಕ್ಕೂ ನಾವ್ ಈ ಮಾತುಗಳನ್ನ ಹೇಳೋದಕ್ಕೆ ಕಾರಣ ಸ್ಪಂದನಾ. ಸ್ಪಂದನಾ ಹಾಗೂ ವಿಜಯ್​ಗೆ ಒಬ್ಬ ಪುತ್ರನಿದ್ದು, ಆತನ ಬಗ್ಗೆ ಕನಸುಗಳ ಶಿಖರವನ್ನೇ ಕಟ್ಟಿಕೊಂಡಿದ್ದರು ಸ್ಪಂದನಾ. ಆತನ ಭವಿಷ್ಯಕ್ಕಾಗಿ ಸಾಕಷ್ಟು ಪ್ಲಾನ್​ಗಳನ್ನ ಮಾಡಿಕೊಂಡಿದ್ದರು. ಮಗನನ್ನ ಗಂಡನಂತೆ ಬೆಳ್ಳಿ ತೆರೆ ಮೇಲೆ ನೋಡುವ ಆಸೆ ಇಟ್ಕೊಂಡಿದ್ರು.

ಇದನ್ನೂ ಓದಿ: ‘ವಿಧಿಯ ಆಟ ನಿಜಕ್ಕೂ ಕ್ರೂರ, ಮಿಸ್​ ಯೂ ಅಮ್ಮ..’ ಮಗನ ವಿಚಾರದಲ್ಲಿ ಸ್ಪಂದನಾಗೆ ಇತ್ತು ‘ಆ’ ದೊಡ್ಡ ಕನಸು..!

ಇಡೀ ಜಗತ್ತಿನಲ್ಲಿ ಬೆಲೆ ಕಟ್ಟೋದಕ್ಕೆ ಸಾಧ್ಯವಿಲ್ಲದ ಪ್ರೀತಿ ಅಂದ್ರೆ ಅದು ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿಯ ಪ್ರೀತಿಯಾಗಿರುತ್ತೆ. ಆ ಪ್ರೀತಿ ಅದೆಷ್ಟು ನಿರ್ಮಲವಾಗಿರುತ್ತೆ ಅಂದ್ರೆ ಅಲ್ಲಿ ಎಲ್ಲಿಯೂ ಸ್ವಾರ್ಥ ಅನ್ನೋದು ಅಲ್ಲಿ ಸುಳಿಯೋದಿಲ್ಲ. ಪ್ರತಿ ದಿನ ಪ್ರತಿ ಕ್ಷಣ ತಾಯಿಯಾದವ್ಳು ತಾನು ಚೆನ್ನಾಗಿ ಇರ್ಬೇಕು ಅನ್ನೋದಕ್ಕಿಂತ ತನ್ನ ಮಕ್ಕಳು ಅತ್ಯುತ್ತಮ ಜೀವನ ನಡೆಸ್ಬೇಕು ಅಂತಾನೇ ಯೋಚಿಸ್ತಾಳೆ. ದೇವರ ಮುಂದೆ ಕೈಮುಗಿದು ನಿಂತ್ರೆ, ತನ್ಗೆ ಒಳ್ಳೆಯದಾಗ್ಲಿ ಅನ್ನೋದನ್ನು ಬಿಟ್ಟು ಮೊದಲು ತನ್ನ ಮಕ್ಕಳಿಗೆ ಒಳ್ಳೆಯದಾಗ್ಲಿ ಅಂತಾ ಬೇಡಿಕೊಳ್ತಿರ್ತಾಳೆ. ಮಕ್ಕಳು ಎಡವಿ ಬಿದ್ರೆ ಆಕೆಯ ಕರಳು ಚುರ್‌ ಅನ್ನುತ್ತೆ. ಮಕ್ಕಳು ಯಶಸ್ಸು ಸಾಧಿಸಿದ್ರೆ ಜಗತ್ತಿನಲ್ಲಿ ಯಾರೂ ಪಡದ ಖುಷಿ ಪಡ್ತಾಳೆ. ಒಟ್ಟಾರೆ ಹೇಳ್ಬೇಕು ಅಂದ್ರೆ ತಾಯಿಯಾದವ್ಳಿಗೆ ತನ್ನ ಮಕ್ಕಳೇ ಪ್ರಪಂಚ, ಮಕ್ಕಳೇ ಸರ್ವಸ್ವ. ಅಂತಹ ಒಬ್ಬ ಹೃದಯವಂತ ತಾಯಿ ಮಗನನ್ನ ಅಗಲಿದ್ದಾಳೆ. ಸ್ಪಂದನಾ ವಿಜಯ್ ರಾಘವೇಂದ್ರಗೆ ಅದೆಷ್ಟು ಬೆಸ್ಟ್ ವೈಫ್ ಆಗಿದ್ರೋ, ತಮ್ಮ ಮಗನಿಗೂ ಬೆಸ್ಟ್ ಮದರ್ ಅಂತಾ ಅನಿಸಿಕೊಂಡಿದ್ರು.

ಬ್ಯಾಂಕಾಕ್​ನಿಂದ  ಅಮ್ಮನ ಗಿಫ್ಟ್ಗಾಗಿ ಕಾದಿದ್ದ ಪುತ್ರ!?

ನಟ ವಿಜಯ್‌ ರಾಘವೇಂದ್ರ ಮತ್ತು ಸ್ಪಂದನಾ ದಂಪತಿಗೆ 14 ವರ್ಷದ ಶೌರ್ಯ ಎಂಬ ಪುತ್ರ ಇದ್ದಾನೆ. ಹೈಸ್ಕೂಲ್‌ನಲ್ಲಿ ಓದ್ತಿರೋ ಶೌರ್ಯನಿಗೆ ತಾಯಿ ಅಂದ್ರೆ ಎಲ್ಲಿಲ್ಲದ ಪ್ರೀತಿ. ತನ್ಗೆ ಏನೇ ಬೇಕು ಅಂದ್ರೂ ಅದನ್ನು ಮೊದಲು ಕೇಳುವುದೇ ಅಮ್ಮನ ಬಳಿಯಾಗಿತ್ತಂತೆ. ಅದ್ಯಾವಾಗ ಅಮ್ಮ ಕೊಡಿಸಲ್ಲ ಅಂತಾ ಗೊತ್ತಾಗ್ತಾ ಇತ್ತೋ ಆವಾಗ ಮಾತ್ರ ತಂದೆ ವಿಜಯ್‌ ಬಳಿ ಹೋಗಿ ಕೇಳಿ ಕೊಡಿಸ್ಕೊಳ್ಳುತ್ತಿದ್ದ. ಇಲ್ಲಿ ಸ್ಪಂದನಾಗೆ ಮಗನಿಗೆ ಏನು ಬೇಕು ಏನು ಬೇಡ ಅನ್ನೋದು ಚೆನ್ನಾಗಿ ಗೊತ್ತಿತ್ತು. ಮಗನನ್ನು ತಾವು ಅಂದುಕೊಂಡತೆ ಬೆಳೆಸ್ಬೇಕು ಅನ್ನೋ ಕನಸು, ಹಠ, ಛಲ ಎಲ್ಲವೂ ಇತ್ತು. ಹೀಗಾಗಿ ಮಗ ಕೇಳಿದ್ದನೆಲ್ಲ ಕೊಟ್ರೆ ಆತನಿಗೆ ಕಷ್ಟ ಸುಖ ಏನು ಅನ್ನೋದು ಅರಿವಾಗಲ್ಲ. ಹೀಗಾಗಿ ಏನು ಅಗತ್ಯ ಇರುತ್ತೋ ಅದನ್ನು ಮಾತ್ರ ಕೊಡಿಸ್ಬೇಕು ಅನ್ನೋದು ಸ್ಪಂದನಾ ಅವ್ರ ದೃಢವಾದ ನಿಲುವಾಗಿತ್ತು. ಮಗನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ರು ಚಿನ್ನಾರಿಮುತ್ತನ ಪತ್ನಿ, ತಾವು ಎಲ್ಲಿಗೆ ಹೋಗುವುದಿದ್ರೂ ಮಗನನ್ನು ಕರೆದುಕೊಂಡು ಹೋಗ್ತಿದ್ರು. ಒಮ್ಮೆ ಏನಾದ್ರೂ ಸಾಧ್ಯವಾಗಿಲ್ಲ, ಅನಿವಾರ್ಯ ಅಂತಾದ್ರೆ ವಾಪಸ್‌ ಬರ್ತಾ ಮಗನಿಗೆ ಏನಾದ್ರೂ ಸರ್ಪ್ರೈಸ್‌ ಗಿಫ್ಟ್‌ ತಂದು ಕೊಡ್ತಿದ್ದದ್ದನ್ನ ರೂಢಿಸಿಕೊಂಡಿದ್ರು.

ಸ್ಪಂದನಾಗೆ ಒಂದು ವಿಶೇಷ ಹವ್ಯಾಸವಿತ್ತು. ಅದೇನ್‌ ಅಂದ್ರೆ, ಚಿಕ್ಕ ಸುಳಿವು ಸಿಗದಂತೆ ವಿಜಯ್‌ಗೆ ಮತ್ತು ಮಗನಿಗೆ ಗಿಫ್ಟ್‌ಗಳನ್ನು ತಂದುಕೊಡೋದಾಗಿತ್ತು. ಅದ್ರಲ್ಲಿಯೂ ವಿಜಯ್‌ ಮತ್ತು ಶೌರ್ಯನ ಬರ್ತ್‌ ಡೇಗೆ ಅಂತಾ ಸ್ಪೆಷಲ್‌ ಗಿಫ್ಟ್‌ ಇದ್ದೇ ಇರ್ತಾಯಿತ್ತು. ಆದ್ರೆ, ಬರ್ತ್‌ ಡೇಗೆ ಅಮ್ಮ ಏನು ಗಿಫ್ಟ್‌ ಕೊಡ್ತಾರೆ ಅಂತಾ ಅಂದಾಜು ಮಾಡಲು ಶೌರ್ಯನಿಗೆ ಗೆಸ್‌ ಮಾಡಲು ಸಾಧ್ಯವಾಗ್ತಾ ಇರ್ಲಿಲ್ಲ. ಯಾಕಂದ್ರೆ ಆತ ಗೆಸ್‌ ಮಾಡೋದೇ ಒಂದಾಗಿದ್ರೆ ಅಮ್ಮ ಕೊಡ್ತಾ ಇದ್ದ ಗಿಫ್ಟ್‌ ಇನ್ನೇನೋ ವಿಶೇಷತೆಯನ್ನು ಹೊತ್ತಿರೋದಾಗಿರ್ತಾ ಇತ್ತು. ಹಾಗೇ ವಿಜಯ್‌ ರಾಘವೇಂದ್ರವ್ರಿಗೂ ಅಷ್ಟೇ ಸ್ಪಂದನಾ ಏನೇದ್ರೂ ಗಿಫ್ಟ್‌ ಕೊಡ್ತಾರೆ ಅನ್ನೋದು ಗೊತ್ತಾಗ್ತಾಯಿತ್ತು. ಬಟ್‌, ಏನ್‌ ಗಿಫ್ಟ್‌ ಕೊಡ್ತಾರೆ ಅನ್ನೋದನ್ನು ಮಾತ್ರ ಊಹಿಸಲು ಸಾಧ್ಯವಾಗ್ತಿರ್ಲಿಲ್ಲ. ಈ ಬಗ್ಗೆ ಒಮ್ಮೆ ಖಾಸಗಿ ಚಾನೆಲ್‌ ಕಾರ್ಯಕ್ರಮ ಒಂದರಲ್ಲಿ ಸ್ವತಃ ವಿಜಯ್‌ ರಾಘವೇಂದ್ರ ಹೇಳಿಕೊಂಡಿದ್ದಾರೆ. ತಮ್ಮ ಪತ್ನಿ ಗಿಫ್ಟ್‌ ಕೊಡುವುದ್ರಲ್ಲಿ ಮಾಸ್ಟರ್‌ ಅಂತಾ ಮುಕ್ತ ಕಂಠದಿಂದ ಪ್ರಶಂಸಿದ್ದಾರೆ.

ದುರಾದೃಷ್ಟವಶಾತ್ ಕಾಲ ತನ್ನ ಕ್ರೂರತನ ಪ್ರದರ್ಶಿಸಿ ಬಿಟ್ಟಿದೆ

ಸಾಮಾನ್ಯವಾಗಿ ಸ್ಪಂದನಾ, ವಿಜಯ್‌ ಮತ್ತು ಪುತ್ರ ಶೌರ್ಯ ಮೂವರೂ ವಿದೇಶ ಪ್ರವಾಸ ಮಾಡ್ತಿದ್ರು. ಈ ಬಾರಿ ಏನಾಗಿತ್ತು ಅಂದ್ರೆ ಸ್ಪಂದನಾ ಫ್ಯಾಮಿಲಿಯವ್ರ ಜೊತೆಗೆ, ಅಂದ್ರೆ ಬರೀ ಹೆಣ್ಣು ಮಕ್ಕಳ ಜೊತೆಗೆ ಬ್ಯಾಂಕಾಕ್ ಪ್ರವಾಸ ಹೊರಟಿದ್ರು. ತಮಗೆ ಶೂಟಿಂಗ್‌ ಇದ್ದ ಕಾರಣ ವಿಜಯ್‌ಗೆ ಸ್ಪಂದನಾ ಜೊತೆಗೆ ಹೋಗಲು ಸಾಧ್ಯವಾಗಿರ್ಲಿಲ್ಲ. ಶೌರ್ಯನಿಗೂ ಹೋಗಲು ಆಗಿರಲಿಲ್ಲ. ಹೀಗಾಗಿ ಸ್ಪಂದನಾ ಮಾತ್ರ ಫ್ಯಾಮಿಲಿಯವ್ರ ಜೊತೆ ಸೇರಿ ಕಳೆದ ಸೋಮವಾರವೇ ಬ್ಯಾಂಕಾಕ್‌ ತಲುಪಿದ್ರು. ಎಲ್ಲವೂ ಚೆನ್ನಾಗಿ ನಡೆದಿದ್ದರೆ, ಭಾನುವಾರವೇ ಅವ್ರು ಬೆಂಗಳೂರಿಗೆ ವಾಪಸ್ ಆಗಬೇಕಿತ್ತು. ಬಟ್, ವಿಧಿಯಾಟ ಹೇಗಿರುತ್ತೆ ಅಂತಾ ಯಾರಿಗೆ ಹೇಳೋಕ್ಕಾಗುತ್ತೆ ಅಲ್ವಾ. ಇತ್ತ ಶೌರ್ಯಗೆ ಅಮ್ಮನಿಂದ ಏನಾದ್ರೂ ಸರ್ಪ್ರೈಸ್‌ ಫಾರಿನ್ ಗಿಫ್ಟ್‌ ಬರುತ್ತೆ ಅನ್ನೋ ನಿರೀಕ್ಷೆ ಖಂಡಿತವಾಗಿಯು ಇದ್ದೇ ಇತ್ತು. ದುರಾದೃಷ್ಯವಶಾತ್‌ ಕಾಲ ತನ್ನ ಕ್ರೂರತನವನ್ನ ಪ್ರದರ್ಶಿಸಿ ಬಿಟ್ಟಿದ್ದಾನೆ. ಹೀಗಾಗಿ ಅಮ್ಮನ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದ ಶೌರ್ಯನಿಗೆ ಬರಸಿಡಿಲು ಬಂಡಿದಂತಾಗಿದೆ. ಪ್ರೀತಿಯ ಅಮ್ಮ ಇನ್ನಿಲ್ಲ ಅನ್ನೋದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ದುಃಖಿಸುವಂತಾಗಿದೆ.

ಮಗನ ನಟನಾಗಿಸೋ ಕನಸು ಕಟ್ಟಿಕೊಂಡಿದ್ದ ಸ್ಪಂದನಾ

ಸ್ಪಂದನಾ ತಂದೆ ನಿವೃತ್ತ ಪೊಲೀಸ್‌ ಆಫೀಸರ್‌ ಬಿ.ಕೆ.ಶಿವರಾಂ ಅನ್ನೋದು ಈಗಾಗಲೇ ಗೊತ್ತಿರೋ ವಿಚಾರ. ಚಿಕ್ಕಪ್ಪ ಬಿ.ಕೆ.ಹರಿಪ್ರಸಾದ್‌ ಮತ್ತು ಸಹೋದರ ರಕ್ಷಿತ್‌ ಶಿವರಾಂ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪತಿ ವಿಜಯ್‌ ರಾಘವೇಂದ್ರ ಇಡೀ ಕುಟುಂಬ ಸಿನಿಮಾ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದೆ. ಹೀಗಾಗಿ ಸ್ಪಂದನಾಗೇ ಪೊಲೀಸ್‌ ಇಲಾಖೆ ಬಗ್ಗೆ, ರಾಜಕೀಯದ ಬಗ್ಗೆ, ಸಿನಿಮಾ ಕ್ಷೇತ್ರದ ಬಗ್ಗೆ ಎಲ್ಲವನ್ನು ಚೆನ್ನಾಗಿಯೇ ಗೊತ್ತು. ಇದೇ ಕಾರಣದಿಂದ ಮುಂದೊಂದು ದಿನ ತಮ್ಮ ಪುತ್ರ ಶೌರ್ಯನನ್ನ ಸಿನಿಮಾ ಕ್ಷೇತ್ರಕ್ಕೆ ಪರಿಚಯಿಸುವ ಕನಸು ಹೊತ್ತುಕೊಂಡಿದ್ರು ಅಂತಲೇ ಹೇಳಲಾಗ್ತಿದೆ. ಸಹಜವಾಗಿ ಯಾವುದೇ ತಾಯಿಗೆ ಆದ್ರೂ ತಮ್ಮ ಮಗ ಮುಂದೆ ಹೀಗೆ ಆಗ್ಬೇಕು, ಹಾಗೇ ಆಗ್ಬೇಕು ಅನ್ನೋ ಅಚಲವಾದ ಆಸೆ ಇದ್ದೇ ಇರುತ್ತೆ ತಾವಂದುಕೊಂಡಂತೆ ಮಗ ಸಾಗಿದ್ರೆ ಅವರಷ್ಟು ಖುಷಿ ಪಡೋರು ಜಗತ್ತಿನಲ್ಲಿ ಮತ್ತೊಬ್ಬರು ಸಿಗಲು ಸಾಧ್ಯವೇ ಇಲ್ಲ. ಇಲ್ಲಿ ಸ್ಪಂದನಾಗೆ ತಮ್ಮ ಮಗನನ್ನು ಸ್ಯಾಂಡಲ್‌ವುಡ್‌ ಪರಿಚಯಿಸ್ಬೇಕು ಅನ್ನೋ ಅಭಿಲಾಷೆ ಇತ್ತಂತೆ. ಹೀಗಾಗಿ ಖ್ಯಾತ ನಿರ್ದೇಶಕರಾಗಿರೋ ನಾಗಾಭರಣ ಅವ್ರ ಪುತ್ರನ ಜೊತೆ ಆ್ಯಕ್ಟಿಂಗ್‌ ಕಲಿಯಲು ಕಳುಹಿಸ್ತಿದ್ರಂತೆ.

ಸಿನಿ ದುನಿಯಾದಲ್ಲಿ ಮಗ ಮಿಂಚೋದನ್ನ ತಾಯಿ ನೋಡಲಿಲ್ಲ

ಶೌರ್ಯನಿಗೆ ವಿಜಯ್‌ ಆ್ಯಕ್ಷನ್‌ ಕಟ್‌ ಹೇಳ್ಬೇಕು ಅನ್ನೋ ಆಸೆಯೂ ಇತ್ತು. ಇತ್ತೀಚೆಗೆ ಸ್ಪಂದನಾ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ರು. ಬಹುಶಃ ಹೀಗಾಗಿ ತಮ್ಮ ನಿರ್ಮಾಣದ ಸಿನಿಮಾದಲ್ಲಿಯೇ ಮುಂದೊಂದು ದಿನ ಮಗ ಶೌರ್ಯನನ್ನು ಲಾಂಚ್‌ ಮಾಡೋದು, ಆ ಸಿನಿಮಾಗೆ ವಿಜಯ್‌ನಿಂದ ನಿರ್ದೇಶನ ಮಾಡಿಸೋ ಕನಸು ಸ್ಪಂದನಾಗೆ ಇದ್ದರೂ ಇದ್ದಿರ್ಬಹುದು. ಶೌರ್ಯನಿಗೆ ತಂದೆ, ಚಿಕ್ಕಪ್ಪ ಇಬ್ಬರೂ ಸಿನಿಮಾ ಕ್ಷೇತ್ರದಲ್ಲಿ ಸ್ಟಾರ್‌ ಹೀರೋಗಳು ಇರೋದ್ರಿಂದ ಒಂದು ರೀತಿಯಲ್ಲಿ ರಕ್ತಗತವಾಗಿ ಸಿನಿಮಾ ಕ್ಷೇತ್ರದ ನಂಟು ಬೆಳೆದಿತ್ತು. ಎಲ್ಲವೂ ನಿರೀಕ್ಷೆಯಂತೆ ನಡೆದ್ರೆ ಬಹುಶಃ ಇನ್ನೇನು ಕೆಲವೇ ವರ್ಷಗಳಲ್ಲಿ ಶೌರ್ಯ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗೋದನ್ನು ಸ್ಪಂದನಾ ಕಣ್ಣು ತುಂಬಿಕೊಳ್ತಿದ್ರು. ಸಿನಿ ದುನಿಯಾದಲ್ಲಿ ಮಗ ಮಿಂಚೋದನ್ನ ಆಕೆ ನೋಡೋದಕ್ಕೆ ಆಗ್ಲೇ ಇಲ್ಲ .

ತಾಯಿಗೆ ಹೀರೋ ಆಗೋ ಮೆಸೇಜ್‌ ಕೊಟ್ಟಿದ್ದ ಶೌರ್ಯ

ಮಕ್ಕಳಿಗೆ ಅಮ್ಮನ ಪ್ರೀತಿ ಬೇಕು, ಅಮ್ಮನಿಗೆ ಮಕ್ಕಳ ಬೆಳವಣಿಗೆ ಬೇಕು. ಇಲ್ಲಿ ಶೌರ್ಯನಿಗೆ ಸ್ಪಂದನಾರ ಪ್ರೀತಿ ಇದ್ದೇ ಇತ್ತು. ಒಂದು ರೀತಿಯಲ್ಲಿ ಶೌರ್ಯನ ಮೇಲೆ ಸ್ಪಂದನಾ ಪ್ರಾಣವನ್ನೇ ಇಟ್ಟುಕೊಂಡಿದ್ರು. ತಮ್ಮಿಂದ ಅದೆಷ್ಟು ಸಾಧ್ಯನೋ ಅಷ್ಟು ಪ್ರೀತಿ ಮಮತೆ ಕರುಣೆ ಎಲ್ಲವನ್ನು ಮಗನಿಗಾಗಿ ದಾರೆ ಎರೆಯುತ್ತಿದ್ರು. ಶೌರ್ಯ ಕೂಡ ಅಷ್ಟೇ ಜಸ್ಟ್‌ 14 ವರ್ಷದಲ್ಲಿಯೇ ಮುಂದೊಂದು ದಿನ ತಾನು ಚಿತ್ರರಂಗದಲ್ಲಿ ಕಾಣಿಸಿಕೊಳ್ತಿನಿ ಅನ್ನೋ ಮೆಸೇಜ್‌ ಅನ್ನು ತಾಯಿಗೆ ಕೊಟ್ಟಿದ್ರು. ಇದ್ರಿಂದ ಸ್ಪಂದನಾ ಮಗನ ಬಗ್ಗೆ ತುಂಬಾ ಖುಷಿ ಖುಷಿಯಾಗಿಯೇ ಇದ್ರು. ಬಟ್‌, ಜೀವನ ಎಲ್ಲವೂ ಚೆನ್ನಾಗಿ ಸಾಗ್ತಿದೆ ಅಂತಾ ಅಂದುಕೊಳ್ತಿರೋವಾಗ್ಲೇ ವಿಧಿಯಾಟ ನಡೆದು ಬಿಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ಯಾಂಕಾಕ್​ನಿಂದ ಅಮ್ಮನ ಗಿಫ್ಟ್​ಗಾಗಿ ಕಾದಿದ್ದ ಪುತ್ರ.. ಶೌರ್ಯನ ಭವಿಷ್ಯಕ್ಕಾಗಿ ಸ್ಪಂದನಾ ತಯಾರಿ ಹೇಗಿತ್ತು?

https://newsfirstlive.com/wp-content/uploads/2023/08/SPANDANA_VIJAY_SHOURYA.jpg

Load More